ಯುಗಾದಿಯಂದು ಹೊಸ ಬಟ್ಟೆ ಹಾಕಲ್ಲ ಸ್ನಾನಾನೂ ಮಾಡಲ್ಲ: ಹಬ್ಬ ಆಚರಣೆ ಮಾಡಿದ್ರೆ ಕೆಡಾಗುತ್ತಂತೆ..!

*  ಯುಗಾದಿ ಹಬ್ಬದಾಚರಣೆ ಮಾಡೋದಿಲ್ಲ
*  ಯುಗಾದಿಯ ದಿನ ಈ ಜನರಿಗೆ ಸೂತಕ ಬಂದಂತೆ
*  ಭಾರತದಲ್ಲಿ ಯುಗಾದಿ ಹಬ್ಬಕ್ಕೆ ತನ್ನದೇ ಅದ ವಿಶಿಷ್ಟತೆ ಹೊಂದಿದೆ 
 

This Community People Not Celebrate Yugadi Festival at Kudligi in Vijayanagara grg

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ವಿಜಯನಗರ 

ವಿಜಯನಗರ (ಏ.03): ಹಿಂದೂಗಳಿಗೆ ಯುಗಾದಿ ಹಬ್ಬವೇ ಹೊಸ ವರ್ಷ. ಹೊಸ ವರ್ಷ ಹೊಸತನವನ್ನು ತರುವುದೇ ಯುಗಾದಿ.‌ ಋತುಗಳ ಬದಲಾವಣೆಗೆ ಅನುಗುಣವಾಗಿ ಹೊಸತನ ಕಾಣುವ ದಿನವೆಂದು ದೇಶದ್ಯಾಂತ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಆದ್ರೇ ಕೂಡ್ಲಿಗಿಯ ಈ‌ ಜನಾಂಗದವರು‌ ಮಾತ್ರ ಇದನ್ನು ಸೂತಕದ ದಿನವೆಂದು ಭಾವಿಸುತ್ತಾರೆ. 

ಹೊಸ ಬಟ್ಟೆ ಹಾಕಲ್ಲ ಸ್ನಾನ ಕೂಡ ಮಾಡಲ್ಲ

ಹೌದು, ಯುಗಾದಿ ಅಂದ್ರೆ ಸಾಕು, ಹಿಂದೂಗಳ ಪಾಲಿಗೆ ಅದು ಹೊಸ ವರ್ಷ(New Year). ಆ ಹೊಸದಿನದಂದು ಬೇವು ಬೆಲ್ಲ ಕೊಟ್ಟು ಬಾಳಲ್ಲಿ ಕಹಿ ಹೋಗಿ ಸಿಹಿ ಮಾತ್ರ ಇರಲಿ ಅಂತ ಹಾರೈಸುತ್ತಾರೆ. ಯುಗಾದಿಯ ದಿನ ದೇಶಾದ್ಯಾಂತ ಇರುವ ಹಿಂದೂಗಳು ಅಭ್ಯಂಜನ ಸ್ನಾನ, ಪೂಜೆ, ಹೊಸಬಟ್ಟೆ ಧಾರಣೆ, ಸಿಹಿ ಖಾದ್ಯ ಸಹಿತ ಭೋಜನ ಬೇವು ಬೆಲ್ಲ ನೀಡಿ ಸಂಭ್ರಮಿಸ್ತಾರೆ. ಆದ್ರೇ ಕೂಡ್ಲಿಗಿ(Kudligi) ಪಟ್ಟಣದ ಗುಪ್ಪಾಲ್, ಕಾವಲಿ, ಜಿಂಕಾಲ್, ಭಂಗಿ ಮತ್ತು ತಳವಾರ ಸಮುದಾಯದ 300 ಕುಟುಂಬಗಳು ಯುಗಾದಿಯನ್ನು(Yugadi) ಕರಾಳ ದಿನವನ್ನಾಗಿ ಆಚರಣೆ ಮಾಡುತ್ತಾ ಬಂದಿದೆ. ಇನ್ನೂ ಇದರ ಹಿನ್ನಲೆ ನೋಡೋದಾದ್ರೇ ಈ ಸಮುದಾಯಗಳ ಪೂರ್ವಜರು, ಯುಗಾದಿಗೆ ಬೇಕಾಗುವ ಮಾವಿನ ಸೊಪ್ಪು, ಬೇವಿನ ಸೊಪ್ಪು ತರಲು ಹೋದಾಗ ಮರ ಹತ್ತಿದಾಗ ಆಯ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದರಂತೆ.  ಹೀಗಾಗಿ ಅಂದಿನಿಂದ ಇಂದಿನವರೆಗೆ ಈ ಸಮುದಾಯಗಳು ಇಂದಿಗೂ ಹಬ್ಬ ಆಚರಣೆ ಮಾಡೋದಿಲ್ಲ.‌ 

This Community People Not Celebrate Yugadi Festival at Kudligi in Vijayanagara grg

ಮಂಗಳಮುಖಿಯರ ಆಟಕ್ಕೆ ಹೈರಾಣದ ಯುವಕ: ಲಿಂಗಪರಿವರ್ತನೆ ಮಾಡಿ ಭಿಕ್ಷಾಟನೆಗೆ ಕಳುಹಿಸುತ್ತಾರಂತೆ!

