Karwar| ಪಾದಯಾತ್ರೆ ಮೂಲಕವೇ ಮೂರು ದೇಶಗಳ ಪರ್ಯಟನೆ
* ಪಾದಯಾತ್ರೆಯ ಮೂಲಕ ದೇಶ ಸುತ್ತಲು ರೆಡಿಯಾದ ಸ್ನೇಹಿತರ ತಂಡ
* ಕೇರಳದ ಕಾಸರಗೋಡಿನಿಂದ ಪಾದಯಾತ್ರೆ ಆರಂಭ
* ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಜಾಗೃತಿ
ಕಾರವಾರ(ನ.15): ಮೂರು ದೇಶಗಳನ್ನು ಪಾದಯಾತ್ರೆಯ(Padayatra) ಮೂಲಕವೇ ಸುತ್ತಲು ಮುಂದಾಗಿರುವ ಮೂವರು ಸ್ನೇಹಿತರ ತಂಡವೊಂದು ಕೇರಳದ(Kerala) ಕಾಸರಗೋಡಿನಿಂದ(Kasaragod) ಶನಿವಾರ ಕಾರವಾರ ತಲುಪಿತು.
ಕೇರಳದ ಕಾಸರಗೋಡಿನ ಜುಬೈರ್, ಸಿನಾನ್ ಹಾಗೂ ತ್ರಿವೇಂಡ್ರಮ್‌ನ ನವನೀತ್ ಎಂಬವರೇ ದೇಶ(Country) ಸುತ್ತುವ ಗುರಿ ಹೊಂದಿದವರು. ಇದೇ ವೇಳೆ ಮಾತನಾಡಿದ ಜುಬೈರ್, ಕೇರಳದಿಂದ ಪಾದಯಾತ್ರೆ ಆರಂಭಗೊಂಡಿದೆ. ಎರಡು ವರ್ಷದ ಪಾದಯಾತ್ರೆಯ ಗುರಿ ಹೊಂದಿದ್ದೇವೆ. ಅ.15ಕ್ಕೆ ಕೇರಳದಿಂದ ಪ್ರಯಾಣ ಆರಂಭಿಸಿ, ಕರ್ನಾಟಕ(Karnataka) ಪ್ರವೇಶಿಸಿದ್ದೇವೆ. ಮುಂದೆ, ಗೋವಾದಿಂದ(Goa) ಮಧ್ಯಪ್ರದೇಶ(Madhya Pradesh), ರಾಜಸ್ಥಾನ(Rajasthan), ಪಂಜಾಬ(Punjab), ಹಿಮಾಚಲಪ್ರದೇಶಕ್ಕೆ(Himachal Pradesh) ತೆರಳುತ್ತೇವೆ. ಅಲ್ಲಿಂದ ಉತ್ತರಾಖಂಡದ ಮೂಲಕ ನೇಪಾಳ(Nepal) ಹಾಗೂ ಭೂತಾನ್‌ಗೆ(Bhutan) ಭೇಟಿ ನೀಡುತ್ತೇವೆ. ಬಳಿಕ ಪಶ್ಚಿಮ ಬಂಗಾಳ, ಹೈದರಾಬಾದ್, ಬೆಂಗಳೂರು ಮೂಲಕ ಕನ್ಯಾಕುಮಾರಿ, ಕೇರಳಕ್ಕೆ ಮರಳುತ್ತೇವೆ ಎಂದು ತಿಳಿಸಿದರು.
ರಾಮಮಂದಿರ ನಿಧಿ ಸಂಗ್ರಹಕ್ಕಾಗಿ ಮುಂಬೈನಲ್ಲಿ ಪೇಜಾವರ ಶ್ರೀ ಪಾದಯಾತ್ರೆ
ಸುಮಾರು 15 ಸಾವಿರ ಕಿ.ಮೀ. ಕ್ರಮಿಸಬೇಕಿದೆ. ಇದನ್ನು ಹವ್ಯಾಸಕ್ಕಾಗಿ ಮಾಡುತ್ತಿದ್ದೇವೆ. ಜೊತೆಜೊತೆಗೆ ಜನರಿಗೆ ಆರೋಗ್ಯದ(Health) ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಜಾಗೃತಿ(Awareness) ಮೂಡಿಸುತ್ತಿದ್ದೇವೆ. ಈಗಿನ ಜೀವನಶೈಲಿ ಬದಲಾಗಿದೆ. ವ್ಯಾಯಾಮ ಇಲ್ಲ, ವಿಹಾರ ಇಲ್ಲ. ಒತ್ತಡದ ಜೀವನದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚು. ಹೀಗಾಗಿ ದೈಹಿಕ ಆರೋಗ್ಯಕ್ಕೆ ಸಲಹೆಗಳನ್ನು ನೀಡುತ್ತೇವೆ. ಬೆಳಿಗ್ಗೆ 4.30ಕ್ಕೆ ಎದ್ದು ಪಾದಯಾತ್ರೆ ಆರಂಭಿಸುತ್ತೇವೆ. ದಿನಕ್ಕೆ 25-30 ಕಿ.ಮೀ. ನಡೆಯುತ್ತೇವೆ. ಪ್ರವಾಸಿ ತಾಣಗಳು, ಚಾರಣ ತಾಣಗಳಿಗೂ ಭೇಟಿ ನೀಡುತ್ತೇವೆ ಎಂದರು.
