Uttara Kannada : ಮರಣೋತ್ತರ ಪರೀಕ್ಷೆಗೆ ವೃದ್ಧನ ಶವ 3 ಕಿ.ಮೀ. ಹೆäತ್ತೊಯ್ದರು!

ಜಮೀನಿನಲ್ಲಿ ಬಿದ್ದ ಬೆಂಕಿ ಆರಿಸಲು ಹೋಗಿ ಮೃತಪಟ್ಟ ವೃದ್ಧನನ್ನು ಮರಣೋತ್ತರ ಪರೀಕ್ಷೆಗೆ ಅಂಕೋಲಾಕ್ಕೆ ಸಾಗಿಸಲು ಮೂರು ಕಿ.ಮೀ. ಕಾಲು ದಾರಿಯಲ್ಲಿ  ಹೊತ್ತುಕೊಂಡು ಹೋದ ಅಮಾನವೀಯ ಘಟನೆ ತಾಲೂಕಿನ ಬೆರೆಡೆ ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮಕ್ಕೆ ರಸ್ತೆ ಇಲ್ಲದ್ದರಿಂದ ವಾಹನ ಬರುವುದು ಅಸಾಧ್ಯವಾಗಿದ್ದರಿಂದ ಯುವಕರು ಅನಿವಾರ್ಯವಾಗಿ ಶವವನ್ನು 3 ಕಿ.ಮೀ. ದೂರ ಹೊತ್ತೊಯ್ದು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಸಾಸಿದ್ದಾರೆ.

The old mans body  was Carried  3 km away for postmortem examination at uttarakannada rav

ಅಂಕೋಲಾ (ಜ.12) : ಪಕ್ಕದ ಜಮೀನಿನಲ್ಲಿ ಬಿದ್ದ ಬೆಂಕಿಯನ್ನು ಆರಿಸಲು ಹೋಗಿ ಮೃತಪಟ್ಟವೃದ್ಧನನ್ನು ಮರಣೋತ್ತರ ಪರೀಕ್ಷೆಗೆ ಅಂಕೋಲಾಕ್ಕೆ ಸಾಗಿಸಲು ಊರಿನ ಯುವಕರೇ ಮೂರು ಕಿ.ಮೀ. ಕಾಲು ದಾರಿಯಲ್ಲಿ ಜೋಲಿ ಮಾಡಿಕೊಂಡು ಹೊತ್ತುಕೊಂಡು ಹೋದ ಅಮಾನವೀಯ ಘಟನೆ ತಾಲೂಕಿನ ಬೆರೆಡೆ ಗ್ರಾಮದಲ್ಲಿ ಬುಧವಾರ ನಡೆದಿದೆ.

ಈ ಗ್ರಾಮಕ್ಕೆ ರಸ್ತೆ ಇಲ್ಲದ್ದರಿಂದ ವಾಹನ ಬರುವುದು ಅಸಾಧ್ಯವಾಗಿದ್ದರಿಂದ ಯುವಕರು ಅನಿವಾರ್ಯವಾಗಿ ಶವವನ್ನು 3 ಕಿ.ಮೀ. ದೂರ ಹೊತ್ತೊಯ್ದು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.

