Asianet Suvarna News Asianet Suvarna News

ಕಾಟ ಕೊಡುತ್ತಿದ್ದ ಕೋತಿ: ಬಲೆ ಹಾಕಿ ಹಿಡಿದ ಗ್ರಾಮಸ್ಥರು

ಮಂಡ್ಯ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಮಂಗಗಳ ಕಾಟಕ್ಕೆ ಗ್ರಾಮಸ್ಥರು ಕಂಗಲಾಗಿದ್ದಾರೆ. ದಾರಿಹೋಕರು, ಮಕ್ಕಳ ಮೇಲೆ ಮಂಗ ದಾಳಿ ಮಾಡುವ ಮೂಲಕ ಕಾಟ ಕೊಡುತ್ತಿತ್ತು. ಗ್ರಾಮಸ್ಥರು ಮಂಗವನ್ನು ಬಲೆಗೆ ಹಾಕಿ ಕೊನೆಗೂ ಅರಣ್ಯ ಇಲಾಖೆಗೆ ಒಪ್ಪಿಸಿ ನಿಟ್ಟುಸಿರು ಬಿಟ್ಟಿದ್ದಾರೆ. 

The monkey that was troubled  villagers caught it by setting a trap mandya
Author
First Published Sep 28, 2022, 3:18 PM IST

ಮಂಡ್ಯ (ಸೆ.28) : ನಗರದಲ್ಲಿ ಕೋತಿಯ ಹಾವಳಿಗೆ ಜನ ಹೈರಾಗಿದ್ದಾರೆ. ದಾರಿಹೋಕರು, ಮಕ್ಕಳು, ಮುದುಕರೆನ್ನದೇ ಸಿಕ್ಕ ಸಿಕ್ಕವರ ಮೇಲೆ ಒಂಟಿ ಕೋತಿ ದಾಳಿ ಮಾಡುತ್ತಿದೆ.ಮನೆ ಬಾಗಿಲು ತೆಗೆಯುವದನ್ನೇ ಕಾದು ಕುಳಿತು ಏಕಾಏಕಿ ದಾಳಿ ಮಾಡುತ್ತಿದೆ. ಕೋತಿ ಹಾವಳಿಗೆ ಜನರು ಬೆಚ್ಚಿಬಿದ್ದಿದ್ದು, ಬಾಗಿಲು ತೆರೆಯಲು ಹೆದರುವಂತಾಗಿದೆ. ಒಂಟಿ ಕೋತಿಯ ದಾಳಿಗೆ ಒಳಗಾಗಿರುವ ಲಕ್ಷೀಪುರ ಗ್ರಾಮಸ್ಥರು. ಭಯದಲ್ಲೇ ಓಡಾಡುತ್ತಿದ್ದಾರೆ.

Uttara Kannada: ಮಂಗನ ಕಾಟಕ್ಕೆ ಬೆದರಿದ ಅಂಕೋಲಾದ ಬೊಬ್ರುವಾಡದ ಮಂದಿ: ಹಲವರ ಮೇಲೆ ದಾಳಿ

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಲಕ್ಷೀಪುರ ಗ್ರಾಮ. ಈಗಾಗಲೇ ಗ್ರಾಮ ಜನರ ಮೇಲೆ ದಾಳಿ ಮಾಡಿದ್ದು, ವಯೋವೃದ್ಧರು ಸೇರಿ 8ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನಾಲ್ಕು ದಿನದ ಹಿಂದೆಯಷ್ಟೇ ಗ್ರಾಮಕ್ಕೆ ಬಂದಿರುವ ಕೋತಿ ಮನೆಗಳ ಮೇಲೆ ಕುಳಿತು ಬಾಗಿಲು ತೆಗೆಯುವುದನ್ನೇ ಹೊಂಚು ಹಾಕುತ್ತದೆ. ಬಾಗಿಲು ತೆಗೆದ್ರೆ ಸಾಕು ಜಂಪ್ ಮಾಡಿ ಕಚ್ಚುವ ಮೂಲಕ ಆತಂಕ ಸೃಷ್ಟ ಮಾಡಿದೆ.