ರೈಡ್ ಮಾಡಲೇಬಾರದ ವ್ಯಕ್ತಿ ಬೈಕಲ್ಲೇ ನಾಲ್ಕು ದೇಶ ಸುತ್ತಿದ
ಬೈಕ್ ರೈಡಿಂಗ್(Bike Riding) ಹವ್ಯಾಸವಾಗಿದ್ದ ನರೇನ್ ರಾಜ್ ಅವರಿಗೆ ಇದ್ದಕ್ಕಿದ್ದ ಹಾಗೆ ಆಕ್ಸಿಡೆಂಟ್(Accident) ಆಗಿ ಬಿಡುತ್ತದೆ. ಬಲಗಾಲು ಸ್ಟೆಬಿಲಿಟಿ ಕಳೆದುಕೊಂಡು ಡಾಕ್ಟರ್ ಸಹಿತ ಎಲ್ಲರೂ ಮುಂದೆ ಬೈಕ್ ರೈಡ್ ಮಾಡಬೇಡಿ. ಇದರಿಂದ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದು ಸಲಹೆ ನೀಡುತ್ತಾರೆ. ಆದರೆ ಬೈಕ್ ಮೂಲಕವೇ ವಿಶ್ವ ಸುತ್ತಬೇಕು ಎಂದು ಕನಸು ಕಂಡ ಇವರಿಗೆ ಈ ಆಘಾತದಿಂದ ಮನಸ್ಸು ಘಾಸಿಯಾಗುತ್ತದೆ. ಆದರೂ ನನ್ನ ಕನಸನ್ನು ಪೂರ್ತಿ ಮಾಡಿಕೊಳ್ಳಲೇ ಬೇಕು. ಬಂದದ್ದು ಬರಲಿ ಎಂದು ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಮಯನ್ಮಾರ್, ಭೂತಾನ್, ನೇಪಾಳ, ಥೈಲ್ಯಾಂಡ್ ದೇಶ ಪರ್ಯಟನೆಗೆ ಹೊರಟೇಬಿಟ್ಟರು ಈ ಬೆಂಗಳೂರಿನ(Bengaluru) ಸಾಹಸಿ. ಬರೋಬ್ಬರಿ ನಲವತ್ತು ದಿನಗಳು, ನಾಲ್ಕು ದೇಶಗಳ ಸುತ್ತಾಟ, 10500 ಕಿಮೀ. ಏಕಾಂಗಿ ಬೈಕ್ ರೈಡಿಂಗ್ ಮಾಡಿ ಬಂದಿರುವ ನರೇನ್ ತಮ್ಮ ಯಾನದ ಇಂಟರೆಸ್ಟಿಂಗ್ ಸನ್ನಿವೇಶಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.
ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಶಬರಿಮಲೆಗೆ ಪಾದಯಾತ್ರೆಯಲ್ಲಿ ಹೊರಟ ಶ್ವಾನ
ಬಾಗಲಕೋಟೆ: ರೈತ ವಿರೋಧಿ ಕಾಯ್ದೆ ಕೈಬಿಡಲು ಯುವಕನಿಂದ 3,430 ಕಿಮೀ ಪಾದಯಾತ್ರೆ..!
ಬೀಳಗಿ: ಕೇಂದ್ರ ಸರ್ಕಾರ(Central Government) ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು(Anti Farmer Act) ಕೈ ಬಿಡಬೇಕು ಎಂದು ಕಳೆದ ಫೆಬ್ರುವರಿ ತಿಂಗಳಲ್ಲಿ ಮಲೆ ಮಹದೇಶ್ವರ ಬೆಟ್ಟದಿಂದ ಏಕಾಂಗಿ ಪಾದಯಾತ್ರೆ ಆರಂಭಿಸಿದ ಬಾಗಲಕೋಟೆ ನಗರದ ಯುವಕ ಸದ್ಯ 3430 ಕಿಮೀ ಕ್ರಮಿಸಿ ಕೇಂದ್ರ ಸರ್ಕಾರದ ವಿರುದ್ಧ ಪಾದಯಾತ್ರೆಯಂತಹ ದಿಟ್ಟ ಹೋರಾಟ ಮಾಡುತ್ತಿದ್ದಾರೆ.
ಎಂಜಿನಿಯರಿಂಗ್ ಎಂಟೆಕ್ ಪದವೀಧರ ಹಾಗೂ ಅವಿವಾಹಿತ ನಾಗರಾಜ ಕಲಗುಟಕರ್ ಈಗಾಗಲೇ ರಾಜ್ಯದ 30 ಜಿಲ್ಲೆಗಳ ಸಂಚಾರ ಮಾಡಿ ಭಾನುವಾರ ಬೀಳಗಿ ನಗರ ಪ್ರವೇಶಸಿ ಕೆಲ ಕಾಲ ವಿಶ್ರಾಂತಿ ಪಡೆದು ರೈತರಿಗೆ ಸಂದೇಶ ರವಾನಿಸುವ ಕೆಲಸ ಮಾಡಿದ್ದಾರೆ.