Asianet Suvarna News Asianet Suvarna News

ಜ್ಞಾನ ವೃದ್ಧಿಯೇ ಗ್ರಂಥಾಲಯಗಳ ಉದ್ದೇಶ: ಶಿವಕುಮಾರ್

ಗ್ರಂಥಾಲಯಗಳು ಜ್ಞಾನ ದೇಗುಲಗಳಿದ್ದಂತೆ, ಜ್ಞಾನ ವೃದ್ಧಿಸುವುದೇ ಗ್ರಂಥಾಲಯದ ಉದ್ದೇಶ. ಪುಸ್ತಕ ಓದುವುದರಿಂದ ಆಲೋಚನಾ ಶಕ್ತಿ ಹೆಚ್ಚುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಉಪನ್ಯಾಸಕ ಶಿವಕುಮಾರ್ ಹೇಳಿದರು.

The purpose of libraries is the purpose of knowledge: Shivakumar snr
Author
First Published Nov 22, 2023, 7:52 AM IST

  ಶಿರಾ :  ಗ್ರಂಥಾಲಯಗಳು ಜ್ಞಾನ ದೇಗುಲಗಳಿದ್ದಂತೆ, ಜ್ಞಾನ ವೃದ್ಧಿಸುವುದೇ ಗ್ರಂಥಾಲಯದ ಉದ್ದೇಶ. ಪುಸ್ತಕ ಓದುವುದರಿಂದ ಆಲೋಚನಾ ಶಕ್ತಿ ಹೆಚ್ಚುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಉಪನ್ಯಾಸಕ ಶಿವಕುಮಾರ್ ಹೇಳಿದರು.

ಅವರು ನಗರದ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಓದುವ ಹವ್ಯಾಸವನ್ನು ಬೆಳೆಸಿಕೊಂಡರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯಲು ಓದು ಅತಿ ಮುಖ್ಯ. ಆದ್ದರಿಂದ ವಿದ್ಯಾರ್ಥಿಗಳು, ಯುವಕರು, ಯುವತಿಯರು ಪ್ರತಿ ದಿನವೂ ದಿನಪತ್ರಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳು, ಸಾಹಿತಿಗಳ ಪುಸ್ತಕಗಳನ್ನು ಓದಿ ಪ್ರತಿಯೊಂದರಲ್ಲೂ ನಿಮಗೆ ಜ್ಞಾನಾರ್ಜನೆ ಹೆಚ್ಚುತ್ತದೆ ಎಂದರು.

ಹುಯಿಲ್ದೊರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಸಂತ್ ಕುಮಾರ್ ಮಾತನಾಡಿ ಮನುಷ್ಯನ ಬೌದ್ಧಿಕ ಜ್ಞಾನವನ್ನು ಹೆಚ್ಚಿಸುವಲ್ಲಿ ಪುಸ್ತಕಗಳು ಹೆಚ್ಚಿನ ಪಾತ್ರ ವಹಿಸುತ್ತವೆ. ಪ್ರಸಕ್ತ ತಂತ್ರಜ್ಞಾನ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಕ್ಷೀಣಿಸುತ್ತಿದೆ. ಯುವಕರು ಮೊಬೈಲ್ ಲೋಕದಲ್ಲಿ ಮುಳುಗಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಲೂ ಇದರಿಂದ ಹೊರಬಂದು ಪುಸ್ತಕದ ಜಗತ್ತಿಗೆ ಒಗ್ಗಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ, ಜಾನಪದ ಗೀತೆ ಸ್ಪರ್ದೇಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಧರಣಿಕುಮಾರ್, ಸಾಹಿತಿ ಸಕ್ಕರ ನಾಗರಾಜು, ಉಪನ್ಯಾಸಕ ಹೆಂದೊರೆ ಶಿವಣ್ಣ, ಗ್ರಂಥಪಾಲಕರಾದ ರಾಜಶೇಖರ್.ಕೆ, ರಮೇಶ್, ಕವಿತ.ಆರ್, ನವೀನ್ ಸೇರಿದಂತೆ ಹಲವರು ಹಾಜರಿದ್ದರು.

