ವಿಜಯಪುರ(ನ.05): ಬೈಕ್‌ಗಳೆರಡು ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕ ಗಲಗಲಿ ಬಳಿ ಬುಧವಾರ ನಡೆದಿದೆ.

ಬಬಲೇಶ್ವರ ತಾಲೂಕಿನ ತೊದಲಬಾಗಿಯ ಲಕ್ಷ್ಮಣ ಮಾದರ (45), ಕಾಶಿಬಾಯಿ ಮಾದರ (40) ದಂಪತಿ ಹಾಗೂ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಪಟ್ಟಣದ ಅನಿಲ ರಾಚಣ್ಣ ಮೇಳಗೇರಿ (25) ಮೃತಪಟ್ಟಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಭೂಮಿಯಲ್ಲಿ ನಿಗೂಢ ಶಬ್ದ: ಅಂತರ್ಜಲ ಹೆಚ್ಚಳವೇ ಭೂ ಕಂಪನಕ್ಕೆ ಕಾರಣ

ಲಕ್ಷ್ಮಣ ಮಾದರ ತನ್ನ ಪತ್ನಿಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಅನಿಲ ಮೇಳಗೇರಿ ಬೈಕ್‌ನಲ್ಲಿ ಎದುರುಗಡೆಯಿಂದ ಬರುತ್ತಿದ್ದಾಗ ಈ ಅಪಘಾತ ನಡೆದಿದೆ. ಮೂವರಿಗೂ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಬೈಕ್‌ ಹಿಂಬದಿ ಸವಾರ ಗಲಗಲಿಯ ಶಿವಪೂಜಯ್ಯ ಶ್ರೀಶೈಲ ಹಿರೇಮಠ ಗಂಭೀರ ಗಾಯಗೊಂಡಿದ್ದಾನೆ. ಈತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬಬಲೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.