ಮೆಣಸಿನಕಾಯಿ ಬೆಳೆಯುವ ರೈತರಿಗೆ ಇದೇ ವರದಾನ
ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಮೆಣಸಿನಕಾಯಿಯ ನೂತನ ತಳಿಯಾದ ಅರ್ಕಾ ಗಗನ್ ಕುರಿತು ತಾಲೂಕಿನ ಪರುವಗೊಂಡನಹಳ್ಳಿಯಲ್ಲಿ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು.
ತಿಪಟೂರು : ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಮೆಣಸಿನಕಾಯಿಯ ನೂತನ ತಳಿಯಾದ ಅರ್ಕಾ ಗಗನ್ ಕುರಿತು ತಾಲೂಕಿನ ಪರುವಗೊಂಡನಹಳ್ಳಿಯಲ್ಲಿ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ. ಕೆ. ಕೀರ್ತಿಶಂಕರ್ ಮಾತನಾಡಿ, ಅರ್ಕಾ ಗಗನ್ ತಳಿಯನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ ಹೆಸರಘಟ್ಟ ಬೆಂಗಳೂರು ಇವರು ಬಿಡುಗಡೆ ಮಾಡಿದ್ದು, ಈ ತಳಿಯು ಹಸಿರು ಮೆಣಸಿನಕಾಯಿಗೆ ಸೂಕ್ತವಾಗಿದೆ. ಎಕೆರೆಗೆ 80 -100 ಕ್ವಿಂಟಾಲ್‌ವರೆಗೂ ಇಳುವರಿ ಪಡೆಯಬಹುದು ಎಂದರು.
ರೈತರಾದ ಧನಂಜಯ್ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರ ಕೊನೇಹಳ್ಳಿಯಿಂದ ಮುಂಚೂಣಿ ಕ್ಷೇತ್ರ ಪ್ರಾತ್ಯಕ್ಷಿಕೆಯಡಿ ಅರ್ಕಾ ಗಗನ್ ತಳಿಯ ಸಸಿಗಳನ್ನು ನೀಡಲಾಗಿದ್ದು, ವಿಜ್ಞಾನಿಗಳಾದ ಡಾ. ಕೀರ್ತಿಶಂಕರ್ ಅವರ ಸಲಹೆಯಂತೆ ನಾಟಿ ಮಾಡಿದ ತಿಂಗಳ ನಂತರ ತರಕಾರಿ ಸ್ಪೆಷಲ್ ಲಘು ಪೋಷಕಾಂಶವನ್ನು ಪ್ರತೀ ಲೀಟರ್ ನೀರಿಗೆ ೫ ಗ್ರಾಂ ನಂತೆ ಮಿಶ್ರಣ ಮಾಡಿ ಸಿಂಪಡಿಸಿದೆವು. ಹೂಬಿಡುವ ಸಮಯದಲ್ಲಿ ಎನ್.ಎ.ಎ. ಬೆಳೆ ಪ್ರಚೋದಕವನ್ನು ಸಿಂಪಡಣೆ ಮಾಡಿದ್ದರಿಂದ ಉತ್ತಮ ಗುಣಮಟ್ಟ ಮತ್ತು ಅಧಿಕ ಇಳುವರಿಯನ್ನು ಪಡೆದಿದ್ದೇವೆ ಎಂದು ತಿಳಿಸಿದರು.
ಮತ್ತೋರ್ವ ರೈತ ರೇಣುಕಮೂರ್ತಿ ಮಾತನಾಡಿ ಸಾಮಾನ್ಯವಾಗಿ ನಾವು ಸ್ಥಳೀಯ ತಳಿಯನ್ನು ಬೆಳೆಯುತ್ತಿದ್ದು ಕಡಿಮೆ ಇಳುವರಿಯನ್ನು ಪಡೆಯುತ್ತಿದ್ದೆವು. ಕೃಷಿ ವಿಜ್ಞಾನ ಕೇಂದ್ರ ಕೊನೇಹಳ್ಳಿ ವತಿಯಿಂದ ಅರ್ಕಾ ಗಗನ್ ತಳಿಯನ್ನು ಪರಿಚಯಿಸಿದ್ದರಿಂದ ಅಧಿಕ ಇಳುವರಿ ಮತ್ತು ಉತ್ತಮ ಆದಾಯವನ್ನು ಪಡೆದಿದ್ದೇವೆ ಎಂದರು. ಕ್ಷೇತ್ರೋತ್ಸವದಲ್ಲಿ ೪೫ಕ್ಕೂ ಹೆಚ್ಚು ರೈತರು ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡರು.
ಮೆಣಸಿನಕಾಯಿ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರು
ಟ್ಯಾಂಕರ್ ಮೂಲಕ ನೀರನ್ನು ಹಾಕಿ ಬೆಳೆ ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಈ ಬಾರಿ ಸಕಾಲದಲ್ಲಿ ಮಳೆಯಾಗದೇ ಬೆಳೆಗಳು ಈಗಾಗಲೇ ಒಣಗಿ ಹೋಗಿದ್ದು, ರೈತರು ಮಹಾನಗರಗಳಿಗೆ ಗೂಳೇ ಹೋಗಲು ಮುಂದಾಗಿದ್ದಾರೆ, ಇನ್ನು ಕೆಲವು ರೈತರು ಉಳಿದ ಬೆಳೆ ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂದು ಟ್ಯಾಂಕರ್‌ಗಳಿಂದ ನೀರು ತಂದು ಹಾಕುತ್ತಿದ್ದಾರೆ.
ಕೈಕೊಟ್ಟ ಮಳೆ: ದಿನೇ ದಿನ ಬಿಗಡಾಯಿಸುತ್ತಿರುವ ಬರ..!
ಮಸ್ಕಿ ತಾಲೂಕನ್ನು 2ನೇ ಹಂತದಲ್ಲಿ ತೀವ್ರ ಬರಪೀಡಿತ ತಾಲೂಕು ಎಂದು ಈಗಾಗಲೇ ಸರ್ಕಾರ ಘೋಷಣೆ ಮಾಡಿದೆ. ರೈತರು ಲಕ್ಷಾಂತರ ರುಪಾಯಿ ಸಾಲ ತಂದು ಬೆಳೆ ಮಾಡಿದ್ದು, ಮಳೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಮ್ಮ ಹೋಲದಲ್ಲಿ 5 ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯನ್ನು ಬೆಳೆಯಲಾಗಿದೆ. ಆದರೆ ಮಳೆಯಾಗದೇ ಬೆಳೆಗಳು ಒಣಗುತ್ತಿವೆ. ಆದ್ದರಿಂದ 5 ಟ್ಯಾಂಕರ್‌ಗಳಿಂದ ಮೆಣಸಿನ ಗಿಡಗಳಿಗೆ ನೀರು ಹಾಕುತ್ತಿದ್ದೇವೆ ಎಂದು ನಾಗಲಾಪೂರ ರೈತ ಮಲ್ಲಪ್ಪ ತಿಳಿಸಿದ್ದಾರೆ.