Asianet Suvarna News Asianet Suvarna News

ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿದೆ : ವೈ.ಎ.ನಾರಾಯಣ ಸ್ವಾಮಿ

ಕಾಂಗ್ರೆಸ್ ಸರ್ಕಾರಕ್ಕೆ ಶಿಕ್ಷಕರ ಬಗ್ಗೆ ಕಾಳಜಿ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎಲ್ಲಾ ಸಂದರ್ಭದಲ್ಲೂ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಹೇಳಿದರು.

The state government has completely neglected the education sector: YA Narayana Swamy snr
Author
First Published Dec 20, 2023, 8:34 AM IST

  ಶಿರಾ :ಕಾಂಗ್ರೆಸ್ ಸರ್ಕಾರಕ್ಕೆ ಶಿಕ್ಷಕರ ಬಗ್ಗೆ ಕಾಳಜಿ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎಲ್ಲಾ ಸಂದರ್ಭದಲ್ಲೂ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಬಿಜೆಪಿ ಪಕ್ಷದ ಅಜೆಂಡ ಉತ್ತಮ ಸಮಾಜ ಕಟ್ಟಬೇಕು, ಗುಣಾತ್ಮಕ ಶಿಕ್ಷಣ ನೀಡಬೇಕು. ಶಿಕ್ಷಕರಲ್ಲಿ ನೈಪುಣ್ಯತೆ ತರಬೇಕು. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಬೇಕು ಎಂಬುದು. ನನ್ನ 20 ವರ್ಷದ ಅನುಭವದಲ್ಲಿ ಶೇ.75 ರಷ್ಟು ಶಿಕ್ಷಕರ ಸಮಸ್ಯೆಗಳನ್ನು ಬಿಜೆಪಿ ಸರ್ಕಾರ ಪರಿಹಾರ ಮಾಡಿದೆ. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಕರಿಗೆ ಆಮಿಷ ಒಡ್ಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಎನ್‌ಪಿಎಸ್ ತೆಗೆದು ಹಾಕಿ ಓಪಿಎಸ್ ಕೊಡುತ್ತೇವೆ ಎಂದು ಹೇಳಿದರು.

ಅದನ್ನು ನಂಬಿ ವಿವಿಧ ಗ್ರೂಪ್ ಮಾಡಿಕೊಂಡು ಓಟ್ ಫಾರ್ ಓಪಿಎಸ್ ಎಂದು ಮತ ನೀಡಿದ ಪರಿಣಾಮ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ಬರಲು ಕಾರಣವಾಗಿದೆ. ಸರ್ಕಾರಕ್ಕೆ ನೇರವಾಗಿ ಕೇಳುತ್ತೇನೆ ಓಪಿಎಸನ್ನು ಜಾರಿಗೆ ತರಲು ಸರ್ಕಾರಕ್ಕೆ ಏನು ತೊಂದರೆ ಎಂದು ಪ್ರಶ್ನಿಸಿದರು? ಹಾಗೇನಾದರೂ ತೊಂದರೆ ಇದ್ದರೆ ನಿಮ್ಮ ಅಜೆಂಡಾದಲ್ಲಿ ಏಕೆ ಹಾಕಬೇಕಿತ್ತು ಎಂದರು.

ನಾನು ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಶಿಕ್ಷಣ ಕ್ಷೇತ್ರವನ್ನೇ ಪ್ರತಿನಿಧಿಸುತ್ತೇನೆ. ನಾನು ಈಗಾಗಲೇ ನಿರಂತರವಾಗಿ ಶಾಲೆಗಳನ್ನು ಸುತ್ತಿದ್ದೇನೆ. ಎಲ್ಲಾ ಕಡೆಯಲ್ಲೂ ಅಭೂತಪೂರ್ವ ಬೆಂಬಲ ಸಿಕ್ಕಿದೆ. ನೂರಕ್ಕೆ ನೂರು ಗೆಲುವು ಸಾಧಿಸುತ್ತೇನೆ ಎಂಬ ವಿಶ್ವಾಸ ಇದೆ. ನಾನು ಹಾಗೂ ಪದವಿಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರು ಜೋಡೆತ್ತುಗಳ ರೀತಿ ಕೆಲಸ ಮಾಡುತ್ತೇವೆ ಎಂದರು.

ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ, ವೈ.ಎ.ನಾರಾಯಣ ಸ್ವಾಮಿ ಅವರು ಶಿಕ್ಷಕರ ಕ್ಷೇತ್ರದ ಮನೆ ಮಾತಾಗಿದ್ದಾರೆ. ಕ್ಷೇತ್ರದ ಎಲ್ಲರೂ ಪಕ್ಷಾತೀತವಾಗಿ ಅವರನ್ನು ಗುರುತಿಸುತ್ತಾರೆ. ೭೫ ಜನ ವಿಧಾನಪರಿಷತ್ ಸದಸ್ಯರಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಾರೆ. ಹಾಗಾಗಿ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎಲ್ಲಾ ಶಿಕ್ಷಕರೂ ಬೆಂಬಲಿಸಿ. ಶಿಕ್ಷಕರ ಪರವಾಗಿ, ೭ನೇ ವೇತನ ಆಯೋಗದ ಪರವಾಗಿ ಅಧಿವೇಶದಲ್ಲಿ ನಾನು ಹಾಗೂ ವೈ.ಎ.ನಾರಾಯಣಸ್ವಾಮಿ ಅವರು ಧ್ವನಿ ಎತ್ತಿದ್ದೇವೆ. ಸರ್ಕಾರ ಶೀಘ್ರದಲ್ಲಿಯೇ ವರದಿ ತರಿಸಿಕೊಂಡು ೭ನೇ ವೇತನ ಆಯೋಗ ಜಾರಿಗೆ ತರುವುದಾಗಿ ಭರವಸೆ ನೀಡಿದ್ದಾರೆ. ಅತಿಥಿ ಶಿಕ್ಷಕರ ಪರವಾಗಿಯೂ ಧ್ವನಿ ಎತ್ತಿದ್ದೇವೆ. ಅದೂ ಕೂಡ ಸರ್ಕಾರಕ್ಕೆ ಬಿಸಿ ಮುಟ್ಟಿದೆ. ಆದ್ದರಿಂದ ಶಿಕ್ಷಕರ ಪರವಾಗಿರುವ ವೈ.ಎ.ನಾರಾಯಣ ಸ್ವಾಮಿ ಅವರನ್ನು ಗೆಲ್ಲಿಸಿ ಎಂದರು.

ಪತ್ರಿಕಾಗೊಷ್ಠಿಯಲ್ಲಿ ನಿವೃತ್ತ ಶಿಕ್ಷಕ ಕುಮಾರ್, ನಿವೃತ್ತ ಪ್ರಾಂಶುಪಾಲ ಬಿ.ಪಿ. ಪಾಂಡುರಂಗಯ್ಯ, ಜ್ಞಾನಜ್ಯೋತಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಪರಮೇಶ್‌ಗೌಡ, ಮಾಜಿ ನಗರಸಭಾ ಸದಸ್ಯ ನಟರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಮದ್ದೆವಳ್ಳಿ ರಾಮಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು.

Follow Us:
Download App:
  • android
  • ios