ಈ ಹಳ್ಳಿಗೆ ಯಾರೂ ಹೆಣ್ಣು ಕೊಡೋದಿಲ್ಲ; ಇಲ್ಲಿನ ಹೆಣ್ಣನ್ನು ಯಾರೂ ಮದುವೆ ಮಾಡಿಕೊಳ್ಳುವುದಿಲ್ಲ!

  • ಈ ಹಳ್ಳಿಗೆ ಯಾರೂ ಹೆಣ್ಣು ಮಕ್ಕಳನ್ನು ಕೊಡಲ್ಲ ಹಾಗೂ ಇಲ್ಲಿಂದ ಹೆಣ್ಣು ಮಕ್ಕಳನ್ನು ಮದುವೆ ಸಹಿತ ಮಾಡಿಕೊಳ್ಳುವುದಿಲ್ಲ.
  • ಚೂಡಹಳ್ಳಿಗೆ ಸಮರ್ಪಕ ರಸ್ತೆ ಇಲ್ಲದೇ ಅರಣ್ಯ ಪ್ರದೇಶವನ್ನು ಹಾದು ನಡೆದು ಹೋಗಬೇಕು.
  • ಕಾಡು ಪ್ರಾಣಿಗಳಾದ ಕಾಡಾನೆ, ಕಾಡೆಮ್ಮೆ ದಾಳಿ, ಕರಡಿಗಳ ಕಾಟದ ಜೊತೆಗೆ ಸೀಳು ನಾಯಿಗಳ ಹಿಂಡು ಕಾಟ!
The town in the middle of forest has no female problems anekal

ಆನೇಕಲ್‌ (ಆ.23) ::ಇಂಡ್ಲವಾಡಿ ಪಂಚಾಯಿತಿಯ ಕಾಡಂಚಿನ ಗ್ರಾಮ ಚೂಡಹಳ್ಳಿಗೆ ನಗರ ಜಿಲ್ಲಾಧಿಕಾರಿ ಡಾಕೆ.ಶ್ರೀನಿವಾಸ್‌ ಭೇಟಿ ನೀಡಿ ಗ್ರಾಮಸ್ಥರ ನೋವನ್ನು ಆಲಿಸಿದರು. ಹಿರಿಯ ನಾಗರಿಕ ವೆಂಕಟಾ ಮತ್ತು ಮಡದಿ ಚಿನ್ನಮ್ಮ ತಮ್ಮ ಗ್ರಾಮದ ಬಗ್ಗೆ ಮಾಹಿತಿ ನೀಡಿ ತಮ್ಮ ಹಳ್ಳಿಗೆ ಯಾರೂ ಹೆಣ್ಣು ಮಕ್ಕಳನ್ನು ಕೊಡಲ್ಲ ಹಾಗೂ ಇಲ್ಲಿಂದ ಹೆಣ್ಣು ಮಕ್ಕಳನ್ನು ಮದುವೆ ಸಹಿತ ಮಾಡಿಕೊಳ್ಳುವುದಿಲ್ಲ. ಚೂಡಹಳ್ಳಿಗೆ ಸಮರ್ಪಕ ರಸ್ತೆ ಇಲ್ಲದೇ ಅರಣ್ಯ ಪ್ರದೇಶವನ್ನು ಹಾದು ನಡೆದು ಹೋಗಬೇಕು. ಕಾಡು ಪ್ರಾಣಿಗಳಾದ ಕಾಡಾನೆ, ಕಾಡೆಮ್ಮೆ ದಾಳಿ, ಕರಡಿಗಳ ಕಾಟದ ಜೊತೆಗೆ ಸೀಳು ನಾಯಿಗಳ ಹಿಂಡು ಕಾಡುತ್ತವೆ. ಇಲ್ಲಿ ಜೀವನ ನಡೆಸುವುದೇ ಒಂದು ಸಾಹಸ. ಸುಮಾರು 4 ಕಿ.ಮೀ. ಕಾಡಿನ ಹಾದಿಯಲ್ಲಿ ಸಾಗಬೇಕು. ರಸ್ತೆ ಮಾಡಲು ಅರಣ್ಯ ಇಲಾಖೆಯ ನಿಯಮಗಳು ಅಡ್ಡಿಯಾಗಿವೆ. ದಿನ ನಿತ್ಯ ಗ್ರಾಮಸ್ಥರು ಜೀವ ಎಡಗೈಲಿ ಹಿಡಿದುಕೊಂಡು ಓಡಾಡಬೇಕಿದೆ ಎಂದು ಜಿಲ್ಲಾಧಿಕಾರಿಯವರಲ್ಲಿ ಗ್ರಾಮಸ್ಥರ ಪರವಾಗಿ ಅಳಲನ್ನು ತೋಡಿಕೊಂಡರು.

