ಬೆಂಗಳೂರಿನಲ್ಲಿ 1 ಕೋಟಿ ದಾಟಿದ ಮತದಾರರ ಸಂಖ್ಯೆ: ಹೊಸದಾಗಿ 4 ಲಕ್ಷ ಸೇರ್ಪಡೆ

ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ ರಾಜಧಾನಿಯಲ್ಲಿ ಸುಮಾರು 4 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದು, ನಗರದ ಒಟ್ಟು ಮತದಾರರ ಸಂಖ್ಯೆ 1.02 ಕೋಟಿ ಮೀರಿದೆ. 

The Number of Voters in Bengaluru has Crossed 1 Crore gvd

ಬೆಂಗಳೂರು (ಅ.30): ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ ರಾಜಧಾನಿಯಲ್ಲಿ ಸುಮಾರು 4 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದು, ನಗರದ ಒಟ್ಟು ಮತದಾರರ ಸಂಖ್ಯೆ 1.02 ಕೋಟಿ ಮೀರಿದೆ. ಮಂಗಳವಾರ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಬಿಬಿಎಂಪಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಕಳೆದ ಜನವರಿಯಲ್ಲಿ ಬಿಡುಗಡೆ ಮಾಡಿದ 2024ರ ಅಂತಿಮ ಮತದಾರ ಪಟ್ಟಿಯಲ್ಲಿ 98.43 ಲಕ್ಷ ಮತದಾರರಿದ್ದರು. ಇದೀಗ ಕರಡು ಮತದಾರ ಪಟ್ಟಿಯಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 1,02,41,226 ಮತದಾರರಿದ್ದಾರೆ. ಈ ಪೈಕಿ 52,69,188 ಪುರುಷರು, 49,70,207 ಮಹಿಳೆಯರು ಹಾಗೂ 1,831 ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ ಎಂದರು.

1.02 ಕೋಟಿ ಮತದಾರರ ಪೈಕಿ 86.044 ಯುವ ಮತದಾರರು, 1.19 ಲಕ್ಷ 85- 99 ವರ್ಷದ ಹಿರಿಯ ಮತದಾರರಿದ್ದು, 100ಕ್ಕಿಂತ ಹೆಚ್ಚು ವಯಸ್ಸಿನ 4,852 ಹಿರಿಯ ಮತದಾರರಿದ್ದಾರೆ. 2,272 ಅನಿವಾಸಿ ಭಾರತೀಯ ಮತದಾರರು, 1,708 ಸೇವಾ ಮತದಾರರು, ಹಾಗೂ 32,213 ಅಂಗವಿಕಲ ಮತದಾರರಿದ್ದಾರೆ. ನಗರದಲ್ಲಿ ಒಟ್ಟು 8,972 ಮತಗಟ್ಟೆಗಳಿವೆ ಎಂದು ತಿಳಿಸಿದರು. ಪ್ರಸಕ್ತ ಮತದಾರ ವಿಶೇಷ ಪರಿಷ್ಕರಣೆ ವೇಳೆ ಹೊಸದಾಗಿ 1,98,563 ಮತದಾರರು ಸೇರ್ಪಡೆಯಾಗಿದ್ದಾರೆ. 93,419 ಮತದಾರರು ಸ್ಥಳ ಬದಲಾವಣೆ ಹಾಗೂ 85.321 ಮತದಾರರನ್ನು ಮತದಾರ ಪಟ್ಟಿಯಿಂದ ಹೆಸರು ತೆಗೆದು ಹಾಕಲಾಗಿದೆ ಎಂದರು.

