Asianet Suvarna News Asianet Suvarna News

ಉಪಕದನ: ಕಾಗವಾಡ ಪಕ್ಷೇತರ ಅಭ್ಯರ್ಥಿ ದೀಪಕ ಬುರ್ಲಿಗೆ ಜೀವಭಯ

ಕಾಗವಾಡ ಪಕ್ಷೇತರ ಅಭ್ಯರ್ಥಿ ದೀಪಕ ಬುರ್ಲಿ ಅವರಿಗೆ ದುಷ್ಕರ್ಮಿಗಳಿಂದ ಜೀವಭಯ|ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿರುವ ಪತ್ರಕರ್ತ ದೀಪಕ ಬುರ್ಲಿ| ನಿನ್ನೆ ತಡರಾತ್ರಿಯಿಂದ ದೀಪಕ ಬುರ್ಲಿ ನಾಪತ್ತೆ

Threat Call to Kagwad Independent candidate Deepak Burli
Author
Bengaluru, First Published Dec 1, 2019, 11:25 AM IST

ಚಿಕ್ಕೋಡಿ(ಡಿ.01): ಬೆಳಗಾವಿ ಜಿಲ್ಲೆಯ ಗೋಕಾಕ್, ಕಾಗವಾಡ ಹಾಗೂ ಅಥಣಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ದಿನದಿಂದ ದಿನಕ್ಕೆ ಚುನಾವಣಾ ಕಾವು ಏರತೊಡಗಿದೆ. ಏನತ್ಮಧ್ಯೆ ಕಾಗವಾಡ ಪಕ್ಷೇತರ ಅಭ್ಯರ್ಥಿ ದೀಪಕ ಬುರ್ಲಿ ಅವರಿಗೆ ದುಷ್ಕರ್ಮಿಗಳಿಂದ ಜೀವಭಯ ಎದುರಾಗಿದೆ ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ಪಕ್ಷಗಳ ಬೆಂಬಲಿಗರಿಂದ ಬೆದರಿಕೆ ಹಿನ್ನೆಲೆಯಲ್ಲಿ ದೀಪಕ ಬುರ್ಲಿ ಅವರು ಮೊಬೈಲ್ ಪೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿರುವ ಪತ್ರಕರ್ತ ದೀಪಕ ಬುರ್ಲಿ ಅವರು ಸ್ಪರ್ಧಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಿನ್ನೆ ತಡರಾತ್ರಿ ಇಂದ ದೀಪಕ ಬುರ್ಲಿ ಅವರು ನಾಪತ್ತೆಯಾಗಿದ್ದಾರೆ. ದೀಪಕ ಬುರ್ಲಿ ಅಬ್ಬರದ ಪ್ರಚಾರಕ್ಕೆ ಹೆದರಿ ಪ್ರಚಾರ ನಿಲ್ಲಿಸುವಂತೆ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ತನಗೂ ತನ್ನ ಬೆಂಬಲಿಗರಿಗೂ ಏನಾದರೂ ಆಗುವ ಭಯದಿಂದ ಅವರು ಮತಕ್ಷೇತ್ರ ಬಿಟ್ಟು ಹೊರಹೋಗಿದ್ದಾರೆ.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

Follow Us:
Download App:
  • android
  • ios