ಬನ್ನೇರುಘಟ್ಟ: ಚಾಲಕನ ಕಿವಿ ಕಚ್ಚಿ ಕರಡಿ ಪರಾರಿ

ಜಿಲ್ಲಾಧಿಕಾರಿ ಡಾಕೆ.ಶ್ರೀನಿವಾಸ್‌(DC Dr.Shrinivas) ಮಾತನಾಡಿ, ಗ್ರಾಮಕ್ಕೆ ರಸ್ತೆ ಕಲ್ಪಿಸಲು ಅರಣ್ಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಸ್ಯೆಯ ಶಾಶ್ವತ ಪ್ರಯತ್ನ ಮಾಡÜಲಾಗುವುದು. ಚೂಡಹಳ್ಳಿ ವ್ಯಾಪ್ತಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸುವ ಜೊತೆಗೆ ಸಾರಿಗೆ ವ್ಯವಸ್ಥೆ ಬಗ್ಗೆಯೂ ಚರ್ಚಿಸಿ ಪ್ರಾಮಾಣಿಕ ಪ್ರಯತ್ನವನ್ನು ಸಫಲ ಮಾಡಲು ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.

ಇಂಡ್ಲವಾಡಿ(Indlawadi) ಗ್ರಾಮ ಪಂಚಾಯಿತಿ ಅಧ್ಯಕ್ಷ ಬೆಟ್ಟಪ್ಪ, ಕಾಡಂಚಿನ ಚೂಡಹಳ್ಳಿ ಇತಿಹಾಸದಲ್ಲೆ ಮೊದಲ ಬಾರಿ ಜಿಲ್ಲಾಧಿಕಾರಿಯೊಬ್ಬರು ಪಾದಾರ್ಪಣೆ ಮಾಡಿರುವುದು ಅಭಿನಂದಾರ್ಹ. ಗ್ರಾಮಸ್ಥರ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಐತಿಹಾಸಿಕ ದಾಖಲೆ ಸೃಷ್ಟಿಸಬೇಕೆಂದು ಒತ್ತಾಯಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್‌.ಶುಭಾನಂದ್‌, ಕಸಾಪ ಅಧ್ಯಕ್ಷ ಹಾಗೂ ಸದಸ್ಯ ಆದೂರು ಪ್ರಕಾಶ್‌ ರಸ್ತೆ, ಕುಡಿಯುವ ನೀರು, ಬೀದಿ ದೀಪ ಬಗ್ಗೆ ಮನ ಮಾಡಿದರು. ಜಿಲ್ಲಾಧಿಕಾರಿಗಳು ಇಂಡ್ಲವಾಡಿಯ ಹಿಂದುಳಿದ ವರ್ಗಗಳ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬಳ್ಳಾರಿ: ಚಿರತೆ, ಕರಡಿ ಕಾಟಕ್ಕೆ ಹೈರಾಣಾದ ಜನತೆ..!

ವಯಸ್ಸು ಗೊತ್ತಿಲ್ಲ, ಪಿಂಚಣಿ ಬರುತ್ತೆ!

‘ಏನಜ್ಜಿ ಎಸ್ಟುವಯಸ್ಸು ನಿಮಗೆ’ ಎಂದು ಜಿಲ್ಲಾಧಿಕಾರಿ ಡಾ ಕೆ.ಶ್ರೀನಿವಾಸ್‌ ಪ್ರಶ್ನಿಸಿದರು. ಈ ವೇಳೆ ಅಜ್ಜ ‘ಗೊತ್ತಿಲ್ರಪ್ರೊ’. ಆಗ ಜಿಲ್ಲಾಧಿಕಾರಿ ‘ಪಿಂಚಣಿ ಎಸ್ಟುಬರತೇ?’ ಎಂದರು. ಅದಕ್ಕೆ ಅಜ್ಜ ‘2 ತಿಂಗಳಿಗೆ ಒಂದ್ಸಲ 2400 ರು.’ ಎಂದಾಗ ಸದಸ್ಯರು ಹಾಗೂ ಗ್ರಾಮಸ್ಥರು ಮನದುಂಬಿ ನಕ್ಕರು.

Latest Videos
Follow Us:
Download App:
  • android
  • ios