ರಸ್ತೆ ಇಲ್ಲ, ಆಸ್ಪತ್ರೆ ಇಲ್ಲ : ತಾಯಿ ಮುಂದೆಯೇ ಪ್ರಾಣಬಿಟ್ಟ ನವಜಾತ ಅವಳಿ ಮಕ್ಕಳು

ಬೆರಡೆ ಗ್ರಾಮ(Berede village)ದ ನಿವಾಸಿ ದಾಮೋದರ ನಾಯ್ಕ(Damodar naik) (70) ಬುಧವಾರ ಬೆಳಗ್ಗೆ ತಮ್ಮ ಮನೆಯ ಪಕ್ಕದ ಜಮೀನಿನಲ್ಲಿ ಬಿದ್ದ ಬೆಂಕಿಯನ್ನು ಆರಿಸಲು ಹೋಗಿ ಬೆಂಕಿ ತಗುಲಿ ಮೃತಪಟ್ಟಿದ್ದರು. ಮೃತದೇಹವನ್ನು ಅಂಕೋಲಾ ಆಸ್ಪತ್ರೆಗೆ ಕೊಂಡೊಯ್ಯಲು ರಸ್ತೆ ಸಂಪರ್ಕ ಇಲ್ಲದ್ದರಿಂದ ವಾಹನ ಬರುವುದು ಅಸಾಧ್ಯವಾಗಿತ್ತು. ಕಾಲು ದಾರಿಯಲ್ಲಿ ಶವವನ್ನು ಜೋಲಿಯಂತೆ ಕಟ್ಟಿಕೊಂಡು ಸ್ಥಳೀಯ ಯುವಕರೇ ಹೊತ್ತು ಮೂರು ಕಿ.ಮೀ. ಸಾಗಿದ್ದಾರೆ. ಇದು ಮೊದಲ ಬಾರಿಯೇನಲ್ಲ. ಅನೇಕ ಬಾರಿ ಇಲ್ಲಿ ರಸ್ತೆ ಸಂಪರ್ಕ ಕಲ್ಪಿಸಿಕೊಡುವಂತೆ ಮನವಿ ಮಾಡಿಕೊಂಡರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ ಎಂದು ಸ್ಥಳಿಯರು ದೂರಿದ್ದಾರೆ. ಈ ಗ್ರಾಮದಲ್ಲಿ ಯಾರಿಗಾದರೂ ಅನಾರೋಗ್ಯ ಎದುರಾದರೆ ಅಥವಾ ಗಂಭೀರ ಕಾಯಿಲೆಯಾದರೆ ಆಸ್ಪತ್ರೆಗೆ ಸೇರಿಸಲೂ ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಗೆ ಸೇರಿಸಲೂ ಸಹ ಅಂಕೋಲಾಕ್ಕೆ ಮೂರು ಕಿ.ಮೀ. ಹೊತ್ತಿಕೊಂಡೇ ಹೋಗಬೇಕಾಗಿದೆ. ಹಲವು ಸಂದರ್ಭದಲ್ಲಿ ಮಾರ್ಗ ಮಧ್ಯೆ ರೋಗಿ ಮೃತಪಟ್ಟಪ್ರಕರಣವೂ ಇದೆ.

ಕೋಲಾರ: ರಸ್ತೆಗಾಗಿ ಒಂದೂವರೆ ತಿಂಗಳ ಹಸುಗೂಸಿನೊಂದಿಗೆ ದಂಪತಿ ಧರಣಿ

ಈ ಕುರಿತು ಸ್ಥಳೀಯರಾದ ರಾಮಕೃಷ್ಣ ಗುನಗಾ ಆಕ್ರೋಶ ವ್ಯಕ್ತಪಡಿಸಿ, ಹಲವಾರು ಭಾರಿ ನಾವು ಈ ಭಾಗಕ್ಕೆ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿದ್ದೇವೆ. ಯಾವೊಬ್ಬ ಜನಪ್ರತಿನಿಧಿಗಳು ಇಲ್ಲಿ ಕಣ್ಣೆತ್ತಿ ನೋಡಿಲ್ಲ. ಜಿಲ್ಲಾಡಳಿತವು ಕಣ್ಮುಚ್ಚಿ ಕುಳಿತಿದೆ. ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಈವರೆಗೆ ಯಾವುದೇ ಸಮಸ್ಯೆ ಪರಿಹರಿಸಿಲ್ಲ. ಇನ್ನಾದರೂ ಈ ಸಮಸ್ಯೆ ಬಗೆಹರಿಸಿ ಗ್ರಾಮಕ್ಕೆ ರಸ್ತೆ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios