ಹಾಸನ(ಆ.27): ಸಕಲೇಶಪುರ ಪಟ್ಟಣದ ಪಶು ಇಲಾಖೆ ಸಮೀಪವಿರುವ ಲೋಕೋಪಯೋಗಿ ಇಲಾಖೆಯ ಮೂರು ವಸತಿ ಗೃಹಗಳಿಗೆ ಕಳ್ಳರು ಹಾಡಹಗಲೇ ಕಳ್ಳತನ ನಡೆಸಿ, 90 ಸಾವಿರ ರು. ಮೌಲ್ಯದ ವಸ್ತುಗಳು ಮತ್ತು ನಗದು ದೋಚಿರುವ ಘಟನೆ ಭಾನುವಾರ ನಡೆದಿದೆ.

ಭಾನುವಾರ ಮಧ್ಯಾಹ್ನ 3ರಲ್ಲಿ ಮೊದಲಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೌಕರರಾದ ಉಮಾಶ್ರೀ ಎಂಬುವರ ವಸತಿ ಗೃಹದ ಹೆಂಚು ತೆಗೆದು ಒಳಗೆ ನುಗ್ಗಿದ ಕಳ್ಳರು ಕಬ್ಬಿಣದ ಬೀರನ್ನು ಒಡೆದು 5 ಜೊತೆ ಚಿನ್ನದ ಒಲೆ, ಬೆಳ್ಳಿಯ ದೀಪ, ಬೆಳ್ಳಿಯ ಕಡಗ ಸೇರಿದಂತೆ ಸುಮಾರು 90,000 ರು. ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ.

ಹಾಸನ: ಪೂಜಾರಿ ಒಳಗೆ, ಭಕ್ತರು ಹೊರಗೆ..! ದೇವಸ್ಥಾನ ಪ್ರವೇಶಕ್ಕೆ ನಡೀತು ವಾಗ್ವಾದ

ನಂತರ ವಸತಿ ನಿಲಯಗಳ ಮೇಲ್ವಿಚಾರಕ ಯೋಗೇಶ್‌ ಎಂಬುವರ ಮನೆಯ ಹೆಂಚು ತೆಗೆದು ಮನೆಯಲ್ಲಿದ್ದ 10,000 ರು. ನಗದನ್ನು ದೋಚಿದ್ದಾರೆ. ನಂತರ ಉಪವಿಭಾಗಾಧಿಕಾರಿ ವಾಹನದ ಚಾಲಕ ಕುಮಾರ್‌ ಎಂಬುವರ ಮನೆಯ ಹೆಂಚು ತೆಗೆದು ದೋಚಲು ಯತ್ನಿಸಿ ವಿಫಲರಾ:ಗಿದ್ದಾರೆ. ಮಧ್ಯಾಹ್ನದ ವೇಳೆಯಲ್ಲಿ ಈ ರೀತಿಯ ಘಟನೆ ಪಟ್ಟಣದ ಹೃದಯ ಭಾಗದಲ್ಲಿ ನಡೆದಿದ್ದು, ಜನರನ್ನು ಆತಂಕಕ್ಕೆ ತಳ್ಳಿದೆ. ಸ್ಥಳಕ್ಕೆ ಬೆರಳಚ್ಟುತಜ್ಞರು ಹಾಗೂ ಶ್ವಾನದಳ ಆಗಮಿಸಿ ತನಿಖೆ ನಡೆಸಿದ್ದು, ಸಕಲೇಶಪುರ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