Asianet Suvarna News Asianet Suvarna News

Kurugodu Road Accident: ಟ್ರ್ಯಾಕ್ಟರ್‌ ಟ್ರಾಲಿಗೆ ಬೈಕ್‌ ಡಿಕ್ಕಿ: ಮೂವರ ದುರ್ಮರಣ

*   ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದ ಬಳಿ ನಡೆದ ಘಟನೆ
*  ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
*  ಈ ಸಂಬಂಧ ಕುರುಗೋಡು ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲು
 

Three Killed in Road Accident at Kurugodu in Ballari grg
Author
Bengaluru, First Published Jan 6, 2022, 12:24 PM IST

ಕುರುಗೋಡು(ಜ.06): ರಸ್ತೆ ಪಕ್ಕದಲ್ಲಿ ಕೆಟ್ಟು ನಿಂತಿದ್ದ ಇಟ್ಟಿಗೆ ತುಂಬಿದ ಟ್ರ್ಯಾಕ್ಟರ್‌ ಟ್ರಾಲಿಗೆ ಬೈಕ್‌ ಡಿಕ್ಕಿ(Collision) ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ(Death) ಘಟನೆ ಮಂಗಳವಾರ ರಾತ್ರಿ ಜರುಗಿದೆ. ತಾಲೂಕಿನ ಬಾದನಹಟ್ಟಿ ಗ್ರಾಮದ ಸಪ್ತಗಿರಿ ಕ್ಯಾಂಪ್‌ ಬಳಿ ಈ ಘಟನೆ ಜರುಗಿದೆ. ಮೃತಪಟ್ಟವರನ್ನು ಬಾದನಹಟ್ಟಿ ಗ್ರಾಮ ನಿವಾಸಿಗಳಾದ ಗೊಲ್ಲರ ಗೋಪಾಲ(28), ಕರಿ ಬ್ಯಾಡರ ಕರಿಬಸಪ್ಪ(32), ಕರಿಬ್ಯಾಡರ ದೊಡ್ಡಬಸಪ್ಪ(30) ಎಂದು ಗುರುತಿಸಲಾಗಿದೆ.

ಸಿದ್ದಮ್ಮನಹಳ್ಳಿ ರಸ್ತೆ ಪಕ್ಕದಲ್ಲಿರುವ ತಮ್ಮ ಜಮೀನಿನಿಂದ ಗ್ರಾಮಕ್ಕೆ ವಾಪಾಸ್‌ ಮರಳುವಾಗ ಈ ಘಟನೆ ಜರುಗಿದೆ. ಸ್ಥಳಕ್ಕೆ ಪೋಲಿಸ್‌(Police) ಅಧಿಕಾರಿಗಳಾದ ಸಿಪಿಐ ಚಂದನ್‌ಗೋಪಾಲ್‌, ಪಿಎಸ್‌ಐ ಮೌನೇಶ್‌ ರಾಥೋಡ್‌ ಭೇಟಿ ನೀಡಿ ಪರಿಶೀಲಿಸಿದ್ದು, ಕುರುಗೋಡು ಪೋಲಿಸ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.

ಕಾರು ಅಪಘಾತ: ಅಪಾಯದಲ್ಲಿದ್ದ ಮಾಲೀಕನ ರಕ್ಷಣೆಗೆ ಧಾವಿಸಿದ ಶ್ವಾನ

ಬೆಳ್ಳಂಬೆಳಗ್ಗೆ ಅಪಘಾತ: 6 ಮಂದಿಗೆ ಗಂಭೀರ ಗಾಯ

ಚಿಂತಾಮಣಿ(Chintamani): ತಾಲೂಕಿನ ಬೆಂಗಳೂರು ಕಡಪ ಹೈವೇ(Bengaluru-Kadapa Highway) ರಸ್ತೆಯ ಐಮರೆಡ್ಡಿಹಳ್ಳಿ ಸಮೀಪ ಬೆಳ್ಳಂಬೆಳಗ್ಗೆ ಜಾವ ಚಾಲಕನ ನಿಯಂತ್ರಣ ತಪ್ಪಿ ಸ್ಕಾರ್ಪಿಯೋ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಗಂಭೀರ ಗಾಯಗೊಂಡು(Injured) ಘಟನೆ ವರದಿಯಾಗಿದ್ದು, ಗಾಯಾಳುಗಳನ್ನು ಸಮೀಪದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ(Treatment) ಕೊಡಿಸಲಾಗುತ್ತಿದೆ. ಈ ಘಟನೆ ಗ್ರಾಮಾಂತರ ಪೋಲಿಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆಂಧ್ರ ಪ್ರದೇಶದ(Andhra Pradesh) ವಿಶಾಖಪಟ್ಟಣಂ(Visakhapatnam) ಹಾಗೂ ಇತರೆ ಊರುಗಳಿಗೆ ಪ್ರವಾಸಕ್ಕೆಂದು(Tour) ಹೋಗಿದ್ದ ಇವರು ಬೆಂಗಳೂರಿನ ಕಡೆಗೆ ತೆರಳುತ್ತಿದ್ದ ವೇಳೆ ಬೆಳಗ್ಗೆ ಸುಮಾರು 5.30ರ ಸಮಯದಲ್ಲಿ, ಸ್ಕಾರ್ಪಿಯೋ ವಾಹನ ಚಾಲಕ ನಿದ್ರೆಗೆ ಜಾರಿದ್ದು ಇದೇ ಅಪಘಾತಗಿಡಾಗಲು(Accident) ಕಾರಣವಾಗಿದೆಯೆಂದು ತಿಳಿದು ಬಂದಿದೆ. 

