ನಟಿ ರಾಧಿಕಾ ಪಂಡಿತ್ ಅವ್ರ ಫೇವರೇಟ್ ಬಾಯ್ಸ್ ಯಾರು ಗೊತ್ತಾ..? ಯಶ್ ಇರೋವಾಗ ಇದ್ಯಾರಪ್ಪಾ ಫೇವರೇಟ್ ಬಾಯ್ ಅಂತ ಅಚ್ಚರಿಯಾಗ್ತಿದ್ಯಾ..? ಕ್ಯೂಟ್ ಫೋಟೋ ಹಾಕಿ ಇವ್ರೇ ನನ್ ಫೇವರೇಟ್ ಬಾಯ್ಸ್ ಅಂದಿದ್ದಾರೆ ರಾಧಿಕಾ..!

ರಾಧಿಕಾ-ಯಶ್ ಅವರ ಮುದ್ದಾದ ಮಗಳು ಐರಾ ಸೋಷಿಯಲ್ ಮೀಡಿಯಾದಲ್ಲಿ ಹವಾ ಮಾಡಿದ್ದೇ ಮಾಡಿದ್ದು. ಈಗ ಜೂನಿಯರ್ ಯಶ್‌ ಸಮಯ. ಲಾಕ್‌ಡೌನ್ ಆದ್ರೂ ಇನ್‌ಸ್ಟಾದಲ್ಲಿ ಮಿಂಚುತ್ತಿದ್ದಾರೆ ತಂದೆ ಮಗ.

ರಾಕಿಂಗ್‌ ಸ್ಟಾರ್‌ನೇ ಮೀರಿಸುತ್ತಿದೆ ಮಕ್ಕಳ ಹವಾ; ಐರಾ- ಜೂನಿಯರ್‌ Y!

ಮುದ್ದಾದ ನಗುವಿನ ಜೂನಿಯರ್ ಯಶ್‌ ಮತ್ತು ಕ್ಯೂಟ್ ಬೇಬಿ ಐರಾ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ರಾಧಿಕಾ ಯಶ್ ಹಾಗೂ ಜೂನಿಯರ್ ಯಶ್ ಪೋಟೋ ಪೋಸ್ಟ್ ಮಾಡಿ ನನ್ನ ಫೇವರೇಟ್ ಬಾಯ್ಸ್ ಎಂದು ಬರೆದುಕೊಂಡಿದ್ದಾರೆ.

ಮುದ್ದಾದ ಫೋಟೋವನ್ನು 60 ನಿಮಿಷದಲ್ಲಿ 1 ಲಕ್ಷಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. 1299 ಜನರು ಫೋಟೋಕೆ ಕಮೆಂಟ್ ಮಾಡಿದ್ದಾರೆ. ಕ್ಯೂಟ್, ಸೂಪರ್ ಅಂತ ಕಾಮೆಂಟ್ ಹಾಕಿ ಜೂನಿಯರ್ ಯಶ್‌ ನಗುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಭಿಮಾನಿಗಳು.

ಮಿಸ್‌ ಮಾಡದೇ ದಿನಾ ಯಶ್‌ಗೆ ಊಟ ಮಾಡಿಸೋ ಐರಾ, ಅಪ್ಪ -ಅಮ್ಮ ಇಲ್ಲದೇ ಜೂನಿಯರ್ ಮಲಗೋದೇ ಇಲ್ವಂತೆ!