Asianet Suvarna News Asianet Suvarna News

ವಿಧಾನಸಭೆ ಚುನಾವಣೆಗೆ 100 ಅಭ್ಯರ್ಥಿಗಳ ಪಟ್ಟಿ ಸಿದ್ಧ : HD Kumaraswamy

ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಪಕ್ಷದ 100 ಅಭ್ಯರ್ಥಿಗಳ ಪಟ್ಟಿಸಿದ್ಧವಿದೆ. ಆದರೆ, ಜೆಡಿಎಸ್‌ ಪಟ್ಟಿಬಿಡುಗಡೆಗೆ ನಮ್ಮ ಪಕ್ಷದ ಜ್ಯೋತಿಷಿ ಎಚ್‌.ಡಿ. ರೇವಣ್ಣ ತಕರಾರು ತೆಗೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

There is a list of 100 candidates for the assembly elections   HD Kumaraswamy snr
Author
First Published Nov 19, 2022, 5:43 AM IST

 ಮೈಸೂರು (ನ.19):  ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಪಕ್ಷದ 100 ಅಭ್ಯರ್ಥಿಗಳ ಪಟ್ಟಿಸಿದ್ಧವಿದೆ. ಆದರೆ, ಜೆಡಿಎಸ್‌ ಪಟ್ಟಿಬಿಡುಗಡೆಗೆ ನಮ್ಮ ಪಕ್ಷದ ಜ್ಯೋತಿಷಿ ಎಚ್‌.ಡಿ. ರೇವಣ್ಣ ತಕರಾರು ತೆಗೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣ ನಮ್ಮ ಪಕ್ಷದ ಜ್ಯೋತಿಷಿಗಳಾಗಿದ್ದಾರೆ. ಇಂದು ಸಮಯ ಪ್ರಸಕ್ತವಾಗಿಲ್ಲ ಎಂದು ತಕರಾರು ತೆಗೆದಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಸೂಕ್ತ ಸಮಯ ನೋಡಿಕೊಂಡು ಬಿಡುಗಡೆ ಮಾಡುತ್ತೇವೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಎಚ್‌.ಡಿ. ದೇವೇಗೌಡರ ನೇತೃತ್ವದಲ್ಲಿ ಪಟ್ಟಿಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಚಾಮುಂಡೇಶ್ವರಿಗೆ ಪೂಜೆ:

ಜೆಡಿಎಸ್‌ ಪಂಚರತ್ನ ಯಾತ್ರೆಗೂ ಮುನ್ನ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶುಕ್ರವಾರ ಬೆಳಗ್ಗೆ ಭೇಟಿ ನೀಡಿ, ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಗೆ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ಅವರು, ಪಂಚರತ್ನ ಯಾತ್ರೆ ಯಶಸ್ವಿಗಾಗಿ ಪ್ರಾರ್ಥನೆ ಸಲ್ಲಿಸಿದರು. 2018ರಲ್ಲಿ ಚಾಮುಂಡಿಬೆಟ್ಟದಿಂದಲೇ ಕುಮಾರ ಪರ್ವಕ್ಕೆ ಚಾಲನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ವೇಳೆ ಶಾಸಕರಾದ ಜಿ.ಟಿ. ದೇವೇಗೌಡ, ಬಂಡಪ್ಪ ಕಾಶಂಪುರ್‌, ಎಂ. ಅಶ್ವಿನ್‌ಕುಮಾರ್‌, ಸಿ.ಎಸ್‌. ಪುಟ್ಟರಾಜು, ಎಂಡಿಸಿಸಿ ಬ್ಯಾಂಕ್‌ (Bank)  ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ, ಮಾಜಿ ಮೇಯರ್‌ ಎಂ.ಜೆ. ರವಿಕುಮಾರ್‌ ಮೊದಲಾದವರು ಇದ್ದರು.

