ಉಡುಪಿ: ಶತಾಯುಷಿ ಮತದಾರರ ಮನೆ ಬಾಗಿಲಿಗೆ ತೆರಳಿ ಮತದಾನಕ್ಕೆ ಆಹ್ವಾನಿಸಿದ ಅಧಿಕಾರಿ
ತಾಲೂಕು ಪಂಚಾಯತ್ ಮತ್ತು ಉಡುಪಿ ನಗರಸಭಾ ವ್ಯಾಪ್ತಿಯ ಶತಾಯುಷಿ ಮತದಾರರಿಗೆ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತದಾನದಲ್ಲಿ ಭಾಗವಹಿಸಲು ಆಹ್ವಾನ ಪತ್ರಿಕೆಯನ್ನು ಅವರುಗಳ ಮನೆ ಬಾಗಿಲಿಗೆ ತೆರಳಿ ತಾಲೂಕು ಪಂಚಾಯತಿನ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಉಡುಪಿ ತಾಲೂಕು ಸ್ವೀಪ್ (sveep) ಸಮಿತಿಯ ಅಧ್ಯಕ್ಷರಾಗಿರುವ ಶ್ರೀಮತಿ ವಿಜಯಾ ಇವರು ನೀಡಿದರು.
ಉಡುಪಿ (ಏ.15) : ತಾಲೂಕು ಪಂಚಾಯತ್ ಮತ್ತು ಉಡುಪಿ ನಗರಸಭಾ ವ್ಯಾಪ್ತಿಯ ಶತಾಯುಷಿ ಮತದಾರರಿಗೆ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತದಾನದಲ್ಲಿ ಭಾಗವಹಿಸಲು ಆಹ್ವಾನ ಪತ್ರಿಕೆಯನ್ನು ಅವರುಗಳ ಮನೆ ಬಾಗಿಲಿಗೆ ತೆರಳಿ ತಾಲೂಕು ಪಂಚಾಯತಿನ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಉಡುಪಿ ತಾಲೂಕು ಸ್ವೀಪ್ (sveep) ಸಮಿತಿಯ ಅಧ್ಯಕ್ಷರಾಗಿರುವ ಶ್ರೀಮತಿ ವಿಜಯಾ ಇವರು ನೀಡಿದರು.
ಜಿಲ್ಲೆಯ ಶತಾಯುಷಿ ಮತದಾರರುಗಳಾದ ಲಿಯೋನೋ ರೊಡ್ರಿಗಸ್, ಕೋಂ, ರೈಮಂಡ್ ರೊಡ್ರಿಗಸ್ ದೊಡ್ಡಣ್ಣಗುಡ್ಡೆ, ಲಕ್ಷ್ಮಿ, ಕೋಂ, ದೇವಪ್ಪ ಆಚಾರ್ಯ ನಿಟ್ಟೂರು - ಕರಂಬಳ್ಳಿ, ರಾಧಾ ಹೆಗ್ಡೆ, ಕೋಂ, ಶೇಖರ್ ಹೆಗಡೆ, ಕೊಡವೂರು, ರಾಮದಾಸ್ ಕಾಮತ್, ಶ್ರೀನಿವಾಸ್ ಕಾಮತ್, ಒಳಕಾಡು, ಮೇರಿ ದಾಂತಿ ಸೇವಾಲ್ ದಾಂತಿ ಕುತ್ಪಾಡಿ ಈ ಐದು ಶತಾಯುಷಿ ಮತದಾರರು ಆಹ್ವಾನ ಪಡೆದ ಮತದಾರರಾಗಿದ್ದಾರೆ.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶ್ರೀಮತಿ ವೀಣಾ ವಿವೇಕಾನಂದ, ತಾ ಪಂ ನ ವ್ಯವಸ್ಥಾಪಕ ಶ್ರೀ ಸುರೇಶ್, ಸಿಬ್ಬಂದಿ ಚಂದ್ರ ನಾಯ್ಕ್ ,ಕಾಪು ತಾಲೂಕು ಚುನಾವಣಾ ಶಾಖಾ ಸಿಬ್ಬಂದಿಗಳು ಮತ್ತು ಮತಗಟ್ಟೆ ಅಧಿಕಾರಿ (BLO)ಗಳು ಕಾರ್ಯನಿರ್ವಹಣಾಧಿಕಾರಿಯವರ ಜೊತೆಯಲ್ಲಿದ್ದು ಮತದಾನಕ್ಕೆ ಆಹ್ವಾನಿಸಿದರು.
ನಿಷ್ಪಕ್ಷಪಾತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಮುಂದಾಗಿ: ಮುಖೇಶ್ ತಾರಾಚಂದ್ ಥಕ್ವಾನ