ಕೆಲಸದ ಅವಧಿ 12 ಗಂಟೆಯವರೆಗೆ ಹೆಚ್ಚಿಸಿರುವುದು ಖಂಡನೀಯ
ರಾಜ್ಯ ಸರ್ಕಾರ ಕಾರ್ಖಾನೆಗಳ ಕಾಯ್ದೆಗೆ ತಿದ್ದುಪಡಿ ತಂದು ಕೆಲಸದ ಅವಧಿ 12 ಗಂಟೆಯವರಿಗೆ ಹೆಚ್ಚಿಸಿರುವುದು ಹಾಗೂ ಮಹಿಳಾ ಕಾರ್ಮಿಕರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿರುವುದನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯವರು (ಜೆಸಿಟಿಯು) ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟಿಸಿದರು.
ಮೈಸೂರು :" ರಾಜ್ಯ ಸರ್ಕಾರ ಕಾರ್ಖಾನೆಗಳ ಕಾಯ್ದೆಗೆ ತಿದ್ದುಪಡಿ ತಂದು ಕೆಲಸದ ಅವಧಿ 12 ಗಂಟೆಯವರಿಗೆ ಹೆಚ್ಚಿಸಿರುವುದು ಹಾಗೂ ಮಹಿಳಾ ಕಾರ್ಮಿಕರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿರುವುದನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯವರು (ಜೆಸಿಟಿಯು) ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟಿಸಿದರು.
ಕಳೆದ ವಿಧಾನ ಮಂಡಳದ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಏಕಾ ಏಕಿ ಕಾರ್ಖಾನೆಗಳ ಕಾಯ್ದೆ 1948ಕ್ಕೆ ತಿದ್ದುಪಡಿ ತಂದಿರುತ್ತದೆ. ಇದರಲ್ಲಿ ಕಾರ್ಮಿಕರು ಕೆಲಸದ ಅವಧಿ ಈ ಹಿಂದೆ ಇದ್ದ 8 ಗಂಟೆಗಳಿಗೆ ಬದಲಾಗಿ 12 ಗಂಟೆಯವರೆಗೆ ದುಡಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಇದರಿಂದ ಕಾರ್ಖಾನೆಗಳ ಮಾಲೀಕರು ಈಗ ಇದ್ದ 8 ಗಂಟೆಗಳ ಅವಧಿಯನ್ನು ಹೆಚ್ಚಿಸಿ ಈಗಿನ ವೇತನದಲ್ಲೇ ಹೆಚ್ಚು ಕೆಲಸವನ್ನು ಮಾಡಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಇದು ಕಾರ್ಮಿಕನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅವರ ಆತಂಕ ವ್ಯಕ್ತಪಡಿಸಿದರು.
ಅಲ್ಲದೆ, ಹಿಂದಿನ ಕಾಯ್ದೆಯ ಪ್ರಕಾರ ಮಹಿಳಾ ಕಾರ್ಮಿಕರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ಇರಲಿಲ್ಲ. ಆದರೆ, ಈಗ ತಂದಿರುವ ತಿದ್ದುಪಡಿಯ ಪ್ರಕಾರ ಮಹಿಳಾ ಕಾರ್ಮಿಕರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರವು 1919ರಲ್ಲಿ ನಡೆದ ಇನ್ಟರ್ನ್ಯಾಷನಲ್ ಲೇಬರ್ ಆರ್ಗನೈಸೇಷನ್ ಸಮಾವೇಶದಲ್ಲಿ ತೆಗೆದುಕೊಂಡಿರುವ ನಿರ್ಧಾರ ಸಂಖ್ಯೆ-1ರಲ್ಲಿ ಕೆಲಸದ ಅವಧಿಯ ಬಗ್ಗೆ ತೆಗೆದುಕೊಂಡಿರು ನಿರ್ಧಾರಕ್ಕೆ ವಿರುದ್ಧವಾಗಿದೆ ಎಂದು ಅವರು ಆರೋಪಿಸಿದರು.
