ಅನಾರೋಗ್ಯದಿಂದ ಖಾನಾಪೂರ ಯೋಧ ನಿಧನ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Aug 2018, 8:37 PM IST
The Khanapura soldier died due to illness
Highlights

ಅನಾರೋಗ್ಯದಿಂದ ಖಾನಾಪುರದ ಯೋಧ ಸಾವು! ಖಾನಾಪುರ ತಾಲೂಕಿನ ಕಸಮಳಗಿ ಗ್ರಾಮದ ಯೋಧ! ಕಸಮಳಗಿ ಗ್ರಾಮದ ಮೌಲಾಲಿ ಪಾಟೀಲ ಮೃತ ಯೋಧ! ಅನಾರೋಗ್ಯದಿಂದ ಬಳಲುತ್ತಿದ್ದ ಯೋಧ ಮೌಲಾಲಿ! 21ವರ್ಷದಿಂದ ಸೇನೆಯಲ್ಲಿ ಸೇವೆಸಲ್ಲಿಸುತ್ತಿದ್ದ ಯೋಧ

ಖಾನಾಪೂರ(ಆ.11): ಅನಾರೋಗ್ಯದ ಕಾರಣ ಯೋಧನೋರ್ವ ಮೃತಪಟ್ಟ ಘಟನೆ ಖಾನಾಪೂರದಲ್ಲಿ ನಡೆದಿದೆ.

ಖಾನಾಪೂರ್ ತಾಲೂಕಿನ ಕಸಮಳಗಿ ಗ್ರಾಮದ ಯೋಧ ಮೌಲಾಲಿ ಪಾಟೀಲ ಮೃತಪಟ್ಟ ಯೋಧ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮೌಲಾಲಿ ಅವರನ್ನು,  ಚಿಕಿತ್ಸೆಗಾಗಿ ಪುಣೆಯ ಮಿಲಿಟರಿ ಹಾಸ್ಪಿಟಲ್ ಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಯೋಧ ಮೌಲಾಲಿ ಮೃತಪಟ್ಟಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಕಳೆದ ೨೧ ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಮೌಲಾಲಿ, ಪಶ್ಚಿಮ ಬಂಗಾಳದ ಪಾನಗದಲ್ಲಿ ಕತರ್ತವ್ಯದಲ್ಲಿದ್ದರು. 

ಮೃತ ಯೋಧನಿಗೆ ಪತ್ನಿ, ಓರ್ವ ಪುತ್ರ, ತಂದೆ ತಾಯಿ ಹಾಗೂ ಮೂವರು ಸಹೋದರರಿದ್ದಾರೆ. ಇಂದು ಬೆಳಗ್ಗೆ ಯೋಧ ಮೌಲಾಲಿ ಪಾಟೀಲ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

loader