Koppal: 5ರ ಹೊಸ ನಾಣ್ಯ ಹಾಕಿ ನೀರು ಪಡೆಯುವ ವ್ಯವಸ್ಥೆಯಿಂದ ಫಜೀತಿ
ಶುದ್ಧ ಕುಡಿವ ನೀರಿನ ಘಟಕಗಳಲ್ಲಿ 5 ಬಂಗಾರದ ನಾಣ್ಯ (ಗೋಲ್ಡ್ ಕ್ವಾಯಿನ್) ಹಾಕಿ ನೀರು ಪಡೆಯುವ ಪದ್ಧತಿ ಜನರಿಗೆ ಫಜೀತಿ ತಂದಿದೆ. 5 ಮುಖ ಬೆಲೆಯ ಗೋಲ್ಡ್ ಕಾಯಿನ್ ಹಾಕಿದರೆ ಮಾತ್ರ ನೀರು ದೊರೆಯುತ್ತಿರುವುದರಿಂದ ಇಂತಹ ನಾಣ್ಯಗಳಿಗಾಗಿ ಜನರು ಅಲೆದಾಡಬೇಕಾಗಿದೆ.
ಪರಶಿವಮೂರ್ತಿ ಮಾಟಲದಿನ್ನಿ
ಕುಷ್ಟಗಿ (ಮೇ.10): ಶುದ್ಧ ಕುಡಿವ ನೀರಿನ ಘಟಕಗಳಲ್ಲಿ 5 ಬಂಗಾರದ ನಾಣ್ಯ (ಗೋಲ್ಡ್ ಕ್ವಾಯಿನ್) ಹಾಕಿ ನೀರು ಪಡೆಯುವ ಪದ್ಧತಿ ಜನರಿಗೆ ಫಜೀತಿ ತಂದಿದೆ. 5 ಮುಖ ಬೆಲೆಯ ಗೋಲ್ಡ್ ಕಾಯಿನ್ ಹಾಕಿದರೆ ಮಾತ್ರ ನೀರು ದೊರೆಯುತ್ತಿರುವುದರಿಂದ ಇಂತಹ ನಾಣ್ಯಗಳಿಗಾಗಿ ಜನರು ಅಲೆದಾಡಬೇಕಾಗಿದೆ. ಹೌದು. ಇದು ಕುಷ್ಟಗಿ ತಾಲೂಕಿನ ಕೇಸೂರು ಗ್ರಾಪಂ ಕೇಂದ್ರ ಸ್ಥಾನ ಕೇಸೂರು ಗ್ರಾಮದಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕದ ಕಥೆಯಾಗಿದೆ. ಇದು ಕಳೆದ ಆರೇಳು ವರ್ಷಗಳ ಹಿಂದೆ ಆರಂಭವಾದ ಈ ಆರ್‌ಓ ಪ್ಲಾಂಟ್ ಮೊದಲಿಗೆ ಕೇವಲ 1 ನಾಣ್ಯ ಹಾಕಿದರೆ ಇಪ್ಪತ್ತು ಲೀಟರ್ ನೀರು ದೊರೆಯುತಿತ್ತು.
ನಂತರದಲ್ಲಿ 2 ಹಾಕಿದರೆ ಇಪ್ಪತ್ತು ಲೀಟರ್ ನೀರು ದೊರೆಯುವಂತಹ ವ್ಯವಸ್ಥೆ ಮಾಡಿದ್ದರು.ಆದರೆ ಕಳೆದ ಸುಮಾರು ಮೂರು ನಾಲ್ಕು ತಿಂಗಳಗಳಿಂದ ಕಾರ್ಡ್ ರದ್ದುಗೊಳಿಸುವ ಮೂಲಕ .5 ಗೋಲ್ಡ್ ಕ್ವಾಯಿನ ಹಾಕಿದಾಗ ಮಾತ್ರ ನೀರು ಬರುವಂತೆ ಮಾಡಿದ್ದಾರೆ. ಆದರೆ ನೀರು ಪಡೆಯುವ ಗ್ರಾಹಕರಿಗೆ 5 ಗೋಲ್ಡ್ ಕ್ವಾಯಿನ್‌ಗಾಗಿ ಅಲೆದಾಡುವ ಸ್ಥಿತಿ ಒದಗಿ ಬಂದಿದ್ದು, ಕೂಡಲೇ ಮೊದಲಿದ್ದಂತೆ ಕಾರ್ಡ್ ಸ್ಕ್ಯಾನ್ ಮಾಡುವ ಮೂಲಕ ನೀರು ದೊರೆಯುವಂತೆ ಮಾಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಸ್ಥಿರ ಮತ್ತು ಬಹುಮತದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ: ಸಿಎಂ ಬೊಮ್ಮಾಯಿ
ವಿದ್ಯುತ್ ಇದ್ದರೆ ನೀರು: ಶುದ್ಧ ಕುಡಿವ ನೀರಿನ ಘಟಕದ ಟ್ಯಾಂಕರನಲ್ಲಿ ಸಾಕಷ್ಟುನೀರು ಇದ್ದರೂ ಸಹಿತ ಕರೆಂಟ್ ಇದ್ದಾಗ ಮಾತ್ರ ನೀರು ಪಡೆಯಲು ಅನುಕೂಲವಾಗುತ್ತದೆ. ವಿದ್ಯುತ್ ಕೈ ಕೊಡುವುದರಿಂದ ಜನರು ನೀರಿಗಾಗಿ ಕಾದು ಕಾದು ಸುಸ್ತಾಗುವಂತೆ ಮಾಡಿದೆ. ಕಾಯಿನ್ ಪದ್ಧತಿ ಮತ್ತು ಕರೆಂಟ್ ಕಣ್ಣಾಮುಚ್ಚಾಲೆಯಿಂದ ಜನರಿಗೆ ಸಮರ್ಪಕ ನೀರು ಸಿಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ.
