Asianet Suvarna News Asianet Suvarna News

Hassan News: ಗುಂಡಿ ಮುಚ್ಚೋಕೂ ಪಿಡಬ್ಲ್ಯುಡಿ ಬಳಿ ಹಣ ಇಲ್ವಂತೆ!

 ನಗರದ ಪ್ರಮುಖ ವೃತ್ತವಾದ ಎನ್‌ಆರ್‌ ವೃತ್ತದಲ್ಲಿರುವ ಗುಂಡಿಗಳು ಡಬಲ್‌ ಎಂಜಿನ್‌ ಸರ್ಕಾರವನ್ನು ಅಣಕಿಸುವಂತಿವೆ. ಹಾಗೆಯೇ ಅನುದಾನ ನೀಡುವಲ್ಲಿ ಈ ಸರ್ಕಾರ ಹಾಸನ ಜಿಲ್ಲೆಗೆ ತಾರತಮ್ಯ ಮಾಡುತ್ತಿದೆ ಎನ್ನುವ ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ ಅವರ ಮಾತಿಗೆ ಇಂಬು ನೀಡುವಂತಿವೆ. 

there is no money to close the roadblock PWD hassan  rav
Author
First Published Sep 10, 2022, 11:35 AM IST

ಹಾಸನ ಸೆ.(10) : ನಗರದ ಪ್ರಮುಖ ವೃತ್ತವಾದ ಎನ್‌ಆರ್‌ ವೃತ್ತದಲ್ಲಿರುವ ಗುಂಡಿಗಳು ಡಬಲ್‌ ಎಂಜಿನ್‌ ಸರ್ಕಾರವನ್ನು ಅಣಕಿಸುವಂತಿವೆ. ಹಾಗೆಯೇ ಅನುದಾನ ನೀಡುವಲ್ಲಿ ಈ ಸರ್ಕಾರ ಹಾಸನ ಜಿಲ್ಲೆಗೆ ತಾರತಮ್ಯ ಮಾಡುತ್ತಿದೆ ಎನ್ನುವ ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ ಅವರ ಮಾತಿಗೆ ಇಂಬು ನೀಡುವಂತಿವೆ. ಇನ್ನೂ ಮುಂದುವರೆದು ಈ ಗುಂಡಿಗಳನ್ನು ಮುಚ್ಚಲಿಕ್ಕೂ ನಮ್ಮ ಬಳಿ ಅನುದಾನ ಇಲ್ಲ ಎಂದಿರುವ ಪಿ ಡಬ್ಲ್ಯುಡಿ ಇಲಾಖೆಯ ಹೇಳಿಕೆ ಸರ್ಕಾರವನ್ನೇ ಮುಜುಗರಕ್ಕೀಡುಮಾಡಿದೆ.

ಬೀದರ್‌, ಹಾವೇರಿ, ಹಾಸನ ಸೇರಿ ರಾಜ್ಯಕ್ಕೆ 7 ಹೊಸ ವಿವಿ

ಹೌದು...ನಗರದ ನಿವಾಸಿ ನವೀನ್‌ ತಾಜ್‌ ಎಂಬುವವರು ಎನ್‌ಆರ್‌ ವೃತ್ತದಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಪಿಡಬ್ಲ್ಯುಡಿಗೆ ‘ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣ’ (ಐಪಿಜಿಆರ್‌ಎಸ್‌)ಪೊರ್ಟಲ್‌ನಲ್ಲಿ ಕಳೆದ ಜನವರಿಯಲ್ಲಿ ಮನವಿ ಮಾಡಿದ್ದರು. ಸರ್ಕಾರದ ಆದೇಶದ ಪ್ರಕಾರ ಐಪಿಜಿಆರ್‌ಎಸ್‌ ಪೋರ್ಟಲ್‌ನಲ್ಲಿ ಸಲ್ಲಿಸುವ ಕುಂದು ಕೊರತೆಗಳ ದೂರನ್ನು ಸಂಬಂದಪಟ್ಟಇಲಾಖೆಗಳು ಪರಿಶೀಲಿಸಿ 30 ದಿನಗಳೊಡಗೆ ವಿಲೇವಾರಿ ಮಾಡಬೇಕು. 30 ದಿನಗಳ ನಂತರ ಪ್ರಕರಣವು ಬಾಕಿ ಇದ್ದಲ್ಲಿ ಮೇಲಧಿಕಾರಿಗಳಿಗೆ ದೂರು ಫಾರ್ವರ್ಡ್‌ ಅಗುತ್ತದೆ. ಅವರು ಇದನ್ನು ಪರಿಶೀಲಿಸಿ ಕೆಳಹಂತದ ಅ​ಧಿಕಾರಿ ಮಟ್ಟದಲ್ಲಿ ಅನಗತ್ಯ ವಿಳಂಬವಾಗಿದ್ದರೆ ಆ ಅ​ಧಿಕಾರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಲು ಅವಕಾಶ ಇರುತ್ತದೆ. ಈ ಪೋರ್ಟಲ್‌ನಲ್ಲಿ ಸಲ್ಲಿಕೆಯಾಗುವ ದೂರುಗಳ ನಿರ್ವಹಣೆ ಬಗ್ಗೆ ಜಿಲ್ಲಾಧಿ​ಕಾರಿ ನೇತೃತ್ವದ ಸಮಿತಿಯು ಪ್ರತಿ ತಿಂಗಳು ಪರಿಶೀಲನಾ ಸಭೆ ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಬೇಕಾಗಿರುತ್ತದೆ.

ಆದರೆ ನವೀನ್‌ ತಾಜ್‌ ಅವರ ದೂರಿಗೆ ಸಂಬಂಧಿಸಿದಂತೆ ಇಂತಹ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಕಳೆದ ಜನವರಿ ತಿಂಗಳಲ್ಲಿ ಸಲ್ಲಿಸಿದ ಈ ದೂರಿಗೆ 238 ದಿನಗಳ ನಂತರ ಸೆಪ್ಟೆಂಬರ್‌ 8 ರಂದು ‘‘ನಮ್ಮ ಇಲಾಖೆಯಲ್ಲಿ ಈ ಕೆಲಸಕ್ಕೆ ಅನುದಾನದ ಕೊರತೆ ಇದ್ದು 2022-23ನೇ ಸಾಲಿನ ಅನುದಾನಕ್ಕಾಗಿ ಕಾಯುತ್ತಿದ್ದೇವೆ. ಅನುದಾನ ಮಂಜೂರಾದ ಕೂಡಲೆ ಟೆಂಡರ್‌ ಪ್ರಕ್ರಿಯೆಯ ಮೂಲಕ ದುರಸ್ತಿ ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುತ್ತೇವೆ’’ ಎಂದು ಹಾಸನ ಪಿ ಡಬ್ಲ್ಯು ಡಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್‌ (ಇಇ) ಉತ್ತರಿಸಿದ್ದಾರೆ.

ವಕೀಲರ ಜೀವಹಾನಿಯಾಗಿತ್ತು: ಎನ್‌ಆರ್‌ ವೃತ್ತ ಎಂದರೆ ಹಾಸನ ನಗರದ ಪಾಲಿಗೆ ಪ್ರಮುಖ ವೃತ್ತ. ಆದರೆ ನಗರಸಭೆ ಇರಬಹುದು ಲೋಕೋಪಯೋಗಿ ಇಲಾಖೆ ಇರಬಹುದು ಕನಿಷ್ಟಈ ವೃತ್ತವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಈ ವೃತ್ತದ ಸಿಗ್ನಲ್‌ ಬಳಿಯೇ ಗುಂಡಿಗಳಾಗಿದ್ದು, ಒಂದೆಡೆ ರೆಡ್‌ ಸಿಗ್ನಲ್‌ ಬೀಳುತ್ತದೆ ಎನ್ನುವ ಆತುರದಲ್ಲಿ ವಾಹನ ಸವಾರರು ವೇಗವಾಗಿ ಚಲಿಸುತ್ತಿರುತ್ತಾರೆ. ಆದರೆ ಇದಕ್ಕೆ ಇಲ್ಲಿರುವ ಗುಂಡಿಗಳು ತೊಡಕಾಗಿವೆ. ವಾಹನಗಳು ಸಲೀಸಾಗಿ ಸಂಚರಿಸಲಾಗದೆ ಜನರ ಸಮಯ ವ್ಯರ್ಥವಾಗುತ್ತಿದೆ.

ತಾಕತ್ತಿದ್ದರೆ ರೈತರ ಸಾಲ ಮನ್ನಾ ಮಾಡಲಿ: ಎಚ್‌.ಡಿ.ರೇವಣ್ಣ

ಇದೆಲ್ಲಾ ಸಮಸ್ಯೆಗಳ ನಡುವೆ ಈ ಸರ್ಕಲ್‌ನಲ್ಲಿ ಅವೈಜ್ಞಾನಿಕ ವಾಹನ ಸಂಚಾರ ಇದೆ. ಸಿಗ್ನಲ್‌ ಲೈಟುಗಳು ಕೂಡ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಹಾಗೆಯೇ ರಸ್ತೆ ದಾಟುವ ಜನರು ಕೂಡ ಸಿಗ್ನಲ್‌ಗಳನ್ನು ಸರಿಯಾಗಿ ಪಾಲಿಸದೆ ಬೇಕಾಬಿಟ್ಟಿಯಾಗಿ ರಸ್ತೆ ದಾಟುತ್ತಿರುತ್ತಾರೆ. ಇದೆಲ್ಲದರಿಂದಾಗಿ ವಾಹನ ಚಾಲಕರು ಮತ್ತು ಸವಾರರಿಗೆ ಈ ವೃತ್ತವನ್ನು ದಾಟಿಸುವುದೇ ಕಷ್ಟವಾಗಿದೆ. ಈ ವೃತ್ತದಲ್ಲಿ ಈಗಾಗಲೇ ಹಲವಾರು ಅಪಘಾತಗಳಾಗಿದ್ದು, ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಅವೈಜ್ಞಾನಿಕವಾಗಿ ರಸ್ತೆ ದಾಟುವ ಪಾದಚಾರಿಗಳಿಗೆ ಆಗಿರುವ ಸಣ್ಣಪುಟ್ಟಅಪಘಾತಗಳು ಲೆಕ್ಕಕ್ಕಿಲ್ಲ.

Follow Us:
Download App:
  • android
  • ios