ರಾಯಚೂರು(ಏ.24): ಬೈಕ್‌ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದ ಹತ್ತಿರ ಇಂದು(ಶುಕ್ರವಾರ) ಬೆಳಿಗ್ಗೆ 6 ಗಂಟೆ ಸುಮಾರಿಗೆ ನಡೆದಿದೆ.

ಮೃತರನ್ನ ಸಿಂಧನೂರು ತಾಲೂಕಿನ ಮಾಟೂರು ಗ್ರಾಮದ ಪರಸಪ್ಪ(35), ಪತ್ನಿ ಕನಕಮ್ಮ(28), ಪುತ್ರಿ ನಾಗಮ್ಮ(2) ಎಂದು ಗುರುತಿಸಲಾಗಿದೆ. 

ಹೊಸದುರ್ಗದ ಬಳಿ ಕಾರು- ಬೈಕ್‌ ಡಿಕ್ಕಿ : ಇಬ್ಬರ ದುರ್ಮರಣ

ಪರಸಪ್ಪನ ಪತ್ನಿ ಕನಕಮ್ಮ ಗರ್ಭಿಣಿಯಾಗಿದ್ದು, ತವರು ಮನೆ ಚಿಕ್ಕಬೇರ್ಗಿ ಗ್ರಾಮಕ್ಕೆ ಬಂದಿದ್ದಳು. ಕನಕಮ್ಮಳ ಆರೋಗ್ಯ ತಪಾಸಣೆಗಾಗಿ ಬೈಕ್‌ನಲ್ಲಿ ದಂಪತಿ ಹಾಗೂ ಮಗಳು ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಕುರಿತು ತುರುವಿಹಾಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.