*  ರೋಗಿಯನ್ನು ಹೊತ್ತೊಯ್ಯುತ್ತಿದ್ದ ವೇಳೆ ಘಟನೆ*  ಅತ್ತಿಬೆಲೆ ಠಾಣಾ ಸರಿಹದ್ದಿನ ನೆರಳೂರು ಗೇಟ್‌ ಬಳಿ ನಡೆದ ಘಟನೆ*  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು 

ಆನೇಕಲ್‌(ಸೆ.17): ಲಾರಿ ಹಾಗೂ ಆ್ಯಂಬುಲೆನ್ಸ್‌ ನಡುವೆ ಜರುಗಿದ ಭೀಕರ ಅಪಘಾತದಲ್ಲಿ ಆ್ಯಂಬುಲೆನ್ಸ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟು, ಇತರ ನಾಲ್ವರು ತೀವ್ರವಾಗಿ ಗಾಯಗೊಂಡ ಘಟನೆ ಅತ್ತಿಬೆಲೆ ಠಾಣಾ ಸರಿಹದ್ದಿನ ನೆರಳೂರು ಗೇಟ್‌ ಬಳಿ ನಡೆದಿದೆ.

ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಇಗಟ್‌ಪುರಿ ನಿವಾಸಿ ಡಾ. ಜಾದವ್‌ ಭೂಷಣ್‌ ಅಲೋಕ್‌, ತಮಿಳುನಾಡಿನ ಕಡಲೂರು ಜಿಲ್ಲೆಯ ನಲ್ಲಿಕುಪ್ಪಂ ನಿವಾಸಿ ಅನ್ವರ್‌ ಖಾನ್‌(68) ಹಾಗೂ ಕಲ್ಯಾಣ್‌ ಜಿಲ್ಲೆ ಮುಂಬೈ ನಿವಾಸಿ ತುಕಾರಾಂ ನಾಂದೇವ್‌ (38) ಸ್ಥಳದಲ್ಲೇ ಮೃತಪಟ್ಟವರು.

ಬೀದರ್‌ ಜಿಲ್ಲೆಯ ನಾರಾಯಣಪುರ ನಿವಾಸಿ ಹಾಲಿ ಹೊಸ ಮುಂಬೈನ ವಿಶ್ವ ಅಪರ್ಣ ಆಯುರ್ವೇದಿಕ್‌ ಕ್ಲಿನಿಕ್‌ ಮಾಲಿಕ ಜಿತೇಂದ್ರ ಬಿರಾದರ್‌(30), ಆಸ್ಪತ್ರೆಯ ಸಹಾಯಕರಾದ ಮುಂಬೈ ನಿವಾಸಿ ಅಶ್ಕನ್‌ ಸಮೀರ್‌ ಮೆಮೊನ(27) ಹಾಗೂ ಕಲ್ಯಾಣ್‌ ಜಿಲ್ಲೆ ಹೊಸ ಮುಂಬೈ ನಿವಾಸಿ ಯೂಸುಫ್‌ಖಾನ್‌(58) ಅಹಮ್ಮದ್‌ ರಜಾ ಅಲಿ ಇಕ್ಬಾಲ್‌ ಶೇಖ್‌ (35) ಗಾಯಗೊಂಡಿದ್ದು ಸ್ಪರ್ಷ ಆಸ್ಪತ್ರೆಗೆ ದಾಖಾಲಾಗಿದ್ದಾರೆ ಎಂದು ಅತ್ತಿಬೆಲೆ ವೃತ್ತ ನಿರೀಕ್ಷಕ ವಿಶ್ವನಾಥ್‌ ತಿಳಿಸಿದರು.

ಕೋಲಾರ; ಬಸ್-ಟಾಟಾ ಏಸ್ ನಡುವೆ ಸಿಕ್ಕಿ ಬೈಕ್ ಅಪ್ಪಚ್ಚಿ, ತಂದೆ-ಮಗಳ ದುರ್ಮರಣ

ನಾಸಿಕ್‌ ಜಿಲ್ಲೆಯಿಂದ ಚೆನ್ನೈಗೆ ಆಆ್ಯಬುಲೆನ್ಸ್‌ನಲ್ಲಿ ಪೆರಾಲಿಸಿಸ್‌ ರೋಗಿ ಅನ್ವರ್‌ಖಾನ್‌ನನ್ನು ಕರೆದೊಯ್ಯುತ್ತಿದ್ದರು. ಅದೇ ಮಾರ್ಗದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಲಾರಿಗೆ ವೇಗವಾಗಿ ಬಂದ ಆ್ಯಂಬುಲೆನ್ಸ್‌ ರಭಸದಿಂದ ಗುದ್ದಿದೆ. ಆಸ್ಪತ್ರೆಯ ಮೂಲಗಳ ಪ್ರಕಾರ ಡಾ. ಜೀತೇಂದ್ರರಿಗೆ ಉದರದ ಶಸ್ತ್ರಚಿಕಿತ್ಸೆ ನಡೆದಿದ್ದು, ಐಸಿಯುನಲ್ಲಿದ್ದಾರೆ.

ನೆರಳೂರು ಗೇಟ್‌ನಲ್ಲಿ ತಿರುವು ಇದೆ. ಇಲ್ಲಿ ಬ್ಯಾರಿಕೇಡ್‌ ವ್ಯವಸ್ಥೆ ಮತ್ತು ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಬೆಂಗಳೂರು ಎಲಿವೇಟೆಡ್‌ ಟೋಲ್‌ ನಿರ್ವಹಿಸಿಲ್ಲ ಎಂದು ಆರೋಪಿಸಲಾಗಿದೆ. ಸ್ಥಳಕ್ಕೆ ಎಸ್ಪಿ ಕೋನವಂಶಿ ಕೃಷ್ಣ ಹಾಗೂ ಅಡಿಷನಲ್‌ ಎಸ್ಪಿ ಲಕ್ಷ್ಮೀ ಗಣೇಶ್‌ ಮತ್ತು ಡಿವೈಎಸ್ಪಿ ಮಲ್ಲೇಶ್‌ ಭೇಟಿ ನೀಡಿದ್ದರು.