Asianet Suvarna News Asianet Suvarna News

ಹುನಗುಂದ: ನೀರು ಪಾಲಾಗಿದ್ದವನ ಹುಡುಕಲು ಹೋದ ಮೂವರು ವಿದ್ಯುತ್‌ಗೆ ಬಲಿ

*  ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ದನ್ನೂರ ಗ್ರಾಮದ ಬಳಿ ನಡೆದ ಘಟನೆ
*  ಮೃತದೇಹ ಪತ್ತೆಗೆ ಹೋದ ಮೂವರು ಸಾವು
*  ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
 

Three Killed due to Electric Shock While Searching Deadbody in River at Hunagund in Bagalkot  grg
Author
Bengaluru, First Published Oct 8, 2021, 2:55 PM IST
  • Facebook
  • Twitter
  • Whatsapp

ಹುನಗುಂದ(ಅ.08): ಕೃಷ್ಣಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ ವ್ಯಕ್ತಿಯ ಮೃತದೇಹವನ್ನು ಹುಡುಕಲು ಹೋಗಿದ್ದ ಮೂವರು ವಿದ್ಯುತ್ ತಾಗಿ(Electrocution) ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬಾಗಲಕೋಟೆ(Bagalkot) ಜಿಲ್ಲೆಯ ಹುನಗುಂದ(Hunagund) ತಾಲೂಕಿನ ದನ್ನೂರ ಗ್ರಾಮದ ಬಳಿ ಗುರುವಾರ ಸಂಭವಿಸಿದೆ.

ಮೂಲತಃ ವಿಜಯಪುರ(Vijayapura) ಜಿಲ್ಲೆಯ ತಾಳಿಕೋಟೆ ತಾಲೂಕಿನ ಹಾರನಾಳ ಗ್ರಾಮದ ಯಮನಪ್ಪ ಅಮಲೂರ (35), ಶರಣಗೌಡ ಭೀಮನಗೌಡ ಬಿರಾದಾರ (45) ಹಾಗೂ ಕೂಡಲಸಂಗಮ ಗ್ರಾಮದ ಬೋಟ್ ಆಪರೇಟರ್ ಪರಶುರಾಮ ತಳವಾರ (21) ಮೃತಪಟ್ಟ(Death) ದುರ್ದೈವಿಗಳು.

ಬಾಗಲಕೋಟೆ: ಹೆಣ್ಣು ಸಿಗುತ್ತಿಲ್ಲವೆಂದು ನದಿಗೆ ಹಾರಿದ್ದ ಯುವಕನ ಶವ ಪತ್ತೆ

ಘಟನೆಯ ವಿವರ:

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಹಾರನಾಳ ಗ್ರಾಮದ ಶಿವಪ್ಪ ಅಮಲೂರ (70) ಎಂಬ ವ್ಯಕ್ತಿ ಕಳೆದ ಮೂರು ದಿನಗಳ ಹಿಂದೆ ಧನ್ನೂರ ಬಳಿಯ ಕೃಷ್ಣ ಮತ್ತು ಮಲಪ್ರಭೆ ನದಿಗೆ(River) ಹಾರಿದ್ದಾನೆ. ಗುರುವಾರ ತಂದೆಯ ಶವವನ್ನು ಹುಡಕಲು ಕೂಡಲಸಂಗಮದಲ್ಲಿನ ಬೋಟ್(Boat) ತೆಗೆದುಕೊಂಡು ಮಗ ಯಮನಪ್ಪ ಅಳಿಯ ಶರಣಗೌಡ ಹಾಗೂ ಬೋಟ್ ಆಪರೇಟರ್ ಪರಶುರಾಮ ಸೇರಿದಂತೆ 10 ಜನರು ಸೇರಿಕೊಂಡು ಶವ ಪತ್ತೆ ಹಚ್ಚಲು ನದಿಗೆ ಇಳಿದಿದ್ದು ನದಿಯ ಮಧ್ಯಕ್ಕೆ ಹೋಗುತ್ತಿದ್ದಂತೆ ನದಿಯ ಮಧ್ಯದಲ್ಲಿರುವ ಕಬ್ಬಿಣದ ವಿದ್ಯುತ್ ಕಂಬಕ್ಕೆ ಬೋಟ್ ತಗುಲಿ ಶಾಟ್ ಸರ್ಕ್ಯೂಟಾಗಿ ಮೂವರು ಶವವಾಗಿ ನದಿಯ ನೀರಿನಲ್ಲಿ ಬಿದ್ದಿದ್ದಾರೆ. ಸದ್ಯ ಶಿವಪ್ಪ ಅಮಲೂರ ಶವ ಪತ್ತೆಯಾಗಿದ್ದು. ಬೋಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ನೀರಿಗೆ ಬಿದ್ದ ಮೂವರ ಶವ ಪತ್ತೆಗೆ ಹುನಗುಂದ ಪೊಲೀಸ್ ಠಾಣೆಯ ಸಿಪಿಐ ಕೆ.ಹೊಸಕೇರಪ್ಪ ಮತ್ತು ಪಿಎಸ್‌ಐ ಎಸ್.ಆರ್. ನಾಯಕ ಅವರ ನೇತೃತ್ವದ ಪೊಲೀಸ್(Police) ಸಿಬ್ಬಂದಿ ಮತ್ತು ಅಗ್ನಿ ಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.

ತಂದೆ ಶವ ಪತ್ತೆಗೆ ಹೋದ ಮಗ ಮತ್ತು ಅಳಿಯ ಹಾಗೂ ಬೋಟ್ ಆಪರೇಟರ್ ಶವವಾಗಿರುವುದು ದುರಂತದ ಸಂಗತಿಯಾಗಿದೆ. ಒಂದೇ ಸ್ಥಳದಲ್ಲಿ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಆ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಮತ್ತು ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. 
 

Follow Us:
Download App:
  • android
  • ios