ಮನೆಯಲ್ಲಿ ಸಾರ್ವಕನಿಕ ಗ್ರಂಥಾಲಯ

ಕೊಡಗು(ಅ.19):  ಇಂದು ಪಟ್ಟಣದಲ್ಲಿ ಮನೆಯೊಂದು ಖಾಲಿ ಇದ್ದರೆ ಅದನ್ನು ಬಾಡಿಗೆಗೆ ಕೊಟ್ಟು ಒಂದು ಹಣ ಸಂಪಾದಿಸೋಣ ಎಂದು ಯೋಚಿಸುವವರೇ ಹೆಚ್ಚು. ಆದರೆ ಇಲ್ಲಿ ದಂಪತಿಗಳಿಬ್ಬರು ಖಾಲಿ ಇರುವ ತಮ್ಮ ಮನೆಯನ್ನೇ ಸಾರ್ವಜನಿಕ ಗ್ರಂಥಾಲಯವನ್ನಾಗಿ ಮಾಡಿ ಉಚಿತವಾಗಿ ಪುಸ್ತಕಗಳ ಓದಿಗೆ ಅವಕಾಶ ಮಾಡಿಕೊಟ್ಟು ಜ್ಞಾನದ ದೀವಿಗೆ ಹಚ್ಚುತ್ತಿದ್ದಾರೆ. 

ಹೌದು, ಕೊಡಗು ಜಿಲ್ಲೆ ಕುಶಾಲನಗರ ಪಟ್ಟಣದ ಹಾರಂಗಿ ರಸ್ತೆಯಲ್ಲಿ ಇರುವ ಸೂದನ ಪೂಣಚ್ಚ ಮತ್ತು ಸೂದನ ರೇವತಿ ಎಂಬುವವರೇ ಇಂತಹ ಮಹತ್ತರವಾದ ಕಾರ್ಯ ಮಾಡುತ್ತಿರುವವರು. ಇಬ್ಬರು ನಿವೃತ ಬ್ಯಾಂಕ್ ಉದ್ಯೋಗಿಗಳಾಗಿದ್ದು ಸದ್ಯ ತಮಗಿರುವ ಕಾಫಿತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡು ಇದ್ದಾರೆ. ಆದರೆ ಕಳೆದ ಹಲವು ವರ್ಷಗಳ ಹಿಂದಿನಿಂದ ತಮ್ಮ ಮನೆಯಲ್ಲಿ ಬರೋಬ್ಬರಿ 12 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿಟ್ಟಿದ್ದಾರೆ. ದೊಡ್ಡದಾದ ಕೊಠಡಿಯಲ್ಲಿ ಸುತ್ತಲೂ ರ್ಯಾಕ್ ಗಳನ್ನು ಜೋಡಿಸಿದ್ದು ಅವುಗಳಲ್ಲಿ ಪುಸ್ತಕಗಳನ್ನು ಇರಿಸಲಾಗಿದೆ. ಮುಖ್ಯವಾಗಿ ಕೊಡಗಿನ ಸಂಸ್ಕೃತಿ, ಆಚಾರ, ವಿಚಾರ ಕೊಡಗಿನ ಇತಿಹಾಸ, ಸ್ವಾತಂತ್ರ್ಯ ಹೋರಾಟದ ಇತಿಹಾಸ, ಕುವೆಂಪು ಅವರ ಶ್ರೀರಾಮಾಯಣ ದರ್ಶನಂ, ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ, ನಿರಂಜನರ ಸ್ವಾಮಿ ಅಪರಂಪಾರ, ಕೃಷ್ಣ ಮತ್ತು ಕಾವೇರಿ ನೀರು ನ್ಯಾಯಾಧಿಕರಣದ ವರದಿ ಮತ್ತು ತೀರ್ಪು ಸೇರಿದಂತೆ ಅತ್ಯಂತ ಪ್ರಮುಖವಾದ ಪುಸ್ತಕಗಳು ಇವರ ಸಂಗ್ರಹಣೆಯಲ್ಲಿ ಇವೆ. 