ದೇವರಿಗೆ ದೀಪ ಕೂಡ ಹಚ್ಚೋದಿಲ್ಲ

ಹಬ್ಬವೇ(Festiaval) ಮಾಡೋಲ್ಲ ಎನ್ನುವದಷ್ಟೇ ಅಲ್ಲ‌.‌ ಯುಗಾದಿಯ ದಿನ ಹೊಸ ಬಟ್ಟೆ ಹಾಕೋದಿಲ್ಲ, ಸ್ನಾನ ಕೂಡ ಮಾಡೋದಿಲ್ಲ. ಕನಿಷ್ಠ ಮನೆಯಲ್ಲಿ ದೇವರಿಗೆ(God) ದೀಪ ಕೂಡ ಹಚ್ಚೋದಿಲ್ಲ. ಇನ್ನೂ ಅಂದಿನ ದಿನ ಮನೆಯಲ್ಲಿ ಅಡುಗೆ(Food) ಮಾಡೋದಿಲ್ಲ ಹಿಂದಿನ ದಿನದ ತಂಗಳನ್ನು ತಿನ್ನುತ್ತಾರೆ. ತಾವು ಮಾಡೋದಿಲ್ಲ‌ ಮತ್ತು ಬೇರೆಯವರು ಬೇವು ಬೆಲ್ಲ ಕೊಟ್ರೂ ತಿನ್ನೋದಿಲ್ಲ. ಇನ್ನೂ ಕೂಡ್ಲಿಗಿ ಪಟ್ಟಣದ ವಿವಿಧ ಸಮುದಾಯದ ಜೊತೆಗೆ ಅಗ್ರಹಾರ ದೊಡ್ಡಮನೆಯ ವಂಶಸ್ಥರು ಕೂಡ ಇದೇ ರೀತಿಯಲ್ಲಿ ಆಚರಣೆ ಮಾಡ್ತಾರೆ. ಒಟ್ಟಾರೆ ಒಂದೊಂದು ಸಮುದಾಯದಲ್ಲಿ ಒಂದೊಂದು ರೀತಿಯಲ್ಲಿ ಆಚರಣೆ(Celebrate) ಮಾಡ್ತಾರೆ ಅನ್ನೋದಕ್ಕೆ ಈ ಆಚರಣೆಯೇ ಸಾಕ್ಷಿಯಾಗಿದೆ.  

ಐತಿಹಾಸಿಕ ರಾಜ್ಯಪ್ರಸಿದ್ದಿ ಉಚ್ಚಂಗಿದುರ್ಗ ಜಾತ್ರೆಗೆ ಹರಿದು ಬರುತ್ತಿರುವ ಜನಸಾಗರ

ವಿಜಯನಗರ: ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಕಳೆಗುಂದಿದ್ದ ಐತಿಹಾಸಿಕ ಉಚ್ಚಂಗಮ್ಮ ಜಾತ್ರೆಗೆ ಚಾಲನೆ ಸಿಕ್ಕಿದೆ. ವಿಜಯನಗರ  ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ಪ್ರತಿ ವರ್ಷ ಯುಗಾದಿಗೆ ಉಚ್ಚಂಗಮ್ಮನ ಜಾತ್ರಾ ಮಹೋತ್ಸವ  ನಡೆಯುತ್ತದೆ. 

ಉಚ್ಚಂಗಿದುರ್ಗ ಗ್ರಾಮದ ಬೆಟ್ಟಕ್ಕೆ ಹೊಂದಿಕೊಂಡಿರುವ  ಹಾಲಮ್ಮನ ತೋಫಿನಲ್ಲಿ ಮಾ.31 ರಿಂದ ಏ.04 ರವರೆಗೂ  ಜಾತ್ರೆ  ನಡೆಯಲಿದೆ. ಕೋವಿಡ್-19 ನಿಂದ ಕಳೆದ ಎರಡು ವರ್ಷ ಜಾತ್ರೆಗೆ ನಿರ್ಬಂಧ ಹೇರಿದ್ದು, ಈ ವರ್ಷ ಕೋವಿಡ್ ಸೋಂಕು ಕಡಿಮೆಯಾದ ಕಾರಣ ಜಾತ್ರೆಗೆ ಭಕ್ತ ಸಾಗರವೇ ಹರಿದುಬರುತ್ತಿದೆ‌. ಬಂಡಿ ಗಾಡಿ ಟ್ರಾಕ್ಟರ್ , ಬಸ್ ಇತರೇ ವಾಹನಗಳಲ್ಲಿ  ಬರುವ ಭಕ್ತರಿಗೆ ಯಾವುದೇ ಮೂಲ ಸೌಕರ್ಯ ಕೊರತೆಯಾಗದಂತೆ ತಾಲ್ಲೂಕು  ಆಡಳಿತ, ಉಚ್ಚಂಗಿದುರ್ಗ ಗ್ರಾಮ ಪಂಚಾಯಿತಿ ಎಚ್ಚರವಹಿಸಿದೆ. ನೀರು‌ ವಸತಿ ಶುದ್ಧ ಕುಡಿಯುವ ನೀರು ಸ್ವಚ್ಛತೆ ಸೇರಿದಂತೆ ಎಲ್ಲವುಗಳ ಬಗ್ಗೆ ಸ್ಥಳೀಯ ಅಧಿಕಾರಿಗಳು‌ ನಿಗಾವಹಿಸಿದ್ದಾರೆ. ಅಷ್ಟೇ ಅಲ್ಲದೇ ಶ್ರೀ ಹಾಲಮ್ಮ ದೇವಸ್ಥಾನದ ಸಮಿತಿ, ಪೊಲೀಸ್ ಇಲಾಖೆ,ಆರೋಗ್ಯ ಇಲಾಖೆ, ಮಹಿಳಾ ಮತ್ತು ಕಲ್ಯಾಣ ಇಲಾಖೆಗಳ ಆಧಿಕಾರಿಗಳು ಭಕ್ತರ ಬಗ್ಗೆ ವಿಶೇಷ ನಿಗಾವಹಿಸಿವೆ.
 

Latest Videos
Follow Us:
Download App:
  • android
  • ios