ಡಿಕ್ಕಿ ಹೊಡೆದ ಪರಿಣಾಮ ಚಾಲಕ ಆಂಧ್ರ ಪ್ರದೇಶ ಪ್ರಕಾಶಂ ತಿಮ್ಮಪಾಳ್ಯಂ ಜಿಲ್ಲೆ ರವಿ(35), ಚಿತ್ತೂರು ಜಿಲ್ಲೆಯ ಪಲಮನೇರಿನ ಗಜೇಂದ್ರ (38), ಗೌರಿಬಿದನೂರಿನ ಗೊಲ್ಲಪಲ್ಲಿಯ ಬಾಲಕೃಷ್ಣ(48), ಹಿಂದೂಪುರದ ಚಂದ್ರಶೇಖರ್‌(29) ಮತ್ತು ಆನಂದಕುಮಾರ್‌(40), ಬಾಗೇಪಲ್ಲಿಯ ಮನೋಜ್‌(22)ಎಂದು ಗುರುತಿಸಲಾಗಿದೆ. ಘಟನೆ ವಿಷಯ ತಿಳಿದು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Road Accident: ರಾಜ್ಯದಲ್ಲಿ ಐದು ಪ್ರತ್ಯೇಕ ಅಪಘಾತ: ಮೂವರ ದುರ್ಮರಣ

ತಲೆ ಮೇಲೆ ಟಿಪ್ಪರ್‌ ಚಕ್ರ ಉರುಳಿ ಬಿಇ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

ಬೆಂಗಳೂರು:  ಟಿಪ್ಪರ್‌ ಡಿಕ್ಕಿಯಾಗಿ ದ್ವಿ ಚಕ್ರ ವಾಹನದ ಹಿಂದೆ ಕುಳಿತಿದ್ದ ವಿದ್ಯಾರ್ಥಿನಿ(Student) ತಲೆ ಮೇಲೆ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೃತಟ್ಟಿರುವ ಘಟನೆ ಅಶೋಕನಗರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆರ್‌.ಎಸ್‌.ಪಾಳ್ಯ ನಿವಾಸಿ ಸಂಜನಾ ಪ್ರಿಯಾ (21) ಮೃತ ವಿದ್ಯಾರ್ಥಿನಿ. ದ್ವಿಚಕ್ರ ವಾಹನ ಚಾಲಕ ವಿನಯ್‌ಕುಮಾರ್‌(24) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜನಾ ಪ್ರಿಯಾ ನಗರದ ಖಾಸಗಿ ಎಂಜಿನಿಯರ್‌ ಕಾಲೇಜಿನಲ್ಲಿ ಅಂತಿಮ ಬಿಇ ವ್ಯಾಸಂಗ ಮಾಡುತ್ತಿದ್ದರು. ಸೋದರ ಸಂಬಂಧಿ ವಿನಯ್‌ಕುಮಾರ್‌ ಜತೆಗೆ ದ್ವಿಚಕ್ರ ವಾಹನದಲ್ಲಿ ಜಯ ನಗರದ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಬೆಳಗ್ಗೆ ಸುಮಾರು 7ರ ಸುಮಾರಿಗೆ ಗರುಡಾ ಮಾಲ್‌ ಬಳಿ ಅತಿವೇಗವಾಗಿ ಟಿಪ್ಪರ್‌ ಚಲಾಯಿಸುತ್ತಿದ್ದ ಚಾಲಕ ಬಲಕ್ಕೆ ತಿರುಗಿಸಲು ಮುಂದಾಗಿ ತಕ್ಷಣ ಎಡಕ್ಕೆ ತಿರುಗಿಸಿದ್ದಾನೆ. ಈ ವೇಳೆ ಪಕ್ಕದಲ್ಲೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಟಿಪ್ಪರ್‌ ಡಿಕ್ಕಿಯಾಗಿದ್ದು, ದ್ವಿಚಕ್ರ ವಾಹನ ಸವಾರ ನವೀನ್‌ ಬಲಕ್ಕೆ ಬಿದ್ದಿದ್ದಾರೆ. ಹಿಂಬದಿ ಕುಳಿತಿದ್ದ ಸಂಜನಾ ಪ್ರಿಯಾ ಎಡಕ್ಕೆ ಬಿದ್ದಿದ್ದಾರೆ. ಈ ವೇಳೆ ಟಿಪ್ಪರ್‌ ಹಿಂಬದಿ ಎಡಚಕ್ರ ಆಕೆಯ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ನವೀನ್‌ಕುಮಾರ್‌ಗೆ ಮೈ-ಕೈಗೆ ಗಾಯಗಳಾಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೆ ಟಿಪ್ಪರ್‌ ವಾಹನ ಚಾಲಕನ ನಿರ್ಲಕ್ಷ್ಯ ಹಾಗೂ ಅತಿವೇಗದ ಚಾಲನೆಯೇ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಘಟನೆ ಬಳಿಕ ಸ್ಥಳದಲ್ಲೇ ಟಿಪ್ಪರ್‌ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಟಿಪ್ಪರ್‌ ವಾಹನ ಜಪ್ತಿ ಮಾಡಿದ್ದು, ಚಾಲಕನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

Follow Us:
Download App:
  • android
  • ios