ಸಕ​ಲೇ​ಶ​ಪು​ರ [ಜ.25]: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪಟ್ಟಣದ ಲಾಡ್ಜ್‌ವೊಂದರಲ್ಲಿ ಪತ್ನಿ ಹಾಗೂ ಪ್ರಿಯಕರನನ್ನು ಪತಿಯೇ ರೆಡ್‌ಹ್ಯಾಂಡ್‌ ಆಗಿ ಪೊಲೀಸರಿಗೆ ಹಿಡಿದು ಕೊಟ್ಟಿರುವ ಘಟನೆ ಪಟ್ಟಣದಲ್ಲಿ ಶುಕ್ರ​ವಾರ ನಡೆದಿದೆ.

ಪಟ್ಟಣದ ನಿವಾಸಿ ದೇವರಾಜ್‌ (47)ಎಂಬಾತ ಕಳೆದ 15 ವರ್ಷಗಳ ಹಿಂದೆ ನೇತ್ರಾವತಿ ಎಂಬಾಕೆಯನ್ನು ಮದುವೆಯಾಗಿದ್ದು, ಮದುವೆಯಾದ ಕೆಲ ವರ್ಷ ಮಾತ್ರ ದಂಪತಿ ಅನೋನ್ಯವಾಗಿದ್ದರು. ಈ ನಡುವೆ ದೇವರಾಜ್‌ ಪತ್ನಿ ಕೆಲವರೊಡನೆ ಅನೈತಿಕ ಸಂಬಂಧ ಬೆಳೆಸಿದ್ದು, ಈ ಕುರಿತು ಪತಿ ಹಲವು ಬಾರಿ ಆಕೆಗೆ ಬುದ್ಧಿವಾದ ಹೇಳಿದ್ದರೂ ಚಾಳಿ ಬಿಡದ ಪತ್ನಿಯಿಂದ ವಿಚ್ಛೇದನ ನೀಡುವಂತೆ ಆಗ್ರಹಿಸಿ ಪಟ್ಟಣದ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ತಾಯಿ, 3 ವರ್ಷದ ಮಗುವಿನ ಮೇಲೆ ಆ್ಯಸಿಡ್ ದಾಳಿ...

ಪತ್ನಿ ವಿರುದ್ಧ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ. ಶುಕ್ರವಾರ ಖಚಿತ ಮಾಹಿತಿಯ ಮೇರೆಗೆ ಪಟ್ಟಣದ ಲಾಡ್ಜ್‌ವೊಂದರಲ್ಲಿ ನೇತ್ರಾವತಿ, ಪ್ರಸಾದ್‌ ಎಂಬುವರ ಜೊತೆ ಅಕ್ರಮ ಸಂಬಂಧ ಹೊಂದುವ ವೇಳೆ ಪೋಲಿಸರನ್ನು ಕರೆದುಕೊಂಡು ಹೋದ ಪತಿ ಪೊಲೀಸರಿಗೆ ತೋರಿಸಿದ್ದಾನೆ.

ಕಾಂಡೋಮ್ ಬಳಸಲ್ಲ ಎಂದಿದ್ದಕ್ಕೆ ಸೆಕ್ಸ್ ನಿರಾಕರಿಸಿದ್ಲು : ಕೊಂದೇ ಬಿಟ್ಟ ಪಾಪಿ ...

ನೇತ್ರಾವತಿಯಿಂದ ವಿನಾಕಾರಣ ನಾನು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಆಕೆ ಹಾಗೂ ಆಕೆಯ ಪ್ರಿಯಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನನ್ನ ಮನೆಯನ್ನು ಆಕೆಯಿಂದ ಬಿಡಿಸಿಕೊಡಬೇಕೆಂದು ಪಟ್ಟಣ ಠಾಣೆಯಲ್ಲಿ ದೇವರಾಜ್‌ ದೂರು ನೀಡಿದ್ದಾರೆ.