ಮಡಿಕೇರಿ ದಸರಾ: ಡಿಜೆ, ಲೇಸರ್ ಲೈಟ್ ಬಳಸದಂತೆ ಹೈಕೋರ್ಟ್ ವಕೀಲರಿಂದ ನೋಟಿಸ್!

ಇನ್ನೂ ಈ ಪುಸ್ತಕಗಳೆಲ್ಲವೂ ಮೊದಲ ಮುದ್ರಣದ ಪ್ರತಿಗಳಾಗಿದ್ದು, ಅಂದು ಕೇವಲ ಎರಡು ರೂಪಾಯಿ ಮೂರು ರೂಪಾಯಿ ಮತ್ತು ಆರು ರೂಪಾಯಿ ಬೆಲೆ ಇರುವಾಗ ಕೊಂಡಿರುವ ಪುಸ್ತಕ ಎನ್ನುವುದು ವಿಶೇಷ. ಈ ಗ್ರಂಥಾಲಯವನ್ನು ಯಾರು ಬೇಕಾದರೂ ಬಳಸಬಹುದು. ಆಸಕ್ತಿ ಇರುವವರು ಬಂದು ಕುಳಿತು ಓದಬಹುದು. ಇಲ್ಲಿಯೇ ಕುಳಿತು ಓದಲು ಆಗುವುದಿಲ್ಲ ಎನ್ನುವವರು ತಮ್ಮ ಮನೆಗೂ ಪುಸ್ತಕಗಳನ್ನು ಕೊಂಡೊಯ್ಯಬಹುದು. ಪುಸ್ತಕಗಳನ್ನು ಕೊಂಡೊಯ್ಯಲು ಸಾರ್ವಜನಿಕ ಗ್ರಂಥಾಲಯದಲ್ಲಿ 200 ರೂಪಾಯಿ ಕೊಟ್ಟು ಚೀಟಿ ಮಾಡಿಸುವಂತೆ ಮಾಡಿಸಬೇಕಾಗಿಲ್ಲ. ಆದರೆ ಪುಸ್ತಕಗಳನ್ನು ಮನೆಗೆ ಕೊಂಡೊಯ್ಯುವಾಗ ಅವರ ಎಲ್ಲಾ ಮಾಹಿತಿ, ಸಂಪರ್ಕ ಸಂಖ್ಯೆಗಳನ್ನು ಬರೆದುಕೊಳ್ಳಲಾಗುತ್ತದೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಅನುಕೂಲವಾಗಲೆಂದು ಮೂರು ಕಂಪ್ಯೂಟರ್ಗಳನ್ನು ಇದೇ ಕೊಠಡಿಯಲ್ಲಿ ಜೋಡಿಲಾಗಿದ್ದು ವಿದ್ಯಾರ್ಥಿಗಳು ಅದನ್ನು ಬಳಕೆ ಮಾಡಬಹುದು. ತಮ್ಮ ಪಠ್ಯಗಳಿಗೆ ಸಂಬಂಧಿಸಿದ ಯಾವುದಾದರೂ ಪ್ರಿಂಟ್ ಬೇಕಾದರೂ ಇಲ್ಲಿಂದಲೇ ಉಚಿತವಾಗಿ ಪಡೆದುಕೊಳ್ಳಬಹುದು ಎನ್ನುತ್ತಾರೆ ಗ್ರಂಥಾಲಯ ಮಾಡಿರುವ ಗೃಹಿಣಿ ರೇವತಿ. 

Follow Us:
Download App:
  • android
  • ios