ನಿರೀಕ್ಷಿತ ಮಟ್ಟದಲ್ಲಿ ಶೋಷಿತರ ಪ್ರಗತಿಯಾಗಿಲ್ಲ: ಕೇಂದ್ರ ಸಚಿವ ನಾರಾಯಣಸ್ವಾಮಿ
ಶೋಷಿತ ಸಮುದಾಯ ಹಾಗೂ ಬಡವರು, ದುರ್ಬಲರು, ಅಲ್ಪಸಂಖ್ಯಾತರು ಕೆಲವೇ ಕೆಲವು ಯೋಜನೆಗಳ ಸದುಪಯೋಗವನ್ನು ಪಡೆಯುತ್ತಿದ್ದಾರೆ. ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ನಾವು ವಿಫಲರಾಗಿದ್ದೇವೆ.
ಚಳ್ಳಕೆರೆ (ನ.05): ಶೋಷಿತ ಸಮುದಾಯ ಹಾಗೂ ಬಡವರು, ದುರ್ಬಲರು, ಅಲ್ಪಸಂಖ್ಯಾತರು ಕೆಲವೇ ಕೆಲವು ಯೋಜನೆಗಳ ಸದುಪಯೋಗವನ್ನು ಪಡೆಯುತ್ತಿದ್ದಾರೆ. ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ನಾವು ವಿಫಲರಾಗಿದ್ದೇವೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಸಹ ಶೋಷಿತ ಸಮುದಾಯ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯತ್ತ ಸಾಗಲು ಸಾಧ್ಯವಾಗಿಲ್ಲ, ಈ ಬಗ್ಗೆ ಚಿಂತನೆ ನಡೆಸಬೇಕು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.
ತಳಕು ಗ್ರಾಮದಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ನೂತನ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಉತ್ತಮ ಶಿಕ್ಷಣದಿಂದ ಮಾತ್ರ ನಾವು ಅಭಿವೃದ್ಧಿ ಸಾಧ್ಯವಾಗುತ್ತದೆ. ಸಾಮಾಜಿಕ ಸೇವಾ ಕಾರ್ಯಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಮ್ಮನ್ನು ಉತ್ತಮ ವ್ಯಕ್ತಿಯಾಗಿ ನಿರ್ಮಾಣ ಮಾಡುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ಸಮಾಜ ಮುಖಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ದೇಶ ಭಕ್ತಿಯನ್ನು ರೂಢಿಸಿಕೊಳ್ಳಬೇಕು, ನಮಗೆ ಎಲ್ಲಾ ರೀತಿಯಿಂದಲೂ ಆರೋಗ್ಯವೂ ಸೇರಿದಂತೆ ಎಲ್ಲಾ ಭಾಗ್ಯ ನೀಡುವುದು ದೇವರಿಂದ ಮಾತ್ರ ಸಾಧ್ಯ. ಆದ್ದರಿಂದ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಭಕ್ತರಿಗೆ ಸಮರ್ಪಿಸಿದ್ದೇವೆ. ನಮ್ಮಲ್ಲಿರುವ ಭಕ್ತಿ ಶ್ರದ್ದೆ ನಂಬಿಕೆ ನಮ್ಮ ಬದುಕನ್ನು ಹಸನುಗೊಳಿಸುತ್ತದೆ.
