ಹಾಸನ [ಜ.25]: ಮಹಿಳೆಯೊಬ್ಬರೆ ಇರವುದನ್ನು ಖಚಿತ ಮಾಡಿಕೊಮಡು ಮನೆಗೆ ನುಗ್ಗಿದ ಕಳ್ಳನೊಬ್ಬನನ್ನು ಹಿಡಿದು ಸ್ಥಳೀಯರು ಥಳಿಸಿದ ಘಟನೆ ಹಾಸನದಲ್ಲಿ ನಡೆದಿದೆ. 

ಹಾಸನ ಜಿಲ್ಲೆಯ ಅರಳಪೇಟೆಯಲ್ಲಿ ಶುಕ್ರವಾರ ರಾತ್ರಿ ಮಹಿಳೆ ಒಬ್ಬರೆ ಇದ್ದಾರೆ ಮನೆಗೆ ನುಗ್ಗಿದ ಕಳ್ಳ ಕಳವು ಮಾಡಲು ಯತ್ನಿಸಿದ್ದಾನೆ. ಈ ವೇಳೆ ಶಬ್ದವಾಗುತ್ತಿರುವುದನ್ನು ಅರಿತ ಮಹಿಳೆ ಆತನನ್ನು ನೋಡಿದ್ದಾಳೆ. 

ಕಳ್ಳ ತಕ್ಷಣ ಮಹಿಳೆಯನ್ನು ಹಿಡಿದು ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ. ತಕ್ಷಣ ಆಕೆ ಅಲ್ಲಿಂದ ತಪ್ಪಿಸಿಕೊಂಡು ಹೊರಕ್ಕೆ ಬಂದು ಕೂಗಿಕೊಂಡಿದ್ದಾಳೆ. 
ಪ್ರಿಯಕರನ ಜೊತೆಗೆ ಲಾಡ್ಜ್‌ನಲ್ಲಿ ಇರುವಾಗಲೇ ಪತ್ನಿ ಹಿಡಿದ ಪತಿ.

ಈ ವೇಳೆ ಸ್ಥಳಕ್ಕೆ ಬಂದ ಝನರು ಆತನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ. 

ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.