ಸಾರ್ವಜನಿಕರ ಆಗ್ರಹ: ಇದೀಗ ಜಾಲ್ತಿಯಲ್ಲಿರುವ ಗೋಲ್ಡ್ ಕಾಯಿನ್ ಪದ್ಧತಿ ಕೈ ಬಿಟ್ಟು ಹಣ ನೀಡಿ ನೀರು ಪಡೆಯುವುದು ಮತ್ತು 5 ಬೆಲೆಯ ಯಾವುದೇ ಕಾಯಿನ್ ಹಾಕಿದರೂ ನೀರು ಪಡೆಯಲು ಅನುಕೂಲವಿರುವ ಯಂತ್ರ ಸರಳವಾಗಿ ನೀರು ದೊರಕುವಂತೆ ಇಲ್ಲವೆ 5 ಮುಖ ಬೆಲೆಯ ಯಾವುದೇ ಕಾಯಿನ್ ಹಾಕಿದರೂ ನೀರು ಬರುವಂತಹ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ಕಾರ್ಡ್ ಸ್ಕ್ಯಾನ್ ಮಾಡಿ ನೀರು ಪಡೆಯುವ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬೊಮ್ಮಾಯಿ ಮತ್ತೆ ಸಿಎಂ ಆದರೆ ಅಭ್ಯಂತರ ಇಲ್ಲ: ಬಿ.ಎಸ್.ಯಡಿಯೂರಪ್ಪ
ಕಾರ್ಡ್ ರಿಚಾರ್ಜ್ ಮಾಡಿಸಿದವರ ಗತಿ ಏನು: ನಾವು ಐದು ರೂ.ನಾಣ್ಯ ಬರುವ ಮುಂಚೆ ನೂರಾರು ರೂಪಾಯಿ ನಮ್ಮ ಕಾರ್ಡ್‌ಗೆ ರಿಚಾರ್ಜ್ ಮಾಡಿಸಲಾಗಿತ್ತು. ಗ್ರಾಪಂನವರು ಧೀಡಿರ್ ಈ ರೀತಿಯಾಗಿ ಮಾಡಿರುವದರಿಂದ ನಾವು ಕಾರ್ಡ್‌ಗೆ ರಿಚಾಜ್‌ರ್ ಮಾಡಿಸಿದ್ದಿವಿ ಅದು ಈಗ ಉಪಯೋಗಕ್ಕೆ ಬರುತ್ತಿಲ್ಲ ನಮ್ಮ ದುಡ್ದು ಸುಮ್ಮನೆ ಹಾಳಾಗುತ್ತಿದೆ ಆದ ಕಾರಣ ಕಾರ್ಡ್ ಸ್ಕ್ಯಾನ್ ಮಾಡಿ ನೀರು ಬರುವಂತೆ ಮಾಡಿದರೆ ಜನಕ್ಕೆ ಉಪಯೋಗವಾಗುತ್ತದೆ ಎಂದು ಶುದ್ಧ ನೀರು ತುಂಬಿಕೊಳ್ಳಲು ಬಂದ ಗ್ರಾಹಕ ಅನಿಲಕುಮಾರ ಪೋತಾ ಹೇಳುತ್ತಾರೆ.