ಮೈಸೂರು(ಜ.13): ಇಲ್ಲಿಯವರೆಗೆ ನಾನು‌ ಗೋಮಾಂಸ ತಿಂದಿಲ್ಲ. ಆದ್ರೆ ತಿನ್ನಬೇಕು ಅನ್ಸಿದ್ರೆ ತಿಂತಿನಿ ಅದನ್ನ ಕೇಳೋಕೆ ಇವರು ಯಾರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮತ್ತೆ ಗೋಮಾಂಸ ಸೇವನೆ ಕುರಿತು ಮೈಸೂರಿನಲ್ಲಿ ಬಿಜೆಪಿಗೆ ಕುಟುಕಿದ ಮಾಜಿ ಸಿಎಂ ಸಿದ್ದು ಆಹಾರ ನನ್ನ ಹಕ್ಕು ಅದನ್ನ ಪ್ರಶ್ನಿಸೋಕೆ ಇವರ್ಯಾರು..? ಯಡಿಯೂರಪ್ಪಗೆ ಗೊತ್ತಿಲ್ಲ ಹೇಳ್ತಿನಿ ಕೇಳಿ. I am making it very clear ನಾನು ಈವರೆಗೆ ಗೋಮಾಂಸ ತಿಂದಿಲ್ಲ. ನಾನು ಹಂದಿ ಮಾಂಸ ತಿಂದಿಲ್ಲ. ಆದ್ರೆ ತಿನ್ನಬೇಕು ಅನ್ನಿಸಿದ್ರೆ ತಿಂತಿನಿ ಎಂದಿದ್ದಾರೆ.

ಯಡಿಯೂರಪ್ಪನವರೇ ನಿಮ್ಮ ಮನೆ ದೇವರು ನಿಮಗೆ ಒಳ್ಳೆದು ಮಾಡಲ್ಲ: ವಿಶ್ವನಾಥ್

ನಾನು ತಿಂದಿರೋದು ಕೋಳಿ ಮಾಂಸ, ಕುರಿಮಾಂಸ, ಆಡಿನ ಮಾಂಸ ಮಾತ್ರ. ಆದ್ರೆ ನಮ್ಮ ಆಹಾರ ಪದ್ದತಿ ಪ್ರಶ್ನಿಸುವ ಹಕ್ಕು ಇಲ್ಲಿ ಯಾರಿಗೂ ಇಲ್ಲ ಎಂದಿದ್ದಾರೆ. ಯಡಿಯೂರಪ್ಪ ಗೋಮಾಂಸ ತಿನ್ನೋದೆ ಸಾಧನೆ ಅಂತ ಹೇಳಿದ್ದಾನೆ. ಆದ್ರೆ ನಾನೇನು ಅವನ ಥರ ಸೊಪ್ಪು ತಿನ್ನಲೇ..? ನಾನು ಸೊಪ್ಪು ಬೇಕು ಅಂದ್ರೆ ಸೊಪ್ಪು ತಿಂತೀನಿ. ಮಾಂಸ ಬೇಕು ಅಂದ್ರೆ ಮಾಂಸ ತಿಂತೀನಿ. ನಾನೇನಾದ್ರು ನಿಂಗೆ ಹೇಳಿದ್ದೀನಾ ಮಾಂಸ ತಿನ್ನು ಅಂತ? ಮತ್ತೆ ಸುಮ್ಮನೆ ತಿನ್ನೋರಿಗೆ ಯಾಕೇ ಪ್ರಶ್ನೆ ಮಾಡ್ತೀಯಾ ಎಂದು ಏಕವಚನದಲ್ಲಿಯೇ ಪ್ರಶ್ನಿಸಿದ್ದಾರೆ.

ಜಗತ್ತಿನಲ್ಲಿ ಮಾಂಸಹಾರಿಗಳೆ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಚೀನಾದಲ್ಲಿ‌ ನಾಲ್ಕು ಕಾಲಿನ ಮಂಚವೊಂದನ್ನ ಬಿಟ್ಟು ಇನ್ನೆಲ್ಲವನ್ನು ತಿಂತಾರೆ ಗೊತ್ತಾ ನಿಮಗೆ. ಹಾಗಾದ್ರೆ ಅಮೇರಿಕಾದಲ್ಲಿ ಇರೋರು ಪ್ರಾಣಿಗಳ? ಇಂಗ್ಲೆಂಡ್, ಬ್ರಿಟನ್, ಸೇರಿದಂತೆ ಬೇರೆ ದೇಶದಲ್ಲಿರೋದು ದನ ತಿಂತಾರೆ. ಹಾಗಾದ್ರೆ ಅವರೇಲ್ಲ ಪ್ರಾಣಿಗಳಾ? ಎಂದು ಪ್ರಶ್ನಿಸಿದ್ದಾರೆ.

'ಚೀನಾ ಗಡಿಯಲ್ಲಿ ನಮ್ಮ ಯೋಧರು ಯುದ್ಧ ಸನ್ನದ್ಧ'

ನಿಮಗೆ ಸೊಪ್ಪು ಇಷ್ಟ ಇದ್ರೆ ತಿನ್ನಿ. ಬೇರೆಯವರಿಗೆ ಏನು ಇಷ್ಟ ಇದೆ ಅದನ್ನ ತಿನ್ನೋಕೆ ಬಿಡಿ ಎಂದು ಮೈಸೂರಿನಲ್ಲಿ ಬಿಎಸ್‌ವೈ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.