ಬಳ್ಳಾರಿ(ಮಾ.19):  ಕೃಷಿ ಹೊಂಡಕ್ಕೆ ಹಾರಿ ಮಹಿಳೆ ಸೇರಿ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿರುಗುಪ್ಪ ತಾಲೂಕಿನ ಶಾಲಿಗನೂರು ಗ್ರಾಮದ ಬಳಿ ಜರುಗಿದೆ. ಶಾಲಿಗನೂರಿನ ನಿವಾಸಿ ನಾಗರತ್ನಾ (40), ಪುತ್ರಿ ಶ್ರುತಿ (12), ಗಿರಿಜಾ (7) ಆತ್ಮಹತ್ಯೆಗೆ ಶರಣಾದವರು. 

ಆತ್ಮಹತ್ಯೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಕೃಷಿಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಆಂಧ್ರ ಬ್ಯಾಂಕ್‌ನಲ್ಲಿ 5.60 ಲಕ್ಷ, ಖಾಸಗಿ ಲೇವಾದೇವಿಗಾರರಿಂದ 15 ಲಕ್ಷ ಸಾಲ ಮಾಡಿದ್ದರು. ಸಾಲದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಹೇಳಲಾಗುತ್ತಿದೆ.

'ಮೋದಿ ಸರ್ಕಾರದಲ್ಲಿ ಒಂದೂ ಅವ್ಯವಹಾರ ನಡೆದಿಲ್ಲ'

ವಿಷಯ ಗೊತ್ತಾಗುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಸಿರುಗುಪ್ಪ ಠಾಣೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದರು. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆಗೆ ಕಳಿಸಲಾಗಿದೆ. ಈ ಕುರಿತು ಪತಿ ವೀರೇಶಗೌಡ ಸಿರುಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ​ದ್ದಾ​ರೆ.