ವಿಜಯಪುರ(ಮಾ.11): ವ್ಯಕ್ತಿಯೋರ್ವ ತಂದೆ, ತಾಯಿ ಹಾಗೂ ಅಕ್ಕನನ್ನ  ಹತ್ಯೆಗೈದ ಘಟನೆ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಉಮದಿ ಬಳಿ ಇಂದು(ಬುಧವಾರ) ನಡೆದಿದೆ. ತಂದೆ ಗುರುಲಿಂಗಪ್ಪ ಅರಕೇರಿ(82), ತಾಯಿ ನಾಗವ್ವ ಅರಕೇರಿ(75) ಹಾಗೂ ಅಕ್ಕ ಸಮುದ್ರಾಬಾಯಿ(60) ಕೊಲೆಯಾದ ದುರ್ದೈವಿಗಳಾಗಿದ್ದಾರೆ.

ಸಿದ್ದಪ್ಪ ಅರಕೇರಿ ಕೊಲೆ ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಆಸ್ತಿ ವಿವಾದ ಹಿನ್ನೆಲೆಯಲ್ಲಿ ಮೂವರನ್ನ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೊಲೆ ಮಾಡಿದ ಬಳಿಕ ಸಿದ್ದಪ್ಪ ಅರಕೇರಿ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಸಂಬಂಧ ಉಮದಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.