ಸಬರ್ಬನ್ ರೈಲ್ವೆ ವಿಳಂಬಕ್ಕೆ ಸಿಎಸ್ ಶಾಲಿನಿ ರಜನೀಶ್ ಅಸಮಾಧಾನ

ವಿಶೇಷ ನೋಂದಣಿ ಅಭಿಯಾನ: ನಗರದಲ್ಲಿ ನ.9ರ ಶನಿವಾರ, ನ.10ರ ಭಾನುವಾರ, ನ.23ರ ಶನಿವಾರ ಹಾಗೂ ನ.24ರ ಭಾನುವಾರ ಪಾಲಿಕೆಯ ಕಂದಾಯ ಅಧಿಕಾರಿಗಳು, ಸಹ ಕಂದಾಯ ಅಧಿಕಾರಿಗಳು ಹಾಗೂ ವಾರ್ಡ್ ಕಚೇರಿ, ಮತಗಟ್ಟೆಗಳಲ್ಲಿ ವಿಶೇಷ ನೊಂದಣಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಸೆಲ್ವಮಣಿ ತಿಳಿಸಿದರು. ಪಾಲಿಕೆಯ 28 ವಿಧಾನಸಭಾ ಕ್ಷೇತ್ರವಾರು ಬಿಎಲ್‌ಓ ಮನೆ-ಮನೆ ಭೇಟಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಿದ್ದಾರೆ. ಯುವ ಮತದಾರರು ಅರ್ಜಿ ನಮೂನೆ-6ಅನ್ನು ಆನ್‌ಲೈನ್ ಮುಖಾಂತರ ಸ್ವಯಂ ಪ್ರೇರಿತವಾಗಿ Web Portal-Voters.eci.gov.in ಅಥವಾ Voter Helpline Mobile App ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ರಾಜಕೀಯ ಪ್ರತಿನಿಧಿಗಳೊಂದಿಗೆ ಸಭೆ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025ರ ಸಂಬಂಧ ಕರಡು ಮತದಾರರ ಪಟ್ಟಿ ಪ್ರಕಟಣೆಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಮಂಗಳವಾರ ರಾಜಕೀಯ ಪ್ರತಿನಿಧಿಗಳ ಜತೆಗೆ ಸಭೆ ನಡೆಸಿದರು. ಈ ವೇಳೆ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ವಿನೋತ್ ಪ್ರಿಯಾ, ಅವಿನಾಶ್ ಮೆನನ್ ರಾಜೇಂದ್ರನ್, ಸ್ನೇಹಲ್, ಸಹಾಯಕ ಆಯುಕ್ತ ಶರಣಪ್ಪ ಉಪಸ್ಥಿತರಿದ್ದರು.

ಮತ ಪಟ್ಟಿ ಸೇರ್ಪಡೆಗೆಬೇಕಾದ ದಾಖಲೆಗಳು: ಜನನ ಪ್ರಮಾಣ ಪತ್ರ, 10ನೇ ತರಗತಿಯ ಅಂಕಪಟ್ಟಿ, ಭಾರತೀಯ ರಹದಾರಿ ಪತ್ರ (ಭಾರತೀಯ ಪಾಸ್‌ಪೋರ್ಟ್), ಪಾನ್ ಕಾರ್ಡ್, ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್), ಆಧಾರ್ ಕಾರ್ಡ್, ಭಾವಚಿತ್ರವಿರುವ ಬ್ಯಾಂಕ್‌ ಪಾಸ್ ಪುಸ್ತಕ, ಪಡಿತರ ಗುರುತಿನ ಚೀಟಿ, ಆದಾಯ ತೆರಿಗೆ ಮೌಲ್ಯಮಾಪನ ಆದೇಶ, ಬಾಡಿಗೆ ಕರಾರು ಪತ್ರ, ನೀರು, ದೂರವಾಣಿ, ವಿದ್ಯುತ್ ಬಿಲ್, ಗ್ಯಾಸ್ ಸಂಪರ್ಕ ಪಟ್ಟಿ (ಬಿಲ್).

ಜನವರಿ 6ಕ್ಕೆ ಅಂತಿಮ ಪಟ್ಟಿ: ಮತದಾರರ ಕರಡು ಪಟ್ಟಿಗೆ ಸಂಬಂಧಿಸಿದಂತೆ ನ.28ರ ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. 2025ರ ಜನವರಿ 6ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ.

ದರ್ಶನ್‌ಗೆ ಬೇಲಾ? ಜೈಲಾ? ಇಂದು ಆದೇಶ: ಬೆನ್ನು ಸರ್ಜರಿಗೆ ಚಿಕಿತ್ಸೆ ಪಡೆಯದಿದ್ರೆ ಮೂತ್ರ ನಿಯಂತ್ರಣ ಸಮಸ್ಯೆ

ಮತದಾರರ ವಿವರ
ಲಿಂಗ ಅಂತಿಮ ಪಟ್ಟಿ(ಜನವರಿ 2024) ಕರಡು ಪಟ್ಟಿ(ಅಕ್ಟೋಬರ್‌ 2024)

ಪುರುಷರು 50,78,525 52,69,188
ಮಹಿಳೆ 47,63,268 49,70,207
ಲೈಂಗಿಕ ಅಲ್ಪ ಸಂಖ್ಯಾತರು 1,784 1,831
ಒಟ್ಟು 98,43,577 1,02,41,226

Latest Videos
Follow Us:
Download App:
  • android
  • ios