ಉತ್ತಮ ಕೆಲಸ ಮಾಡುವವರರು ಸದಾ ಸ್ಮರಣೀಯರು : ಸಾ ರಾ ಮಹೇಶ್

ತಮ್ಮ ಸೇವಾ ಅವಧಿಯಲ್ಲಿ ಉತ್ತಮವಾದ ಕೆಲಸ ಮಾಡುವವರನ್ನು ಜನತೆ ಸದಾ ಕಾಲ ಸ್ಮರಿಸುತ್ತಾರೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

Those who do good work are always remembered : Sa Ra Mahesh snr

  ಕೆ.ಆರ್‌. ನಗರ :  ತಮ್ಮ ಸೇವಾ ಅವಧಿಯಲ್ಲಿ ಉತ್ತಮವಾದ ಕೆಲಸ ಮಾಡುವವರನ್ನು ಜನತೆ ಸದಾ ಕಾಲ ಸ್ಮರಿಸುತ್ತಾರೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಪಟ್ಟಣದ ಎಚ್‌.ಡಿ. ದೇವೇಗೌಡ ಸಮುದಾಯ ಭವನದಲ್ಲಿ ಕೆ.ಆರ್‌. ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ಸೇವೆಯಿಂದ ನಿವೃತ್ತರಾದ ಮೈಮುಲ್‌ ವ್ಯವಸ್ಥಾಪಕ ಡಾ. ಸಣ್ಣತಮ್ಮೇಗೌಡ ಅವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

30 ವರ್ಷಗಳ ಸುದೀರ್ಘ ಅವಧಿಯವರೆಗೆ ಮೈಮುಲ್‌ನಲ್ಲಿ ವಿವಿದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಬಡ್ತಿ ಪಡೆದು ಸೇವಾ ನಿವೃತ್ತಿ ಹೊಂದುತ್ತಿರುವ ಡಾ.ಸಣ್ಣತಮ್ಮೇಗೌಡ ಅವರ ಕಾರ್ಯ ವೈಖರಿ ಇತರರಿಗೆ ಮಾದರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ದಶಕದ ಹಿಂದೆಯೆ ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಮೈಮುಲ್‌ನಿಂದ ಪಶು ವೈದ್ಯರಾಗಿ ಕೆಲಸ ಮಾಡುತ್ತಿದ್ದ ಇವರ ಕಾರ್ಯ ವೈಖರಿ ಹಳ್ಳಿಹಳ್ಳಿಗಳಲ್ಲಿಯು ಮನೆ ಮಾತಾಗಿದ್ದು, ಗೋವುಗಳ ಸೇವೆ ಮಾಡುವ ಕೆಲಸ ಸಿಗುವುದು ಪುಣ್ಯವಾಗಿದ್ದು, ಇಂತಹ ಸೇವೆ ಮಾಡಿರುವ ಇವರ ನಿವೃತ್ತ ಜೀವನ ಸುಖಕರವಾಗಿರಲೆಂದು ಹಾರೈಸಿದರು.

ಡಾ. ಸಣ್ಣತಮ್ಮೇಗೌಡ ಮತ್ತು ಪಟ್ಟಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರ ಪತ್ನಿ ಪ್ರಸೂತಿ ಮತ್ತು ಸ್ತ್ರೀ-ರೋಗ ತಜ್ಞೆ ಡಾ.ಕೆ.ಆರ್‌. ಚಂದ್ರಕಲಾ ಹಾಗೂ ಮೈಮುಲ್‌ ನಿರ್ದೇಶಕ ಎ.ಟಿ. ಸೋಮಶೇಖರ್‌ ಅವರನ್ನು ಅಭಿನಂದಿಸಿದರು.