ಈ ಸಮಾವೇಶದ ನಿರ್ಧಾರವನ್ನು ಭಾರತ ಸರ್ಕಾರ ಕೂಡಾ ಅನುಮೋದಿಸಿರುತ್ತದೆ. ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿ, ಇದೂ ಅಲ್ಲದೆ ಈ ಕಾಯ್ದೆಯಂತೆ ಹೆಚ್ಚುವರಿ ಕೆಲಸ ಮಾಡಿಸಿಕೊಳ್ಳುವುದರಿಂದ ವಿಶ್ವ ಕಾರ್ಮಿಕರ ಹೋರಾಟದಿಂದ ವಿಶ್ವದಾದ್ಯಂತ ಪಡೆದುಕೊಂಡ 8 ಗಂಟೆ ಕೆಲಸ, 8 ಗಂಟೆ ವಿಶ್ರಾಂತಿ ಮತ್ತು 8 ಗಂಟೆ ನಿದ್ರೆ ಈ ಆಶಯಕ್ಕೆ ವಿರುದ್ಧವಾಗಿದ್ದು, 12 ಗಂಟೆ ದುಡಿಸಿಕೊಳ್ಳುವುದರಿಂದ ಕಾರ್ಮಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೆ, ಮಹಿಳಾ ಕಾರ್ಮಿಕರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳುವುದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಅಲ್ಲದೆ ಅವರ ಸುರಕ್ಷೆಗೆ ಧಕ್ಕೆ ಬರುವ ಸಂಭವವಿರುತ್ತದೆ ಎಂದು ಅವರು ದೂರಿದರು.
ಹೀಗಾಗಿ, ಇಂತಹ ಕಾರ್ಮಿಕ ವಿರೋಧಿ ಕಾಯ್ದೆ ಜಾರಿಯಾಗುವ ಮೊದಲು ಸರ್ಕಾರ ಕಾರ್ಮಿಕ ಸಂಘಟನೆಗಳೊಂದಿಗೆ ಮತ್ತು ತಜ್ಞರೊಂದಿಗೆ ಚರ್ಚಿಸಬೇಕಾಗಿತ್ತು. ಆದರೆ, ಈ ಕಾರ್ಮಿಕ ವಿರೋಧಿ ಸರ್ಕಾರ ಏಕ ಪಕ್ಷೀಯ ನಿರ್ಧಾರ ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜೆಸಿಟಿಯು ಮುಖಂಡರಾದ ಎನ್.ಕೆ. ದೇವದಾಸ್, ಎಚ್.ಆರ್. ಶೇಷಾದ್ರಿ, ಜಯರಾಮ್, ಎಚ್.ಎಂ. ಬಸವಯ್ಯ, ಅನ್ನಪ್ಪ, ರಾಮು, ಶ್ರೀಧರ್, ವೆಂಕಟೇಶ್, ರೇವಣ್ಣ, ಬಾಲಾಜಿರಾವ್, ಚಂದ್ರಶೇಖರ ಮೇಟಿ, ಅನಿಲ್ಕುಮಾರ್, ಜವರಯ್ಯ ಮೊದಲಾದವರು ಇದ್ದರು.
ಇಲ್ಲಿ ವಲಸೆ ಕಾರ್ಮಿಕರಿಗೆ ಉಚಿತ ಊಟ
ಬೆಂಗಳೂರು (ಮಾ.6) : ವಲಸೆ ಕಾರ್ಮಿಕರಿಗೆ ಉಚಿತ ವಸತಿ ನೀಡುವ ‘ಶ್ರಮಿಕ್ ವಸತಿ’ ಯೋಜನೆಯನ್ನು ಕಾರ್ಮಿಕ ಇಲಾಖೆ ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಳಿಸಿದ್ದು, ಶೀಘ್ರದಲ್ಲೇ ವಸತಿ ಸಮುಚ್ಚಯ, ಬಿಡಿ ಮನೆಗಳು ಲೋಕಾರ್ಪಣೆಯಾಗಲಿವೆ.
