ಹಲಗೂರು(ಜೂ.05): ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹಳ್ಳಕ್ಕೆ ಉರುಳಿಬಿದ್ದು ತಕ್ಷಣವೇ ಬೆಂಕಿ ಹೊತ್ತಿಕೊಂಡ ಪರಿಣಾಮ ಅಪ್ಪ ಇಬ್ಬರು ಮಕ್ಕಳು ಸಜೀವ ದಹನವಾದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ(ಶುಕ್ರವಾರ) ನಡೆದಿದೆ. 

ಕಾರನ್ನು ಚಾಲನೆ ಮಾಡುತ್ತಿದ್ದ ಶೇಕ್‌ ಫೈಜಲ್‌(45), ಅವರ ಮಕ್ಕಳಾದ ಸುಹಾನಾ(12) ಮತ್ತು ಶೇಕ್‌ ಅಹಿಲ್‌ (6) ಸಜೀವ ದಹನವಾದವರು. ಮೃತನ ಪತ್ನಿ ಮೆಹಕ್‌ ಮತ್ತು ಮಗಳು ಮಹೈರಾಗೆ ತೀವ್ರ ಸುಟ್ಟಗಾಯಗಳಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಕೈತಪ್ಪಿದ KSRTC : ಬಾಬಾಸಾಹೇಬ್ ಸಾರಿಗೆ ಎಂದು ಹೆಸರಿಡಲು ಸುಮಲತಾ ಮನವಿ

ಬೆಂಗಳೂರಿನ ನಿವಾಸಿಗಳಾದ ಇವರು ಕಾರ್ಯನಿಮಿತ್ತವಾಗಿ ಚಾಮರಾಜನಗರ ಜಿಲ್ಲೆ ಹನೂರಿಗೆ ತೆರಳಿದ್ದರು. ಶುಕ್ರವಾರ ಮುಂಜಾನೆ ಬೆಂಗಳೂರಿಗೆ ವಾಪಸ್‌ ಆಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.