ಮೈಮುಲ್‌ ನಿರ್ದೇಶಕ ಸಿ. ಓಂಪ್ರಕಾಶ್‌, ಮಾಜಿ ನಿರ್ದೇಶಕಿ ವಿಜಯಲಕ್ಷ್ಮೀ, ಪ್ರಧಾನ ವ್ಯವಸ್ಥಾಪಕ ಡಾ. ವಿಜಯಕುಮಾರ್‌, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ, ಕಾರ್ಯದರ್ಶಿ ಬಿ. ಅಣ್ಣಾಜೀಗೌಡ, ತಾಲೂಕು ಜೆಡಿಎಸ್‌ ವಕ್ತಾರ ಕೆ.ಎಲ್‌. ರಮೇಶ್‌, ಪುರಸಭೆ ಮಾಜಿ ಸದಸ್ಯ ರಾ.ಜ. ಶ್ರೀಕಾಂತ್‌, ಟಿಎಪಿಸಿಎಂಎಸ್‌ ನಿರ್ದೇಶಕ ಚಂದ್ರೇಗೌಡ, ತಾಲೂಕು ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷೆ ರಾಜಲಕ್ಷ್ಮಿ, ಹಾಲು ಉತ್ಪಾದಕರ ನೌಕರರ ಸಂಘಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಜಿ.ಕೆ. ಮಹದೇವ್‌ ಇದ್ದರು.

ಮಹಿಳೆರಿಗೆ 50 ರಷ್ಟು ಸ್ಥಾನ ಮೀಸಲಾತಿ ನೀಡಿ

ಕೆ.ಆರ್‌. ನಗರ :  ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50 ರಷ್ಟುಸ್ಥಾನಗಳ ಮೀಸಲಾತಿ ನೀಡುವ ಕಾಯ್ದೆಯನ್ನು ಕೇಂದ್ರ ಸರ್ಕಾರ ಶೀಘ್ರವಾಗಿ ಜಾರಿಗೆ ತರಬೇಕು ಎಂದು ಶಾಸಕ ಸಾ.ರಾ. ಮಹೇಶ್‌ ಒತ್ತಾಯಿಸಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಯುವ ರೈತ ವೇದಿಕೆ, ಕೃಷಿ ಮತ್ತು ಇತರ ಇಲಾಖೆಗಳ ಸಹಯೋಗದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದು, ಅವರಿಗೆ ನಾವು ಸದಾ ಪೋ›ತ್ಸಾಹ ನೀಡಬೇಕು ಎಂದರು.

ದುಷ್ಟಶಕ್ತಿಗಳನ್ನು ನಿಗ್ರಹಿಸುವ ಶಕ್ತಿಯನ್ನು ದೇವರು ಸ್ತ್ರೀಯರಿಗೆ ನೀಡಿರುವುದರಿಂದ ಎಲ್ಲರೂ ಅವರನ್ನು ಗೌರವ ಮನೋಭಾವನೆಯಿಂದ ಕಂಡು ಸಮಾನತೆಯ ಸಮಾಜಕ್ಕೆ ಪರಸ್ಪರ ಒಂದಾಗಿ ಕೆಲಸ ಮಾಡಬೇಕೆಂದರು.

ಹೆಣ್ಣು ಮತ್ತು ಗಂಡು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಆದ್ದರಿಂದ ಇಬ್ಬರು ಹೊಂದಾಣಿಕೆಯಿಂದ ಸುಂದರವಾದ ಜೀವನ ನಡೆಸಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕೆಂದು ಸಲಹೆ ನೀಡಿದರು.

ಪುರುಷರಿಗಿಂತ ಅತ್ಯಂತ ಶಕ್ತಿಶಾಲಿಯಾಗಿರುವ ಮಹಿಳೆಯರು ಕುಟುಂಬವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಸರ್ವರನ್ನು ಸರಿದಾರಿಗೆ ತಂದು ಸಾಕಷ್ಟುತ್ಯಾಗ ಮಾಡುವುದರಿಂದ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಪುರುಷನ ಆಧ್ಯ ಕರ್ತವ್ಯ ಎಂದರು.

Latest Videos
Follow Us:
Download App:
  • android
  • ios