ಸೆರೆ ಹಿಡಿಯಲು ಬಂದ ಅರಣ್ಯ ಇಲಾಖೆ ಸಿಬ್ಬಂದಿಗೂ ಸಿಗದೆ ತಲೆನೋವಾಗಿ ಪರಿಣಮಿಸಿತ್ತು. ಬೋನ್ ಇರಿಸಿ ಬಾಳೆ ಹಣ್ಣಿನ ಆಸೆ ತೋರಿಸಿದ್ರೂ ಬೀಳದ ಕೋತಿಯ ಕಾಟಕ್ಕೆ ಗ್ರಾಮಸ್ಥರು ಸುಸ್ತು ಆಗಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಬರುತ್ತಿದ್ದಂತೆ ಮನೆಯಿಂದ ಮನೆಗೆ ಜಂಪ್ ಮಾಡಿ ಪರಾರಿಯಾಗುತ್ತಿದ್ದ ಮಂಗನ ಕಪಿ ಚೇಷ್ಟೆಗೆ ಅರಣ್ಯ ಇಲಾಖೆ ಸಿಬ್ಬಂದಿಯೇ ದಂಗಾಗಿದ್ದರು.

ಕೊನೆಗೂ ಸಿಕ್ಕ ಕಪಿರಾಯ!

ಶಿಕಾರಿಪುರದ ಆದಿವಾಸಿ ಜನರ ಸಹಾಯದಿಂದ ಕೊನೆಗೂ ಸಿಕ್ಕ ಕ್ವಾಟ್ಲೆ ಕೋತಿ. ಉರುಳು ಹಾಕಿ ಕೋತಿ ಸೆರೆ ಹಿಡಿದ ಆದಿವಾಸಿ ಸಮುದಾಯದ ನಾಲ್ವರು. ಸೆರೆ ಹಿಡಿದ ಕೋತಿಯನ್ನ ತಮ್ಮ ವಶಕ್ಕೆ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು. ಕ್ವಾಟ್ಲೆ ಕೋತಿ ಸೆರೆಯಾಗುತ್ತಿದ್ದಂತೆ ನಿಟ್ಟುಸಿರು ಬಿಟ್ಟಿರೊ ಗ್ರಾಮಸ್ಥರು. ಕೋತಿ ಗ್ರಾಮಕ್ಕೆ ಬಂದ ದಿನದಿಂದ ಭಯದಲ್ಲೇ ನಿದ್ರೆ ಬಿಟ್ಟಿದ್ದ ಜನರು.

ಜನರ ಮೇಲೆ ದಾಳಿ ಮಾಡಿದ್ದ ಕೋತಿ ಸೆರೆ

ಹಾವೇರಿ : ನಗರದ ದ್ಯಾಮವ್ವನ ಓಣಿ, ದೇಸಾಯಿ ಗಲ್ಲಿ ,ಕೂಲಿಯವರ ಓಣಿ ಮುಂತಾದ ಕಡೆ ಸುಮಾರು 40 ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದ ಕೋತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಕೃಷ್ಣ, ಅರಣ್ಯಾಧಿಕಾರಿ ಅಬ್ದುಲ ಅಲಿಂ ಸಿದ್ದಿಕ್ಕಿ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ರಾಮಪ್ಪ ಪೂಜಾರ ಸಿಬ್ಬಂದಿ, ಸಾರ್ವಜನಿಕರೊಂದಿಗೆ ಸೇರಿ ಪುಂಡ ಕೋತಿಯನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಡಲಾಯಿತು.

ಜಿಲ್ಲಾಧಿಕಾರಿಯ ಕನ್ನಡಕ ಕಸಿದ ಕೋತಿ: ಫ್ರೂಟಿ ಕೊಟ್ಟು ಸ್ಪೆಕ್ಟ್ಸ್‌ ಪಡೆದ ಪೊಲೀಸರು..!

ಅರಣ್ಯ ಸಿಬ್ಬಂದಿ ಪ್ರವೀಣ್‌ ಭಜಂತ್ರಿ, ರೂಪ ಯಡಚಿ, ಗಜೇಂದ್ರ ರೆಹಮತ್‌, ಮೌಲಾಲಿ, ಅಲಿ ದಾಂಡೇಲಿ , ಮಂಜುನಾಥ , ಪ್ರಭು ಮಡಿವಾಳರ ಸೇರಿದಂತೆ ಅನೇಕರು ಕೋತಿ ಹಿಡಿಯಲು ಹರಸಾಹಸಪಟ್ಟರು.

Follow Us:
Download App:
  • android
  • ios