ತಂದೆ ಗೆಲುವಿಗೆ ಅಗ್ನಿಕುಂಡದಲ್ಲಿ ಕೆಂಡ ತುಳಿದು ಪ್ರಾರ್ಥಿಸಿದ ಮಗ
ಇತಿಹಾಸ ಪ್ರಸಿದ್ಧ ಮಧುಗಿರಿ ದಂಡಿಮಾರಮ್ಮ ತಾಲೂಕಿನ ಜನತೆಗೆ ಒಳಿತುಂಟು ಮಾಡಲಿ, ಸಕಾಲಕ್ಕೆ ಮಳೆ, ಬೆಳೆ ಕರುಣಿಸಲಿ. ಎಲ್ಲರಿಗೂ ಆರೋಗ್ಯ ಭಾಗ್ಯ ಕೊಟ್ಟಕಾಪಾಡಲಿ ಮತ್ತು ಬರುವ ಅಸೆಂಬ್ಲಿ ಚುನಾವಣೆಯಲ್ಲಿ ನನ್ನ ತಂದೆ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣಗೆ ಗೆಲುವು ತಂದು ಕೊಡುವಂತೆ ಎಂಎಲ್‌ಸಿ ಆರ್.ರಾಜೇಂದ್ರ ಅಗ್ನಿಕುಂಡದಲ್ಲಿ ಕೆಂಡ ತುಳಿದು ಪ್ರಾರ್ಥಿಸಿದರು
ಮಧುಗಿರಿ : ಇತಿಹಾಸ ಪ್ರಸಿದ್ಧ ಮಧುಗಿರಿ ದಂಡಿಮಾರಮ್ಮ ತಾಲೂಕಿನ ಜನತೆಗೆ ಒಳಿತುಂಟು ಮಾಡಲಿ, ಸಕಾಲಕ್ಕೆ ಮಳೆ, ಬೆಳೆ ಕರುಣಿಸಲಿ. ಎಲ್ಲರಿಗೂ ಆರೋಗ್ಯ ಭಾಗ್ಯ ಕೊಟ್ಟಕಾಪಾಡಲಿ ಮತ್ತು ಬರುವ ಅಸೆಂಬ್ಲಿ ಚುನಾವಣೆಯಲ್ಲಿ ನನ್ನ ತಂದೆ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣಗೆ ಗೆಲುವು ತಂದು ಕೊಡುವಂತೆ ಎಂಎಲ್‌ಸಿ ಆರ್.ರಾಜೇಂದ್ರ ಅಗ್ನಿಕುಂಡದಲ್ಲಿ ಕೆಂಡ ತುಳಿದು ಪ್ರಾರ್ಥಿಸಿದರು.
ತಾಲೂಕು ಆಡಳಿತದಿಂದ ಕಳೆದ 10 ದಿನಗಳಿಂದ ನಡೆದ ದಂಡಿ ಮಾರೆಮ್ಮ ಜಾತ್ರಾ ಮಹೋತ್ಸವದ ಭಕ್ತರ ಹಾಗೂ ಸಾರ್ವಜನಿಕರ ಸಹಕಾರದಿಂದ ಸಡಗರ-ಸಂಭ್ರದಿಂದ ನಡೆಯಿತು. ಶುಕ್ರವಾರ ಬೆಳಗಿನ ಜಾವ ಏರ್ಪಡಿಸಿದ್ದ ಅಗ್ನಿಕುಂಡ ಉತ್ಸವದಲ್ಲಿ ಎಂ.ಎಲ್‌ಸಿ ಆರ್.ರಾಜೇಂದ್ರ ಭಾಗವಹಿಸಿ ಕೆಂಡ ತುಳಿದು ತಂದೆಯ ಗೆಲುವಿಗೆ ತಾಯಿ ದಂಡಿಮಾರಮ್ಮ ದೇವಿಗೆ ಮೊರೆಯಿಟ್ಟು ಪ್ರಾರ್ಥಿಸಿದರು.
ಇದೇ ನನ್ನ ಕೊನೆಯ ಚುನಾವಣೆ
ಮಧುಗಿರಿ : ಇದು ನನ್ನ ಕೊನೆ ಚುನಾವಣೆ, ಮತ್ತೆ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಭಾನುವಾರ ಸಂಜೆ ತಾಲೂಕಿನ ಕಸಬಾ ಹೋಬಳಿ ತವಕದಹಳ್ಳಿಯಲ್ಲಿ ನಡೆದ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಬರುವ ಅಸೆಂಬ್ಲಿ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ವಿದ್ಯುತ್, ಮನೆಯ ಯಜಮಾನಿಗೆ 2000 ಹಣ ನೀಡುವುದು, ಪ್ರತಿ ತಿಂಗಳು 10 ಕೆಜಿ ಅಕ್ಕಿ ನೀಡುವುದು ನಮ್ಮ ಪ್ರಣಾಳಿಕೆಯಲ್ಲಿ ಸೇರಿದ್ದು ಈ ಕಾರ್ಯವನ್ನು ಕಾರ್ಯಕರ್ತರು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡುವಂತೆ ಮನವಿ ಮಾಡಿದರು.
ತಾಲೂಕಿನಲ್ಲಿ ಡಿಸಿಸಿ ಬ್ಯಾಂಕ್‌ನಿಂದ 25000 ಕುಟುಂಬಗಳಿಗೆ ಸಾಲ ನೀಡಲಾಗಿದೆ. 2013-18ರ ಅವಧಿಯಲ್ಲಿ ಗುಡಿಸಲು ಮುಕ್ತ ಕ್ಷೇತ್ರ ಮಾಡುವ ಉದ್ದೇಶದಿಂದ 16400 ಮನೆಗಳನ್ನು ನಿರ್ಮಿಸಲಾಗಿದೆ. ಪ್ರತಿ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ, ಪ್ರತಿಯೊಬ್ಬರಿಗೂ ವೃದ್ಧಾಪ್ಯ ವೇತನ, ಬಿಪಿಎಲ್ ಕಾರ್ಡುಗಳನ್ನು ನೀಡಲಾಗಿದೆ. ನನ್ನ ಐದು ವಷÜರ್‍ಗಳ ಅವಧಿಯಲ್ಲಿ ಜನಪರ ಕೆಲಸ ಮಾಡಲಾಗಿದೆ. ಮುಂದೆ ಶಾಸಕರಾಗಿ ಆಯ್ಕೆಯಾದರೆ ಮಧುಗಿರಿಯನ್ನು ಜಿಲ್ಲಾಕೇಂದ್ರವನ್ನಾಗಿ ಮಾಡುವುದು, ತಾಲೂಕಿನ 54 ಕೆರೆಗಳಿಗೆ ನೀರು ತುಂಬಿಸುವುದು, ತುಮಕೂರು - ರಾಯದುರ್ಗ ರೈಲ್ವೆ ಯೋಜನೆಗೆ ಚಾಲನೆ ನೀಡುವುದು ನನ್ನ ಮೊದಲ ಆದ್ಯತೆ. ಜನತೆ ನನ್ನ ಮೇಲಿನ ಅಪಪ್ರಚಾರಗಳಿಗೆ ಕಿಗೊಡದೇ ಆಸೆ, ಆಮಿಷಗಳಿಗೆ ಬಲಿಯಾಗದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ನಿಟ್ಟಿನಲ್ಲಿ ನನಗೆ ತಮ್ಮ ಅಮೂಲ್ಯವಾದ ಮತ ನೀಡಿ ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ನಿರ್ದಶಕ.ಬಿ.ನಾಗೇಶಬಾಬು ಮಾತನಾಡಿ, ಮತದಾರರು ಯಾವುದೆ ಆಸೆ, ಆಮಿಷಗಳಿಗೆ ಬಲಿಯಾಗದೆ ಮಧುಗಿರಿ ಅಭಿವೃದ್ಧಿ ದೃಷ್ಟಿಯಿಂದ ಕೆ.ಎನ್.ರಾಜಣ್ಣರನ್ನು ಕೈ ಬಲಪಡಿಸಬೇಕಾಗಿದೆ ಎಂದರು.