ಕೈಗಾರಿಕಾ ಪ್ರದೇಶಗಳು ಮತ್ತು ಬೃಹತ್ ನಿರ್ಮಾಣ ವಲಯಗಳ ಆಸುಪಾಸಿನಲ್ಲಿ ‘ಶ್ರಮಿಕ್ ನಿವಾಸ್’ ಯೋಜನೆ(Shramik Niwas scheme)ಯಡಿ ಸಂಘಟಿತ ಕಾರ್ಮಿಕರಿಗೆ ವಸತಿ ನೀಡಲು ವಸತಿ ಸಮುಚ್ಚಯ ಮತ್ತು ಬಿಡಿ ಮನೆಗಳ ನಿರ್ಮಾಣಕ್ಕೆ ಇಲಾಖೆ ಮುಂದಾಗಿದೆ. ಯೋಜನೆಯ ಮೊದಲ ಹಂತವಾಗಿ ದೊಡ್ಡಬಳ್ಳಾಪುರ(Doddaballapur) ತಾಲೂಕಿನಲ್ಲಿ ಬೃಹತ್ ವಸತಿ ಸಮುಚ್ಚಯ(Huge residential complex) ಉದ್ಘಾಟನೆ(Inauguration)ಗೆ ಸಜ್ಜಾಗುತ್ತಿದೆ
ಜನರ ಹಲವು ವರ್ಷದ ಕನಸು ನನಸು: ಶಿವರಾಮ ಹೆಬ್ಬಾರ್
ವಸತಿ ಸಮುಚ್ಚಯಗಳಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗಕ್ಕೆ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಕರ್ಯಕ್ಕೂ ಆದ್ಯತೆ ನೀಡಲಾಗಿದೆ. ಈ ವಸತಿ ಸಮುಚ್ಚಯಗಳನ್ನು ಇಲಾಖೆ(Labour depertment)ಯೇ ನಿರ್ವಹಿಸಲಿದೆ. ದೊಡ್ಡಬಳ್ಳಾಪುರ ತಾಲೂಕಿನ ಕೈಗಾರಿಕಾ ವಲಯದ ಬದನಹಳ್ಳಿಯಲ್ಲಿ 19 ಕೋಟಿ ರು. ವೆಚ್ಚದಲ್ಲಿ ಬೃಹತ್ ಏಕ ವಸತಿ ಮತ್ತು ಕುಟುಂಬ ವಸತಿಯ ಸಮುಚ್ಚಯ ನಿರ್ಮಾಣವಾಗಿದ್ದು ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ.
ಮಠ-ಮಂದಿರ ವಿವಾದಕ್ಕೆ ಕಾಂಗ್ರೆಸ್ ಕಾರಣ- ಸಚಿವ ಶಿವರಾಮ ಹೆಬ್ಬಾರ್
ವಸತಿ ವ್ಯವಸ್ಥೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಏಕ ವ್ಯಕ್ತಿ ಸಮುಚ್ಚಯದಲ್ಲಿ ಸಾಮೂಹಿಕ ವಸತಿಗೆ ಅವಕಾಶವಿದೆ. ಏಕ ಹಾಸಿಗೆ ವ್ಯವಸ್ಥೆಯಡಿ 96 ಕಾರ್ಮಿಕರು ಮತ್ತು ದ್ವಿ ಹಾಸಿಗೆ ವ್ಯವಸ್ಥೆಯಡಿ 196 ಕಾರ್ಮಿಕರಿಗೆ ವಸತಿ ಅನುಕೂಲ ಲಭಿಸಲಿದೆ. ಕುಟುಂಬದೊಂದಿಗೆ ಉಳಿದುಕೊಳ್ಳ ಬಯಸುವ ಕಾರ್ಮಿಕರಿಗೆ ಪ್ರತ್ಯೇಕ ಮನೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದ್ದು, ಒಂದು ಕುಟುಂಬದಲ್ಲಿ ನಾಲ್ಕು ಮಂದಿ ಎಂಬಂತೆ 48 ಕಾರ್ಮಿಕ ಕುಟುಂಬಗಳಿಗೆ ಮೊದಲ ಹಂತದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಇಲಾಖೆ ಮುಂದಡಿ ಇರಿಸಿದೆ. ರಾಜ್ಯದ ಹಲವೆಡೆ ಇರುವ ಕೈಗಾರಿಕಾ ಪ್ರದೇಶಗಳಲ್ಲೂ ಈ ಯೋಜನೆ ವಿಸ್ತರಣೆಯಾಗಲಿದೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.