ತಹಶೀಲ್ದಾರ್‌ಗೆ ಎಷ್ಟೇ ಮನವಿ ಮಾಡಿದ್ರು ಪ್ರಯೋಜನವಾಗ್ತಿಲ್ಲ ನಮ್ಮ ಮನೆಗೆ ಹೋಗಲು ದಾರಿ ಬೇಕು ಅಂತ ಪಟ್ಟು ಹಿಡಿದು ಧರಣಿ ನಡೆಸಿದ ದಂಪತಿ 

ಕೋಲಾರ(ಜು.22): ಮನೆಗೆ ರಸ್ತೆ ಇಲ್ಲ ಎಂದು ಒಂದುವರೆ ತಿಂಗಳ ಮಗು ಜೊತೆ ದಂಪತಿ ಪ್ರತಿಭಟನೆ ನಡೆಸಿರುವ ಘಟನೆ ನಗರದಲ್ಲಿ ಇಂದು(ಶುಕ್ರವಾರ) ನಡೆದಿದೆ. ಕೋಲಾರ ತಾಲ್ಲೂಕು ಕಛೇರಿ ಮುಂಭಾಗ ಘಟನೆ ನಡೆದಿದ್ದು ತಾಲ್ಲೂಕಿನ ಬೆಳಮಾರನಹಳ್ಳಿ‌ ಗ್ರಾಮದ ದಂಪತಿಯಾದ ರಂಜಿತ್ ಹಾಗೂ ಲಾವಣ್ಯ ತಾಲ್ಲೂಕು ಕಚೇರಿಯ ಮುಂಭಾಗ ತಮ್ಮ ಒಂದೂವರೆ ತಿಂಗಳ ಹಸುಗೂಸಿನೊಂದಿಗೆ ಮೌನ ಪ್ರತಿಭಟನೆ ನಡೆಸಿದ್ದಾರೆ.

ಈ ಬಗ್ಗೆ ನೋವು ತೋಡಿಕೊಂಡಿರುವ ರಂಜಿತ್, ಗ್ರಾಮದಲ್ಲಿ ಕೆಲ ಬಲಾಡ್ಯರು ನನ್ನ ಮನೆಗೆ ಹೋಗುವ ರಸ್ತೆಯನ್ನು ಕಳೆದ ಒಂದು ವರ್ಷದಿಂದ ಒತ್ತುವರಿ ಮಾಡಿಕೊಂಡಿದ್ದು ಓಡಾಡಲು ರಸ್ತೆ ಇಲ್ಲದಂತೆ ಮಾಡಿದ್ದಾರೆ. ಪಂಚಾಯಿತಿಗೆ ಮನವಿ ಮಾಡಿ ತೆರವು ಮಾಡಿಕೊಡಿ ಎಂದು ಎಷ್ಟೇ ಬಾರಿ ಮನವಿ ಮಾಡಿದ್ರು ಸಹ ಪ್ರಯೋಜನವಾಗಿಲ್ಲ ಅಂತ ತಮ್ಮ ಹೇಳಿಕೊಂಡಿದ್ದಾರೆ.

Kolar: ಭ್ರಷ್ಟಾಚಾರ ಬಗ್ಗೆ ಪ್ರಶ್ನಿಸಿದ ಕೆಆರ್‌ಎಸ್ ಪಕ್ಷದವರ ಮೇಲೆ ಬ್ರೋಕರ್‌ಗಳಿಂದ ಹಲ್ಲೆ

ಪಂಚಾಯ್ತಿಯ ಗ್ರಾಮ ಲೆಕ್ಕಾಧಿಕಾರಿ ಅರುಣ್, ತೆರವು ಮಾಡಿಕೊಡುತ್ತೇನೆ ಎಂದು 10 ಸಾವಿರ ಹಣ ಸಹ ಪಡೆದುಕೊಂಡಿದ್ದಾರೆ. ಈಗ ಮತ್ತೆ ಹಣ ಕೇಳುತ್ತಿದ್ದಾರೆ. ತಹಶೀಲ್ದಾರ್‌ಗೆ ಎಷ್ಟೇ ಮನವಿ ಮಾಡಿದ್ರು ಪ್ರಯೋಜನವಾಗ್ತಿಲ್ಲ ನಮ್ಮ ಮನೆಗೆ ಹೋಗಲು ದಾರಿ ಬೇಕು ಎಂದು ದಂಪತಿ ಪಟ್ಟು ಹಿಡಿದು ಧರಣಿ ನಡೆಸಿದ್ದಾರೆ.