ಶಾಸಕರೇ ಕಣ್ಣೀರಿಟ್ಟರೇ ಅವರಿಗೆ ಮತ ಕೊಟ್ಟಜನರ ಗತಿ ಏನು?- ಎಚ್‌ಡಿಕೆ (HD Kumaraswamy) 

ಮೈಸೂರು: ಶಾಸಕರೇ ಕಣ್ಣೀರಿಟ್ಟರೆ ಅವರಿಗೆ ಮತ ಕೊಟ್ಟಜನರ ಗತಿ ಏನು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಬಸ್‌ ನಿಲ್ದಾಣ ವಿವಾದ ಕುರಿತು ಮೈಸೂರಿನಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಶಾಸಕರು ಕಣ್ಣೀರು ಹಾಕಿರುವುದನ್ನು ನಾನು ನೋಡಿದ್ದೇನೆ. ಕಣ್ಣೀರು ಹಾಕಿಸಿರುವುದನ್ನು ಗಮನಿಸಿದ್ದೇನೆ. ಇವರಿಗೆ ಮತ ನೀಡಿದ ಜನರ ಕತೆ ಏನು ಎಂದು ಕಿಡಿಕಾರಿದರು. ಮಸೀದಿಯನ್ನಾದರೂ ಮಾಡಿ, ಗೋಪುರವನ್ನಾದರೂ ಮಾಡಿ. ಜನರಿಗೆ ನೆರಳು ಕೊಡಿ. ಕೆಡಹುವ ಕೆಲಸ ಮಾಡಬೇಡಿ ಎಂದು ಅವರು ಸಲಹೆ ನೀಡಿದರು.

ಬೆಂಗಳೂರಿನ ಕೊಳಚೆ ನೀರು ತುಂಬಿದ್ದು ನಿಮ್ಮ ಸಾಧನೆ

ಕೋಲಾರ : 2006ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಚಿತ್ರಾವತಿ ಅಣೆಕಟ್ಟೆ ಉದ್ಘಾಟನೆಗೆ ಬಂದಾಗ ಯರಗೋಳ್‌ ಡ್ಯಾಂನ್ನು ಕಟ್ಟಲು 250 ಕೋಟಿ ರು.ಗಳನ್ನು ಮಂಜೂರು ಮಾಡಿದ್ದು ನಮ್ಮ ಸರ್ಕಾರ. ಆ ಡ್ಯಾಂಗೂ ಬೆಂಗಳೂರಿನ ಕೊಳಚೆ ನೀರು ತುಂಬಿದ್ದು ನಿಮ್ಮ ಸಾಧನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಶಾಸಕ ರಮೇಶ್‌ಕುಮಾರ್‌ ವಿರುದ್ಧ ಮಾಜಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಮುಳಬಾಗಿಲಿನಲ್ಲಿ ನಿನ್ನೆ(ಶುಕ್ರವಾರ) ಜೆಡಿಎಸ್‌ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮೋಸ ಮಾಡಲು ಮಿತಿ ಇರುತ್ತೆ, ಬೆಂಗಳೂರು ಕೊಳಚೆ ನೀರಿನಿಂದಾಗಿ ಇಲ್ಲಿಯ ಟೊಮೆಟೋ, ತರಕಾರಿ ಮಾರಾಟ ಆಗುತ್ತಿಲ್ಲ. ಇದು ಸಿದ್ದರಾಮಯ್ಯ ಮತ್ತು ರಮೇಶ್‌ಕುಮಾರ್‌ ಈ ಜಿಲ್ಲೆಗೆ ನೀಡಿದ ಕೊಡುಗೆ ಎಂದು ಅವರು ವ್ಯಂಗ್ಯವಾಡಿದರು.

Assembly Election 2023: ಕೋಲಾರ ಕಾಂಗ್ರೆಸ್‌ನಲ್ಲಿ ಸಮಸ್ಯೆ ಇದೆ- ಸಿದ್ದರಾಮಯ್ಯರಿಗೆ ಮುನಿಯಪ್ಪ ಸಲಹೆ

ಜೆಡಿಎಸ್‌ಗೆ ಆಶೀರ್ವಾದ ಮಾಡಿ

ಮೂರನೇ ಭಾರಿಗೆ ಸಂಪೂರ್ಣ ಆಶಿರ್ವಾದ ಮಾಡಿ. ಜನಪರ ಆಡಳಿತಕ್ಕೆ ಬೆಂಬಲ ನೀಡಿ, ಬಿಜೆಪಿಯೂ ವಿಫಲವಾಗಿದೆ. 2006ರಲ್ಲಿ ಸರ್ಕಾರದ ನಡೆಸಿದಾಗ ಬಿಜೆಪಿಯ ನಾಯಕರೊಂದಿಗೆ ಚರ್ಚಿಸಿ ಸರ್ಕಾರ ನಡೆದಿದೆ. ಈಗ ಬಿಜೆಪಿಗೆ ಮೋದಿಯವರೊಂದು ದೆಹಲಿಯಿಂದ ಲಕೋಟೆ ಬರಬೇಕು. ಇದು ಆಮಿತ್‌ ಶಾ ಮತ್ತು ನರೇಂದ್ರ ಮೋದಿ ಪಕ್ಷ. ಯಡಿಯೂರಪ್ಪ ಕಷ್ಟಪಟ್ಟು ಮುಖ್ಯಮಂತ್ರಿ ಯಾಗಿದ್ದರು, ಅವರಿಗೆ ಮೋಸ ಮಾಡಿದರು, ವೀರಶೈವರಿಗೆ ಮೋಸ ಮಾಡಿದರು, ಅವರನ್ನು ಕೆಳಗಿಳಿಸಿದರು ಬೊಮ್ಮಾಯಿ ರಬ್ಬರ್‌ ಸ್ಟಾಂಪ್‌ ಇದ್ದಂತೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಕೋವಿಡ್‌ನಿಂದಾಗಿ, ಮಳೆಯಿಂದಾಗಿ ಸಂಕಷ್ಟಕ್ಕೀಡಾದವರಿಗೆ ಯಾವ ರೀತಿ ಸ್ಪಂದಿಸಬೇಕು ಎನ್ನುವ ಚಿಂತನೆ ನಮ್ಮ ಪಕ್ಷ ಮಾಡಿದೆ. ನಮ್ಮ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದು ಮುಖ್ಯಮಂತ್ರಿ ಆಗುವುದು ಮುಖ್ಯವಲ್ಲ, ಜನರ ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮ ನಿರೀಕ್ಷೆಗಳ ಕಾರ್ಯಕ್ರಮ ನೀಡುವುದೇ ಪಂಚರತ್ನ ರಥಯಾತ್ರೆ ಉದ್ದೇಶ ಎಂದರು.

ಭಾಗ್ಯಗಳು ಬಡವರಿಗೆ ನೆರವಾಗಲಿಲ್ಲ

ಪಂಚರತ್ನ ಯಾತ್ರೆ ದೇವರ ಕಾರ್ಯ. ಆರೂವರೆ ಕೋಟಿ ಜನರ ಕಷ್ಟಪ್ರತಿದಿನ ನೋಡುತಿದ್ದೇನೆ. ಸಿದ್ದರಾಮಯ್ಯನವರೆ ಈ ಪಕ್ಷ ಉಳಿಸಲು ಬಡವರಿದ್ದಾರೆ. ನಿಮ್ಮ ಭಾಗ್ಯಗಳಿಂದ ಇವರ ಬದುಕು ಹಸನಾಗಲಿಲ್ಲ. ಜಾತ್ಯತೀತ ಜನತಾದಳ ಕೇವಲ ರೈತರ ಬಗ್ಗೆ ಮಾತಾಡುತ್ತೆ ಎಂಬ ಭಾವನೆ ಬಿಟ್ಟುಬಿಡಿ. ವೆಂಕಟಶಿವಾರೆಡ್ಡಿ ಕಳೆದ ಭಾರಿ ಸೋಲಲು ಕಾರಣ ಡಿಸಿಸಿ ಬ್ಯಾಂಕ್‌ನಿಂದ ನೀಡಿದ ಸಾಲ, ರೈತರ ಸಾಲದ ಮನ್ನಾ ಮಾಡಿದ ನಂತರ ಸ್ತ್ರೀ ಸಾಲ ಮನ್ನಾ ಮಾಡುವ ಉದ್ದೇಶ ಇತ್ತು. ಅಷ್ಟರಲ್ಲಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಮ್ಮ ಸರ್ಕಾರ ಉರುಳಿಸಿದರು ಎಂದು ಹೇಳಿದರು.

Follow Us:
Download App:
  • android
  • ios