Davanagere: ಅನ್ಯ ಸಂಖ್ಯೆಯಿಂದ ಸಂತ್ರಸ್ತೆಯರಿಗೆ ಕರೆ ಕಾಟ
ಬದ್ಧತೆಯಿಂದ ಗುರಿ ಮುಟ್ಟಲು ಸಾಧ್ಯ: ಭಾರತೀಯ ಜನತಾ ಪಕ್ಷದ ಬದ್ದತೆಯುಳ್ಳ ಕಾರ್ಯಕರ್ತನಾಗಿ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪಕ್ಷ ಹಂತ, ಹಂತವಾಗಿ ನನಗೆ ಎಲ್ಲವನ್ನೂ ನೀಡಿದೆ. ಬದ್ಧತೆ ಕಾಪಾಡಿಕೊಂಡಲ್ಲಿ ಮಾತ್ರ ಗುರಿ ಮುಟ್ಟಲು ಸಾಧ್ಯ. ಸಾರ್ವಜಕರಿಗೆ ಸರ್ಕಾರ ನೀಡುವ ಸೌಲಭ್ಯಗಳನ್ನು ತಲುಪಿಸಲು ಐಎಎಸ್ ಅಧಿಕಾರಿಗಳ ಪಾತ್ರ ಮುಖ್ಯ. ಆದರೆ, ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ಹಲವಾರು ಸೌಲಭ್ಯ ತಲುಪಲು ಸಾಧ್ಯವಾಗುತ್ತಿಲ್ಲ. ಚಿತ್ರದುರ್ಗ ನಗರದಲ್ಲಿ ಸುಮಾರು 16.50 ಕೋಟಿಯ ರಾಷ್ಟ್ರೀಯ ಉದ್ಯಾನವನ, ದಾವಣಗೆರೆ, ತುಮಕೂರು ನೇರ ರೈಲು ಮಾರ್ಗ, 5 ಸಾವಿರ ಎಕರೆ ಪ್ರದೇಶದಲ್ಲಿ ಬಡವರಿಗೆ ನಿವೇಶನ ನೀಡುವ ಯೋಜನೆಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಅನುಮೋದನೆ ನೀಡಲಿದೆ ಎಂದರು.
ಬಿಜೆಪಿಯಲ್ಲೇ ಇರ್ತೇನೆ, ಕಾಂಗ್ರೆಸ್‌ಗೆ ಹೋಗಲ್ಲ: ಸಚಿವ ಎಂಟಿಬಿ ನಾಗರಾಜ್
ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ಮುರುಳಿ,ಬಿಜೆಪಿ ಮಂಡಲಾಧ್ಯಕ್ಷ ಈ.ರಾಮರೆಡ್ಡಿ, ತಹಸೀಲ್ದಾರ್ ಎನ್.ರಘುಮೂರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಳ್ಳಕೆರೆ ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಮೊಳಕಾಲ್ಮೂರು ಅಧ್ಯಕ್ಷ ಪಿ.ಎನ್.ಮಂಜುನಾಥ, ಬಿಜೆಪಿ ಮುಖಂಡರಾದ ಎಂ.ಶಿವಮೂರ್ತಿ, ಮಾರುತಿ, ಎಚ್.ವಿ.ಪ್ರಕಾಶ್‌ರೆಡ್ಡಿ, ಚನ್ನಗಾನಹಳ್ಳಿ ಮಲ್ಲೇಶ್, ರೂಪ, ಮಂಡಲ ಉಪಾಧ್ಯಕ್ಷ ಟಿ.ಎಸ್.ತಿಪ್ಪೇಸ್ವಾಮಿ, ತಾಲೂಕು ರೈತ ಮೋರ್ಚಾ ಅಧ್ಯಕ್ಷ ಎನ್.ನವೀನ್, ಬಿ.ಎಸ್.ಶಿವಪುತ್ರಪ್ಪ, ಉಪಾಧ್ಯಕ್ಷೆ ದ್ರಾಕ್ಷಾಯಿಣಿ, ಗ್ರಾಂ ಪಂಚಾಯಿತಿ ಸದಸ್ಯರಾದ ಟಿ.ಕೃಷ್ಣಮೂರ್ತಿ, ಲಕ್ಷ್ಮಮ್ಮ, ಸೈಯದ್ ಕರಿಂಸಾಬ್, ಎಂ.ಶಾಂತಕುಮಾರ್, ಟಿ.ರವಿಕುಮಾರ್, ಬೆಸ್ತರ ಸಂಘದ ಅಧ್ಯಕ್ಷ ಶಿವಾನಂದ ಮೂರ್ತಿ ಇದ್ದರು.