Asianet Suvarna News Asianet Suvarna News

ಇದ್ದಕ್ಕಿದ್ದಂತೆ ಸತ್ತು ಬೀಳುತ್ತಿವೆ ಸಾವಿರಾರು ಸಂಖ್ಯೆಯಲ್ಲಿ ಜೇನು ನೊಣಗಳು

ಕಳೆದ ಕೆಲವು ದಿನಗಳಿಂದ ಇದ್ದಕ್ಕಿದ್ದಂತೆ ಸಾವಿರಾರು ಜೇನ್ನೊಣಗಳು ಸಾಯುತ್ತಿದ್ದು, ಜೇನು ನೊಣಗಳ ಸಾವು ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. 
 

Thousand Of Honey Bee Death In Uttara Kannada Yellapur
Author
Bengaluru, First Published Mar 13, 2020, 2:24 PM IST
  • Facebook
  • Twitter
  • Whatsapp

ಯಲ್ಲಾಪುರ [ಮಾ.13]:  ತಾಲೂಕಿನ ಉಮ್ಮಚಗಿ ಗ್ರಾಪಂ ವ್ಯಾಪ್ತಿಯ ಹೊರಮನೆಯಲ್ಲಿ ಕಳೆದ ಕೆಲವು ದಿನಗಳಿಂದ ಇದ್ದಕ್ಕಿದ್ದಂತೆ ಸಾವಿರಾರು ಜೇನ್ನೊಣಗಳು ಸಾಯುತ್ತಿದ್ದು, ಇದು ಜೇನು ಸಾಕುವ ರೈತರಿಗೆ ತೀವ್ರ ಆತಂಕ ಮೂಡಿಸಿದೆ. 

ಕಳೆದ ಕೆಲ ದಿನಗಳಿಂದ ಜೇನು ಹುಳುಗಳು ಸಾಯುತ್ತಿದ್ದು, ಹೊರಮನೆಯ  ನಾರಾಯಣ ಭಟ್ಟ ಅವರು ಸಾಕಿರುವ ಜೇನು ಪೆಟ್ಟಿಗೆಯಲ್ಲಿನ ಅತಿ ಹೆಚ್ಚು ಜೇನು ನೊಣಗಳು ಮೃತಪಡುತ್ತಿವೆ. ಉಮ್ಮಚಗಿಯ ಶಂಕರ ಭಟ್ಟ ಅವರ ಜೇನು ಪೆಟ್ಟಿಗೆ ಗಳಲ್ಲಿಯೂ ಜೇನುನೊಣಗಳು ಸಾಯುತ್ತಿವೆ. ಪೆಟ್ಟಿಗೆಯಲ್ಲಿರುವ ಜೇನುನೊಣಗಳು ಇದ್ದಕ್ಕಿದ್ದಂತೆ ಒದ್ದಾಡಲಾರಂಭಿಸಿ, ಕೆಲವೇ ಕ್ಷಣಗಳಲ್ಲಿ ಸಾಯುತ್ತಿವೆ. 

ಬಲೆಗೆ ಬಿತ್ತು 200 ಕೆಜಿ ತೂಗುವ ಅಪರೂಪದ ಮೀನು, ಇದರ ಚಂದ ನೋಡಿ...

ಅಕ್ಕಪಕ್ಕದ ಅಡಕೆ ತೋಟದ ಮಾಲಿಕರು ಅಡಕೆ ಸಿಂಗಾರಕ್ಕೆ ರಾಸಾಯನಿಕ ಔಷಧ ಸಿಂಪಡಿಸುತ್ತಿರುವುದೇ ಇದಕ್ಕೆ ಕಾರಣ ವಿರಬಹುದೆಂದು ಊಹಿಸಲಾಗುತ್ತಿದೆ. ಇದು ರಾಸಾಯನಿಕ ಬಳಕೆಯಿಂದ ಸಂಭವಿಸಿದೆಯೋ ಅಥವಾ ಯಾವುದಾದರೂ ರೋಗ ಬಾಧೆಯಿಂದ ಆಗಿರಬಹುದೋ ಎಂಬ ಕುರಿತು ವಿಷಯತಜ್ಞರು ಆಗಮಿಸಿ, ಪರಿಶೀಲಿಸಿದ ನಂತರವೇ ದೃಢಗೊಳ್ಳಬೇಕಿದೆ.

ಕಳೆದ ಮಂಗಳವಾರ ಸ್ಥಳಕ್ಕೆ ಉಮ್ಮಚಗಿ ಗ್ರಾಪಂ ಅಧ್ಯಕ್ಷ ಗ.ರಾ. ಭಟ್ಟ, ಸದಸ್ಯ ಖೈತಾನ್ ಡಿಸೋಜಾ, ಸಾಮಾಜಿಕ ಕಾರ್ಯಕರ್ತ ಗೋವಿಂದ ಬಸಾಪುರ ಭೇಟಿ ನೀಡಿ, ಪರಿಶೀಲಿಸಿದರು. ಘಟನೆ ಕುರಿತು ಮಾಹಿತಿ ಪಡೆದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು, ಪರಿಶೀಲನೆ ನಡೆಸಿ ಪರಿಹಾರ ಸೂಚಿಸಬೇಕು. ಉಂಟಾಗಿರುವ ನಷ್ಟಕ್ಕೆ ಪರಿಹಾರ ಸೂಕ್ತ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದರು.

ಮಾರ್ಚ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios