Asianet Suvarna News Asianet Suvarna News

ಮಠ, ಶಿಷ್ಯರ ಸಂಬಂಧ ತಂದೆ ಮಕ್ಕಳಂತೆ - ತರಳಬಾಳು ಶ್ರೀ

ತಂದೆ, ಮಕ್ಕಳಂತೆ ಮಠ ಮತ್ತು ಶಿಷ್ಯರ ಸಂಬಂಧ, ಅಂತಹ ಗುರು ಪರಂಪರೆಯೊಂದಿಗೆ ಶಿಷ್ಯ ಪರಂಪರೆ ಬಾಂಧವ್ಯ ಉತ್ತಮವಾಗಿರಲಿ ಎಂದು ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಹರಿಹರ ತಾಲೂಕು ನಿಟ್ಟೂರು ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಇಟಗಿ ಬಸಮ್ಮನವರ ಕೈಲಾಸ ಸಮಾರಾಧನೆ ಹಾಗೂ ಸರ್ವ ಶರಣರ ಸಮ್ಮೇಳನದಲ್ಲಿ ಆಶೀರ್ವಚನ ನೀಡಿದರು.

The relation between Math and disciples is like father and son says  Taralabalu Shri rav
Author
First Published Oct 1, 2022, 12:10 PM IST

ಮಲೇಬೆನ್ನೂರು (ಅ.1) : ತಂದೆ, ಮಕ್ಕಳಂತೆ ಮಠ ಮತ್ತು ಶಿಷ್ಯರ ಸಂಬಂಧ, ಅಂತಹ ಗುರು ಪರಂಪರೆಯೊಂದಿಗೆ ಶಿಷ್ಯ ಪರಂಪರೆ ಬಾಂಧವ್ಯ ಉತ್ತಮವಾಗಿರಲಿ ಎಂದು ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಹರಿಹರ ತಾಲೂಕು ನಿಟ್ಟೂರು ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಇಟಗಿ ಬಸಮ್ಮನವರ ಕೈಲಾಸ ಸಮಾರಾಧನೆ ಹಾಗೂ ಸರ್ವ ಶರಣರ ಸಮ್ಮೇಳನದಲ್ಲಿ ಆಶೀರ್ವಚನ ನೀಡಿ ದೇಶದ ಯಾವ ಮಠಕ್ಕೂ ಈ ರೀತಿಯ ಶಿಷ್ಯ ಪರಂಪರೆಯಿಲ್ಲ. ಜಗತ್ತು ದೊಡ್ಡದಾದರೂ ತಂತ್ರಜ್ಞಾನದಿಂದ ತುಂಬಾ ಹತ್ತಿರವಾಗುವಂತೆ 22,000 ಸಾವಿರ ವಚನಗಳನ್ನು ಅಂತರ್ಜಾಲದಲ್ಲಿ ಸಿಗುವಂತೆ ಮಾಡಲಾಗಿದೆ. ನೈತಿಕತೆ, ಶ್ರದ್ಧೆ, ಕಾಯಕ ನಿಷ್ಠೆ ಎಲ್ಲರಲ್ಲೂ ಇರಲಿ, ಮನುಷ್ಯನಿಗೆ ಬ್ರಹ್ಮಾಂಡದ ಬುದ್ಧಿ ಇದೆ. ಬ್ರಹ್ಮಾಂಡ ನೋಡುವ ಕಣ್ಣು ಭೂಮಿ ಮೇಲಿದೆ ಎಂದರು.

ಚಿತ್ರದುರ್ಗ ಮುರುಘಾ ಶ್ರೀಗೆ ಜೈಲೈ ಗತಿ, ಜಾಮೀನು ಅರ್ಜಿ ವಜಾ!

ಮಠಕ್ಕೆ ಪಟ್ಟಕ್ಕೆ ಬಂದ ನಂತರ ಆರು ಕೋಟಿ ರು. ಭಕ್ತರಿಂದ ಕಾಣಿಕೆ ಬಂದಿದೆ. ಒಂದು ರುಪಾಯಿಯೂ ಲೆಕ್ಕ ವ್ಯತ್ಯಾಸ ಆಗಿಲ್ಲ. ಮಠದಲ್ಲಿ 19 ಕೋಟಿ ರು. ದುರುಪಯೋಗವಾಗಿದೆ ಎಂದು ಆಪಾದಿಸಿದವರಿಗೆ ನೋಟಿಸ್‌ ನೀಡಲಾಗಿದೆ ಉತ್ತರ ಬಂದಿಲ್ಲ. ಆತ್ಮ, ಚಿತ್ತ, ದ್ರವ್ಯ ಶಕ್ತಿ ಯಾರಿಗೆ ಇರುತ್ತೋ ಅವರು ಯಾರಿಗೂ ಹೆದರುವ ಅಗತ್ಯವಿಲ್ಲ. ನಮ್ಮನ್ನು ಮುಟ್ಟೋ ತಾಕತ್ತು ಯಾರಿಗೂ ಇಲ್ಲ ಎಂದು ಹೇಳಿದರು.

ಸಾಧು ಸಮಾಜದ ಅಧ್ಯಕ್ಷ ಮಹಾದೇವಪ್ಪ, ಸಂಸದ ಜಿ.ಎಂ.ಸಿದ್ದೇಶ್ವರ್‌, ಶಾಸಕ ಎಸ್‌.ಎ.ರವೀಂದ್ರನಾಥ್‌, ಮಾಜಿ ಶಾಸಕ ಹರೀಶ್‌, ತರಳಬಾಳು ವಿಜ್ಞಾನ ಕೇಂದ್ರದ ಡಾ, ದೇವರಾಜ್‌, ಬಸವನಗೌಡ, ಪ್ರೊ.ಶಿವಮೂರ್ತಿ, ಶಿವಾನಂದ ಗುರೂಜಿ ಮತ್ತು ಸಮಾಜದ ಬಂಧುಗಳು ಹಾಜರಿದ್ದರು.

