Kolar : ನೀರಾವರಿ ವಿಚಾರದಲ್ಲಿ 30 ವರ್ಷಗಳಿಂದ ಜಿಲ್ಲೆಗೆ ಮೋಸ
ಸತತ 30 ವರ್ಷಗಳಿಂದ ಶಾಶ್ವತ ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ಜಿಲ್ಲೆಯಲ್ಲಿ ಹೋರಾಟ ನಡೆಸುತ್ತಿದ್ದರೂ ಯಾವ ಪಕ್ಷ ಕೂಡ ಇಲ್ಲಿವರೆಗೆ ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗಳ ಅನುಷ್ಟಾನದ ಬಗ್ಗೆ ಕಾಳಜಿ, ಬದ್ದತೆ ಹಾಗೂ ಪ್ರಾಮಾಣಿಕತೆ ತೋರಿಲ್ಲ ಎಂದು ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆರ್.ಆಂಜನೇಯರೆಡ್ಡಿ ಟೀಕಿಸಿದರು.
ಚಿಕ್ಕಬಳ್ಳಾಪುರ : ಸತತ 30 ವರ್ಷಗಳಿಂದ ಶಾಶ್ವತ ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ಜಿಲ್ಲೆಯಲ್ಲಿ ಹೋರಾಟ ನಡೆಸುತ್ತಿದ್ದರೂ ಯಾವ ಪಕ್ಷ ಕೂಡ ಇಲ್ಲಿವರೆಗೆ ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗಳ ಅನುಷ್ಟಾನದ ಬಗ್ಗೆ ಕಾಳಜಿ, ಬದ್ದತೆ ಹಾಗೂ ಪ್ರಾಮಾಣಿಕತೆ ತೋರಿಲ್ಲ ಎಂದು ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆರ್.ಆಂಜನೇಯರೆಡ್ಡಿ ಟೀಕಿಸಿದರು.
ಬಯಲು ಸೀಮೆಯ ಬರಪೀಡಿತ ಜಿಲ್ಲೆಗಳ ನೀರಿನ ಹಕ್ಕಿಗಾಗಿ ಬೆಂಗಳೂರು ಗ್ರಾಮಾಂತರ, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿರುವ 10 ದಿನಗಳ ನೀರಿನ ಹಕ್ಕಿಗಾಗಿ ಹಮ್ಮಿಕೊಂಡಿರುವ ಜಲ ಜಾಗೃತಿ ಪಾದಯಾತ್ರೆ ಮಂಗಳವಾರ ಚಿಕ್ಕಬಳ್ಳಾಪುರ ತಾಲೂಕಿಗೆ ಪ್ರವೇಶಿಸಿದ ವೇಳೆ ಮಾತನಾಡಿದರು.
ಜಿಲ್ಲೆಯಲ್ಲಿ ಕ್ಷೀಣಿಸುತ್ತಿರುವ ಅಂತರ್ಜಲ
ಜಿಲ್ಲೆಗೆ ಹರಿಯುತ್ತಿರುವ ಬೆಂಗಳೂರಿನ ಅಪಾಯಕಾರಿ ತ್ಯಾಜ್ಯ ನೀರಿನ ಯೋಜನೆಯನ್ನೆ ಕೆಲ ಚುನಾಯಿತ ಜನಪ್ರತಿನಿಧಿಗಳು ತಮ್ಮದು ದೊಡ್ಡ ಸಾಧನೆಯೆಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆ. ಜಿಲ್ಲೆಗೆ ಸತತ 30 ವರ್ಷಗಳಿಂದ ನೀರಾವರಿ ವಿಚಾರದಲ್ಲಿ ಮೋಸ ಆಗುತ್ತಿದೆ. ಜಿಲ್ಲೆಯಲ್ಲಿ ಅಂತರ್ಜಲ ಸಾಕಷ್ಟುಕ್ಷೀಣಿಸಿದೆ. ಕುಡಿಯುವ ನೀರಿನಲ್ಲಿ ಅಪಾಯಕಾರಿ ಯುರೇನಿಯಂ ಪತ್ತೆ ಆಗಿರುವ ಬಗ್ಗೆ ಜಲ ವಿಜ್ಞಾನಿಗಳಯ ಕಳವಳ ವ್ಯಕ್ತಪಡಿಸಿದರೂ ಆಳುವ ಸರ್ಕಾರಗಳಿಗೆ ಈ ಬಗ್ಗೆ ಕಿಂಚಿತ್ತೂ ಆತಂಕ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಸಿ, ಎಚ್‌ಎನ್ ವ್ಯಾಲಿ ಯೋಜನೆಗಳ ಮೂಲಕ ಸರ್ಕಾರಗಳು ಜನರ ಜೀವದೊಂದಿಗೆ ಚೆಲ್ಲಾಟವಾಡು ಕೆಲಸ ಮಾಡುತ್ತಿದ್ದು ಕೂಡಲೇ 3ನೇ ಹಂತದ ಶುದ್ದೀಕರಣ ಮಾಡಬೇಕು. ಜಿಲ್ಲೆಯ ನೀರಾವರಿ ಹಕ್ಕಿನ ಬಗ್ಗೆ ಯಾವೊಬ್ಬ ಜನಪ್ರತಿನಿಧಿ ಕೂಡ ವಿಧಾನಸಭೆಯಲ್ಲಿ ಮಾತನಾಡಿಲ್ಲ. ಹನಿ ನೀರು ಹರಿಯದ ಎತ್ತಿನಹೊಳೆ ಬಗ್ಗೆ ಇರುವ ಕಾಳಜಿ ಈ ಭಾಗಕ್ಕೆ ಶಾಶ್ವತವಾಗಿ ನದಿ ನೀರು ಏಕೆ ಹರಿಸಬಾರದು. ಬಯಲು ಸೀಮೆ ಜಿಲ್ಲೆಗಳು ಕುಡಿಯುವ ನೀರಿಗೆ ಮಾತ್ರವಲ್ಲದೇ ಕೃಷಿಗೂ ಯೋಗ್ಯವಾದ ನೀರಾವರಿ ಇಲ್ಲದೇ ರೈತರು ಸಂಕಷ್ಟದಲ್ಲಿದ್ದಾರೆ. ಜಿಲ್ಲೆಗೆ ಕೃಷ್ಣ ನದಿ ನೀರು ತರಬೇಕೆಂದರು.
ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿ
ಎರಡು ವರ್ಷದಿಂದ ಅಲ್ಪಸ್ವಲ್ಪ ಮಳೆ ಬಿದ್ದಿರಬಹುದು. ಆದರೆ ಮಳೆ ಪ್ರತಿ ವರ್ಷ ಹೀಗೆ ಬೀಳುವುದಿಲ್ಲ. ಸರ್ಕಾರಗಳು, ರಾಜಕೀಯ ಪಕ್ಷಗಳು ಎಚ್ಚೆತ್ತಿಕೊಂಡು ಬಯಲು ಸೀಮೆ ಜಿಲ್ಲೆಗಳಿಗೆ ಸಮಗ್ರವಾದ ಶಾಶ್ವತವಾಗಿ ನದಿ ನೀರು ಹರಿಸುವ ಕೆಲಸ ಮಾಡಬೇಕು, ಅಲ್ಲದೇ ಈ ವಿಚಾರವನ್ನು ತಮ್ಮ ರಾಜಕೀಯ ಪಕ್ಷಗಳ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಕಟಿಸಬೇಕೆಂದು ಆಂಜನೇಯರೆಡ್ಡಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿಯ ಮಳ್ಳೂರು ಹರೀಶ್, ರೈತ ಸಂಘದ ರಾಜ್ಯಾಧ್ಯಕ್ಷ ಬಾಗೇಪಲ್ಲಿ ನಾರಾಯಣಸ್ವಾಮಿ, ಸುಷ್ಮಾ ಶ್ರೀನಿವಾಸ್, ಆನೂರು ದೇವರಾಜ್, ಆನಂದಪ್ಪ, ಉಷಾರೆಡ್ಡಿ, ಭಕ್ತರಹಳ್ಳಿ ಪ್ರತೀಶ್, ಪ್ರಭಾನಾರಾಯಣಗೌಡ, ಕರವೇ ರವಿಕುಮಾರ್, ಉಷಾಕಿರಣ್ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳು, ಯುವಶಕ್ತಿ ಕಾರ್ಯಕರ್ತರು ಮತ್ತಿತರರು ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ
ಮಾ.3 ರಂದು ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ಉದ್ಘಾಟನೆಗೊಂಡ ನೀರಿನ ಹಕ್ಕಿಗಾಗಿ ಜಲ ಜಾಗೃತಿ ಪಾದಯಾತ್ರೆ ಮಂಚೇನಹಳ್ಳಿ, ದೊಡ್ಡಬಳ್ಳಾಪುರ, ದೇವನಹಳ್ಳಿ ಮೂಲಕ ಮಂಗಳವಾರ ಚಿಕ್ಕಬಳ್ಳಾಪುರ ಪ್ರವೇಶಿಸಿ ನಗರ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕೆಲಕಾಲ ವೇಳೆ ಪ್ರತಿಭಟನೆ ನಡೆಸಿ ಪಾದಯಾತ್ರೆ ಶಿಡ್ಲಘಟ್ಟತಾಲೂಕಿನ ಕಡೆ ಪ್ರಯಾಣ ಬೆಳಸಿತು. ಈ ಸಂದರ್ಭದಲ್ಲಿ ವಿಕಲಚೇತನರು, ರೈತಪರ ಸಂಘಟನೆಗಳು ಮುಖಂಡರು, ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.
ರುವ ಪಾದಯಾತ್ರೆ ಮಂಗಳವಾರ ಚಿಕ್ಕಬಳ್ಳಾಪುರ ನಗರ ಪ್ರವೇಶಿಸಿ ಜಿಲ್ಲಾಡಳಿತ ಭವನದ ಎದುರು ಪ್ರದರ್ಶನ ನಡೆಸಿದರು.