ಹೊಸದುರ್ಗ(ಏ.13): ಕಾರು ಮತ್ತು ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಹಾಗಲಕೆರೆ ಹ್ಯಾಂಡ್‌ಪೋಸ್ಟ್‌ ಬಳಿ ಭಾನುವಾರ ಬೆಳಗ್ಗೆ 6.30ರ ಸಮಯದಲ್ಲಿ ನಡೆದಿದೆ. 

ಮೃತರನ್ನು ಶ್ರೀರಾಂಪುರ ಹೋಬಳಿಯ ಕಲ್ಕೆರೆ ಗ್ರಾಮದ ರಘು(25) ಹಾಗೂ ಕದುರಪ್ಪ (45) ಎಂದು ಗುರುತಿಸಲಾಗಿದೆ. 

ಟ್ರಕ್‌ ಹರಿದು ಸ್ಥಳದಲ್ಲೇ ಮೂವರ ಸಾವು: ಭಾರಿ ಅನಾಹುತ ತಪ್ಪಿಸಿದ ಕೊರೋನಾ ವೈರಸ್‌!

ಬೆಳಗ್ಗೆ ತರಕಾರಿ ತರಲೆಂದು ಕಲ್ಕೆರೆ ಗ್ರಾಮದಿಂದ ಬೈಕ್‌ನಲ್ಲಿ ಹೊಸದುರ್ಗಕ್ಕೆ ಹೊಗುತ್ತಿದ್ದಾಗ ಕಾರು ಇವರ ಬೈಕಿಗೆ ಡಿಕ್ಕಿ ಹೊಡೆದಿದೆ. ಬೈಕ್‌ನಲ್ಲಿದ್ದ ಇವರಿಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.