ಹಾಸ್ಟೆಲ್‌ ಲೋಕಾರ್ಪಣೆಗಾಗಿ ಪ್ರಧಾನಿ ಮೋದಿಗೆ ಆಹ್ವಾನ

ಮಠದ ಸಿರಿಗೆರೆಯಲ್ಲಿ 45 ಕೋಟಿ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಹಾಸ್ಟೆಲ್‌ ಲೋಕಾರ್ಪಣೆಗೆ ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನಿಸಲಾಗುತ್ತದೆ ಎಂದು ತರಳಬಾಳು ಡಾ.ಶಿವಮೂರ್ತಿ ಶ್ರೀಗಳು ತಿಳಿಸಿದರು. ನರೇಂದ್ರ ಮೋದಿಯವರಿಂದ ವಿದ್ಯಾರ್ಥಿ ನಿಲಯ ಉದ್ಘಾಟಿಸುವ ಮಹಾದಾಸೆಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರಿಗೆ ಪತ್ರ ಬರೆಯಲಾಗಿದೆ. ದೇವಾಲಯದಲ್ಲಿನ ಗರ್ಭಗುಡಿಯಂತೆ ಬೊಮ್ಮಾಯಿ, ಉತ್ಸವ ಮೂರ್ತಿಯಂತೆ ಬಿ.ಎಸ್‌.ಯಡಿಯೂರಪ್ಪನರು, ಸಂಸದ ಸಿದ್ದೇಶ್ವರರ ನಿಯೋಗ ಮೋದಿಯವರ ಕರೆತರಬೇಕು ಎಂದು ಹೇಳಿದರು.

ತರಳಬಾಳು ಶ್ರೀಗಳಿಂದ ಸಿರಿ ಧಾನ್ಯಗಳ ಪೌಡರ್‌ ಅನಾವರಣ

ದಾವಣಗೆರೆ: ನಿಟ್ಟೂರು ತರಳಬಾಳು ಅಮೃತ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ವತಿಯಿಂದ ತೆಂಗಿನ ಉಪ ಉತ್ಪನ್ನಗಳು ಮತ್ತು ಸಿರಿಧಾನ್ಯಗಳ ಪೌಡರ್‌ನ್ನು ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅನಾವರಣಗೊಳಿಸಿದರು. ನಿಟ್ಟೂರಿನ ಪ್ರಗತಿಪರ ಮಹಿಳೆ ಸರೋಜಾ ಪಾಟೀಲ್‌ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಉತ್ಪಾದಕ ಕಂಪನಿಯ ಬ್ರ್ಯಾಂಡ್‌ನಲ್ಲಿ ಈ ಉತ್ಪನ್ನಗಳನ್ನು ಸಿದ್ಧಪಡಿಸಿದ್ದಾರೆ ಎಂದರು.

ಶಿವಮೊಗ್ಗ: ಮುರುಘಾ ಶ್ರೀಗಳಿಗೆ ಎಲ್ಲ ರೀತಿಯ ಪರೀಕ್ಷೆ ಮಾಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ: ಡಾ. ಶ್ರೀಧರ್

ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಡಾ.ಕೆ.ಪಿ. ಬಸವರಾಜ ಉತ್ತಮ ಆಹಾರ ಮತ್ತು ಆರೋಗ್ಯಕ್ಕಾಗಿ ಪ್ರತೀ ದಿನ ಒಂದು ಸಿರಿಧಾನ್ಯ ಸೇವಿಸುವಂತೆ ಏಳು ಧಾನ್ಯ ಉತ್ಪನ್ನ ಹಾಗೂ ತೆಂಗಿನ ತೆಂತಾಎಣ್ಣೆ, ಒಣಗಿಸಿದ ತೆಂಗಿನ ಪುಡಿ, ತೆಂಗಿನ ಚಿಫ್ಸ್‌, ತೆಂಗಿನ ಉಪ್ಪಿನಕಾಯಿ ಉತ್ಪನ್ನಗಳನ್ನು ’ತರಳಾಮೃತ’ ಎಂಬ ಶೀರ್ಷಿಕೆಯಂತೆ ಮಾರುಕಟ್ಟೆಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಅಂತರ್ಜಾಲ ಮಾರುಕಟ್ಟೆಯಲ್ಲಿ ಪ್ರಪಂಚಾದ್ಯಂತ ವಿಸ್ತರಿಸುವ ಯೋಜನೆಯಾಗಿದೆ ಎಂದು ತಿಳಿಸಿದರು. ಐಸಿಎಆರ್‌-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ದೇವರಾಜ ಟಿ.ಎನ್‌., ತೋಟಗಾರಿಕೆ ವಿಜ್ಞಾನಿ ಎಂ.ಜಿ.ಬಸವನಗೌಡ, ಗೃಹ ವಿಜ್ಞಾನಿ ಡಾ.ಸುಪ್ರಿಯಾ ಪಿ. ಪಾಟೀಲ್‌, ಅಧಿಕಾರಿಗಳಾದ ಸಂತೋಷ್‌, ಆಕಾಶ್‌, ಉತ್ಪಾದಕ ಕಂಪನಿ ಅಧ್ಯಕ್ಷ ಇಟಗಿ ಶಿವಣ್ಣ ಇತರರಿದ್ದರು.

Follow Us:
Download App:
  • android
  • ios