ರೆಡ್ಡಿ ಸಮುದಾಯ ಕೊಡುಗೈ ದಾನಿ
ತುಮಕೂರು : ರೆಡ್ಡಿ ಸಮುದಾಯ ಹಿಂದಿನಿಂದಲೂ ಕೊಡುಗೈ ದಾನಿಗಳು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಪ್ರಶಂಸಿಸಿದರು.
ಜಿಲ್ಲಾ ರೆಡ್ಡಿ ಜನಸಂಘದ ವತಿಯಿಂದ ಬೆಳಗುಂಬ ರಸ್ತೆಯ ಸಮೀಪದ ಬಡಾವಣೆಯಲ್ಲಿ 5 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಮುದಾಯದ ಶೈಕ್ಷಣಿಕ ಕೇಂದ್ರ, ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ರೆಡ್ಡಿ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೆಡ್ಡಿ ಸಮುದಾಯದವರು ಹಿಂದೆ ಶ್ರೀಮಂತ ಕೃಷಿಕರಾಗಿದ್ದು, ವಿದ್ಯಾಭ್ಯಾಸಕ್ಕೆ ಅಷ್ಟಾಗಿ ಒತ್ತುಕೊಡುತ್ತಿರಲಿಲ್ಲ. ಈಗ ಕಾಲಬದಲಾಗಿದೆ. ಕೃಷಿಯು ಅಷ್ಟುಲಾಭದಾಯಕವಾಗಿಲ್ಲ. ವಿದ್ಯಾವಂತರಿಗೆ ಉದ್ಯೋಗವಕಾಶಗಳೂ ಹೆಚ್ಚಿದ್ದು, ವಿದ್ಯೆ ಯಾರೊಬ್ಬರ ಸ್ವತ್ತಲ್ಲ, ಎಲ್ಲರೂ ಪಡೆಯಬೇಕು. ಮಕ್ಕಳಿಗೆ ಆಸ್ತಿ ಮಾಡದೆ ಅವರನ್ನೇ ಆಸ್ತಿವಂತರನ್ನಾಗಿಸಿ ಎಂದರು.
ಜಿಲ್ಲಾ ರೆಡ್ಡಿ ಜನಸಂಘದವರು ಹೆಣ್ಣುಮಕ್ಕಳ ಹಾಸ್ಟೆಲ್ ತೆರೆಯಲು ಮುಂದಾಗಿರುವುದು ಪುಣ್ಯದ ಕೆಲಸ.ಹಾಸ್ಟೆಲ್ ಕೊಠಡಿಗಳಿಗೆ ದಾನಿಗಳ ಹೆಸರಿಟ್ಟು ದೇಣಿಗೆ ಸಂಗ್ರಹಿಸುವಂತೆ ಸಲಹೆ ನೀಡಿದರು.
ನÜಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಹಾಸ್ಟೆಲ್ ನಿರ್ಮಾಣಕ್ಕೆ 2 ಕೋಟಿಯನ್ನು ಸಿಎಂ ಅವರಿಗೆ ನಾನು ಸೇರಿದಂತೆ ಯಲಹಂಕ, ಬಿಟಿಎಂ ಕ್ಷೇತ್ರದ ಶಾಸಕರು ಜೊತೆಗೂಡಿ ಹೋಗಿ ಮಂಜೂರು ಮಾಡಿಸಿದ್ದು, ತ್ವರಿತ ಬಿಡುಗಡೆಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.