ಲಾಕ್‌ಡೌನ್: 'ರಂಜಾನ್, ಬಸವ ಜಯಂತಿಗೆ ಆಚರಣೆಗೆ ಅವಕಾಶವಿಲ್ಲ'
ಯಾವುದೇ ಹಬ್ಬ ಜಾತ್ರೆ, ಸಭೆ, ಸಮಾರಂಭ, ಹರಿದಿನ ಆಚರಣೆಗಳಿಗೆ ಅವಕಾಶವಿಲ್ಲ|ಶಾಂತಿ ಸಭೆಯಲ್ಲಿ ಸಿಪಿಐ ಎಂ. ನಾಗರಡ್ಡಿ ಸೂಚನೆ| ಮುಸ್ಲಿಂ ಬಾಂಧವರು ದರ್ಗಾ, ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿಲ್ಲ| ತಮ್ಮ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಬಹುದು| ಬಸವ ಜಯಂತಿ ನಿಮಿತ್ತ ಯಾವುದೇ ಜಾತ್ರೆ ಆಚರಣೆ ಹಾಗೂ ಎತ್ತಿನ ಮೆರವಣಿಗೆಗೆ ನಿಷೇಧ|
ಯಲಬುರ್ಗಾ(ಏ.22): ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಯಾವುದೇ ಹಬ್ಬ ಜಾತ್ರೆ, ಸಭೆ, ಸಮಾರಂಭ, ಹರಿದಿನ ಆಚರಣೆಗಳಿಗೆ ಅವಕಾಶವಿಲ್ಲ ಎಂದು ಸಿಪಿಐ ಎಂ. ನಾಗರಡ್ಡಿ ಹೇಳಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಕೊರೋನಾ ವೈರಸ್ ಇರುವುದರಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಂಜಾನ್ ಹಾಗೂ ಬಸವ ಜಯಂತಿ ಹಬ್ಬ ಆಚರಣೆಯ ನಿಮಿತ್ಯ ಕರೆಯಲಾಗಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಸ್ಲಿಂ ಬಾಂಧವರು ದರ್ಗಾ, ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿಲ್ಲ, ತಮ್ಮ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಬಹುದು ಹಾಗೂ ಬಸವ ಜಯಂತಿ ನಿಮಿತ್ತ ಯಾವುದೇ ಜಾತ್ರೆ ಆಚರಣೆ ಹಾಗೂ ಎತ್ತಿನ ಮೆರವಣಿಗೆಯನ್ನು ನಿಷೇಧಗೊಳಿಸಲಾಗಿದೆ ಎಂದರು.
ಕೊರೋನಾ ಕಾಟ: ರೋಡ್‌ನಲ್ಲಿ ಗರಿ ಗರಿ ನೋಟ್ ನೋಟ್ ಬಿದ್ರೂ ಮುಟ್ಟದ ಜನ..!
ಈ ತಾಲೂಕಿನಲ್ಲಿ ಹಿಂದೂ-ಮುಸ್ಲಿಂರು ಭಾವೈಕ್ಯತೆಯಿಂದ ನಡೆದುಕೊಳ್ಳುವ ಮೂಲಕ ಹೆಸರುವಾಸಿಯಾಗಿದ್ದಾರೆ. ಇದು ಸದಾ ಶಾಂತಿ ತಾಲೂಕಾಗಿದೆ ಹೀಗಾಗಿ ಲಾಕಡೌನ ಆದೇಶವನ್ನು ಎಲ್ಲರೂ ಜಾತಿ, ಭೇದವನ್ನು ಮರೆತು ಗೌರವಿಸಬೇಕು.ಯಾರೇ ಆಗಲಿ ಸರಕಾರದ ಆದೇಶ ಉಲ್ಲಂಘನೆ ಮಾಡಿದರೆ ಯಾವುದೇ ಮುಲಾಜಿಯಿಲ್ಲದೇ ಕ್ರಮಕ್ಕೆ ಮುಂದಾಗುತ್ತೇನೆ ಎಂಬ ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ಹಿಂದೂ,ಮುಸ್ಲಿಂರು ಎಲ್ಲರಿಗೂ ಒಂದೇ ಕಾನೂನು ಪ್ರತಿಯೊಬ್ಬರೂ ಸರಕಾರದ ನಿಯಮಗಳನ್ನು ಪಾಲಿಸಬೇಕು, ರಂಜಾನ್ ನಿಮಿತ್ತ ಮನೆಯಲ್ಲೇ ಮುಸ್ಲಿಂರು ನಮಾಜ್ ಮಾಡಬೇಕು, ಅದರಂತೆ ಬಸವ ಜಯಂತಿ ನಿಮಿತ್ತ ಹಿಂದೂಗಳು ಯಾವುದೇ ಜಾತ್ರೆ ಹಾಗೂ ಎತ್ತಿನ ಮೆರವಣಿಗೆ ಮಾಡಕೂಡದು. ಹೀಗಾಗಿ ಎಲ್ಲರೂ ತಾಲೂಕಾಡಳಿತ ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಪಿಎಸ್‌ಐ ಹನುಮಂತಪ್ಪ ತಳವಾರ, ಪಪಂ ಮುಖ್ಯಾಧಿಕಾರಿ ಮಹೇಶ ನಿಡಶೇಷಿ, ಗಣ್ಯರಾದ ಅಂದಾನಗೌಡ ಉಳ್ಳಾಗಡ್ಡಿ, ವೀರಣ್ಣ ಹುಬ್ಬಳ್ಳಿ, ಸಂಗಣ್ಣ ಟೆಂಗಿನಕಾಯಿ, ಬಸವರಾಜ ಪೂಜಾರ, ಅಕ್ತರಾಸಬ ಖಾಜಿ, ಎಂ.ಎಫ್. ನದಾಫ, ಮೈಬೂಸಾಬ ಮಕಾಂದರ, ಎಚ್.ಎಚ್. ಹಿರೇಮನಿ, ಗೌಸುಸಾಬ ಕನಕಗಿರಿ, ಸುರೇಶಗೌಡ ಶಿವನಗೌಡ್ರ, ಇಕ್ಬಾಲಸಾಬ ವಣಗೇರಿ, ರೇವಣೆಪ್ಪ ಹಿರೇಕುರಬರ, ಈರಪ್ಪ ಚ್ಯಾಕರಿ, ರಿಯಾಜ ಖಾಜಿ, ಹನುಮಂತ ಭಜೆಂತ್ರಿ, ಬಸವಲಿಂಗಪ್ಪ ಕೊತ್ತಲ, ಈರಪ್ಪ ಬಣಕಾರ, ಅಖ್ತರಸಾಬ ವಣಗೇರಿ, ಬುಡೆನ್‌ಸಾಬ,ಮುರ್ತುಜಾ ನಾಯಕ ಇದ್ದರು.