ಒಂದುವರೆ ವರ್ಷದ ಗಂಡು ಮಗುವೊಂದನ್ನು ಅಪಾಯಕಾರಿ ಸ್ಥಿತಿಯಲ್ಲಿ ಬಿಟ್ಟು ಪೊಷಕರು ಪರಾರಿಯಾದ ಘಟನೆ ಗುರುವಾರ ರಾತ್ರಿ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಅವರಣ ಸಮೀಪದ ಆರ್‌.ಜಿ. ಸರ್ಕಲ್‌ನಲ್ಲಿ ನಡೆದಿದೆ.

ಪಾವಗಡ: ಒಂದುವರೆ ವರ್ಷದ ಗಂಡು ಮಗುವೊಂದನ್ನು ಅಪಾಯಕಾರಿ ಸ್ಥಿತಿಯಲ್ಲಿ ಬಿಟ್ಟು ಪೊಷಕರು ಪರಾರಿಯಾದ ಘಟನೆ ಗುರುವಾರ ರಾತ್ರಿ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಅವರಣ ಸಮೀಪದ ಆರ್‌.ಜಿ. ಸರ್ಕಲ್‌ನಲ್ಲಿ ನಡೆದಿದೆ.

ರಾತ್ರಿ 11ಗಂಟೆ ಸಮಯದಲ್ಲಿ ಆರೋಗ್ಯಕರವಾದ ಗಂಡು ಮಗುವೊಂದನ್ನು ಇಲ್ಲಿನ ಆರ್‌.ಜಿ. ಸರ್ಕಲ್‌ ಬಳಿ ಫೋಷಕರು ಬಿಟ್ಟು ನಾಪತ್ತೆಯಾಗಿದ್ದು, ಮಗುವನ್ನು ಕಂಡ ವ್ಯಕ್ತಿಯೊಬ್ಬ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿದ್ದಾರೆ.

ಕೊಡಲೇ ಸ್ಥಳಕ್ಕೆ ಧಾವಿಸಿದ ಆಸ್ಪತ್ರೆಯ ಸಿಬ್ಬಂದಿ ನಿಯಮನುಸಾರ ಮಗುವನ್ನು ಆಸ್ಪತ್ರೆಗೆ ದಾಖಲಿಸಿ, ಹಾರೈಕೆ ಮಾಡಿದ್ದಾರೆ. ಈ ಸಂಬಂಧ ಆಸ್ಪತ್ರೆಯ ಮಾಹಿತಿ ಮೇರೆಗೆ ಇಲ್ಲಿನ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಗುವನ್ನು ‍ವಶಕ್ಕೆ ಪಡೆದಿದ್ದಾರೆ. ಫೋಷಕರ ವಿರುದ್ಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.