Asianet Suvarna News Asianet Suvarna News

ಶಿರಸಿ: ಮೂರು ತಿಂಗಳ ಹಸುಗೂಸು ಬಿಟ್ಟು ಹೋದ ಕಟುಕ ಪೋಷಕರು..!

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಬಾಲಮಂದಿರದ ಆವರಣದಲ್ಲಿ ಹಸುಗೂಸು ಪತ್ತೆ 

Three Months Infant Found at Sirsi in Uttara Kannada grg
Author
First Published Dec 21, 2022, 9:39 PM IST

ಉತ್ತರ ಕನ್ನಡ(ಡಿ.21):  ಪೋಷಕರು ಮೂರು ತಿಂಗಳ ಹಸುಗೂಸನ್ನು ಬಿಟ್ಟು ಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಬಾಲಮಂದಿರದ ಆವರಣದಲ್ಲಿ ನಿನ್ನೆ(ಮಂಗಳವಾರ) ನಡೆದಿದೆ. ಶಿರಸಿ ಬಾಲಕರ ಬಾಲಮಂದಿರ ಆವರಣದಲ್ಲಿ ನಿನ್ನೆ ರಾತ್ರಿ ಸುಮಾರು 9 ಗಂಟೆಯ ಸುಮಾರಿಗೆ ಮಗು ಪತ್ತೆಯಾಗಿತ್ತು. 

ಮಗು ಅಳುವ ಧ್ವನಿ ಕೇಳಿದ ಬಾಲಮಂದಿರದ ಮೇಲ್ವಿಚಾರಕರು ಪರಿಶೀಲಿಸಿದಾಗ ಮಗು ಪತ್ತೆಯಾಗಿದೆ. ಬಾಲಮಂದಿರದ ಹೊರಗೆ ಸುರಕ್ಷಿತವಾದ ರೀತಿಯಲ್ಲಿ ಮಗುವನ್ನು ಇಡಲಾಗಿತ್ತು. ತಕ್ಷಣ ಮಕ್ಕಳ ರಕ್ಷಣಾ ಸಮಿತಿ ಸದಸ್ಯರಿಗೆ ಬಾಲಮಂದಿರದ ಮೇಲ್ವಿಚಾರಕರು ಮಾಹಿತಿ ನೀಡಿದ್ದರು. 

ಉತ್ತರ ಕನ್ನಡ: ಕಾರಿನೊಳಗೆ ನುಗ್ಗಿದ ಕಾಳಿಂಗ ಸರ್ಪ, ಒಳಗಿದ್ದವರು ಕಕ್ಕಾಬಿಕ್ಕಿ..!

ಮಕ್ಕಳ ಸುರಕ್ಷಾ ಸಮಿತಿ ಅಧ್ಯಕ್ಷೆ ಅನಿತಾ ಪರ್ವತೇಕರ್ ಮತ್ತು ಸದಸ್ಯೆ ಅಂಜನಾ ಭಟ್ ಸ್ಥಳಕ್ಕಾಗಮಿಸಿ ಪೋಲೀಸ್ ಇಲಾಖೆಗೆ ಮಾಹಿತಿ ನೀಡಿ ಅವರ ಸಮಕ್ಷಮದಲ್ಲಿ ಬಾಲಮಂದಿರದೊಳಗೆ ಕರೆದೊಯ್ದಿದ್ದಾರೆ ಅಧಿಕಾರಿಗಳು. ಬಳಿಕ ಮಗುವಿಗೆ ಹಾಲು ಕುಡಿಸಿ, ಆರೋಗ್ಯ ತಪಾಸಣೆಗೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
 

Follow Us:
Download App:
  • android
  • ios