ಕಮಲ್ ಹಾಸನ್, ಸಿದ್ಧರಾಮಯ್ಯನಂಥವರಿಗೆ ಧನ್ಯವಾದ ಹೇಳಬೇಕು : ಬಿ.ಎಲ್ ಸಂತೋಷ್

ಸಿದ್ದರಾಮಯ್ಯ,  ಸಾವರ್ಕರ್ ವಿರುದ್ಧ ಹೇಳಿಕೆ ನೀಡಿದ್ದರಿಂದ, ಗಣಪತಿ ಕೂರಿಸುವ ಪೆಂಡಾಲ್ ನಲ್ಲಿ ನಮ್ಮ ಕಾರ್ಯಕರ್ತರು ಸಾವರ್ಕರ್ ಪೋಟೋ ಇಟ್ಟು ಪೂಜಿಸಿದರು, ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ ತೊಡಸಿ ತಾಯಂದಿರು ಸಂಭ್ರಮಿಸಿದರು. ಈಗ ಕಮಲ್ ಹಾಸನ್ ರಾಜರಾಜೇಂದ್ರ ಚೋಳ ಹಿಂದು ಆಗಿರಲಿಲ್ಲ ಎಂದು ಹೇಳಿಕೆ ನೀಡಿದ್ದರಿಂದ ಹೆಚ್ಚು ತಿಳಿದುಕೊಳ್ಳುತ್ತಿದ್ದಾರೆ. ಹೀಗಾಗಿ ಇಂಥವರಿಗೆ ಧನ್ಯವಾದ ಹೇಳೋಣ ಎಂದರು.

Thanks to Kamal Haasan and Siddaramaiah says bl santosh at gadag

ಗದಗ (ಅ.10) : ರಾಜರಾಜೇಂದ್ರ ಚೋಳ ಹಿಂದೂ ಅಲ್ಲಎಂದು ಕಮಲ್ ಹಾಸನ್ ಹೇಳದಿದ್ದಿದ್ರೆ ಬಹುಶಃ ಉತ್ತರ ಭಾರತದಲ್ಲಿ ರಾಜರಾಜೇಂದ್ರ ಚೋಳ ಯಾರು ಅಂತಾ ಗೊತ್ತಾಗುತ್ತಿರಲಿಲ್ಲ. ಅವರ ಬಗ್ಗೆ ಓದುತ್ತಿರಲಿಲ್ಲ. ಸಿದ್ದರಾಮಯ್ಯ‌, ಕಮಲ್ ಹಾಸನ್ ಅವರಂಥವರಿಂದ ದೇಶಕ್ಕೆ ಆಗ್ತಿರೋ ದೊಡ್ಡ ಲಾಭ ಇದೇ. ಹೀಗಾಗಿ ಅವರಿಗೆ ನಾವು ಧನ್ಯವಾದ ಹೇಳಬೇಕು ಎಂದು ಬಿ.ಎಲ್.ಸಂತೋಷ್ ಹೇಳಿದರು.

English ಬಿಡಿ ಹಿಂದಿ, ಸ್ಥಳೀಯ ಭಾಷೆಯ ಮಾಧ್ಯಮಗಳಿಗೆ ಆದ್ಯತೆ ಕೊಡಿ: Amit Shah ಸಮಿತಿ ಶಿಫಾರಸು...

ನಗರದಲ್ಲಿ ಕಸಾಪ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 'ಪ್ರಜ್ಞಾ ಪ್ರವಾಹ ಜಯೋಸ್ತುತೆ, ಸಾವಿರದ ಸಾವರ್ಕರ್' ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ದರಾಮಯ್ಯ(Siddaramaiah)ನವರು ಸಾವರ್ಕರ್(Savarkar) ವಿರುದ್ಧ ಹೇಳಿಕೆ ನೀಡಿದ್ದರಿಂದ, ಗಣಪತಿ ಕೂರಿಸುವ ಪೆಂಡಾಲ್ ನಲ್ಲಿ ನಮ್ಮ ಕಾರ್ಯಕರ್ತರು ಸಾವರ್ಕರ್ ಪೋಟೋ ಇಟ್ಟು ಪೂಜಿಸಿದರು, ಫ್ಯಾನ್ಸಿ ಡ್ರೆಸ್ ಗಳಲ್ಲಿ ತಾಯಂದಿರು ಮಕ್ಕಳಿಗೆ ಸಾವರ್ಕರ್ ವೇಷ ಹಾಕಿಸಿದರು. ಈಗ ಕಮಲ್ ಹಾಸನ್ ರಾಜರಾಜೇಂದ್ರ ಚೋಳ ಹಿಂದು ಆಗಿರಲಿಲ್ಲ ಎಂದು ಹೇಳಿಕೆ ನೀಡಿದ್ದರಿಂದ ದೇಶದ ಜನ ರಾಜರಾಜೇಂದ್ರ ಚೋಳರ ಬಗ್ಗೆ ಓದುತ್ತಿದ್ದಾರೆ. ಹೀಗಾಗಿ  ಕಮಲ್ ಹಾಸನ್ ಹಾಗೂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳುತ್ತೇವೆ ಎಂದು ವ್ಯಂಗ್ಯ ಮಾಡಿದರು.

ನೀವು ಹೀಗೆ ಇಲ್ಲಸಲ್ಲದ ಹೇಳಿಕೆ ನೀಡ್ತಾ ಪಾಪಿಗಳಾಗುತ್ತಾ ಹೋಗಿ, ನಮ್ಮ ಸಮಾಜ ಅನೇಕ ನಾಯಕರ ಬಗ್ಗೆ ತಿಳಿದುಕೊಳ್ಳುತ್ತದೆ. ಸಾವರ್ಕರ್ ತರಹ ಬದುಕೋದಕ್ಕೆ ವಿರೋಧಿಗಳಿಗೆ ಆಗೋಲ್ಲ ಅನ್ನೊ ಕಾರಣಕ್ಕೆ ವಿರೋಧ ಮಾಡತ್ತಾರೆ.

ಬೃಹದೀಶ್ವರ ದೇವಸ್ಥಾನ(Brihadeeswara Temple) ನಿರ್ಮಾಣ ಮಾಡಿದ್ದ ರಾಜ ರಾಜೇಂದ್ರ ಚೋಳ(Raj Rajendra Chola) ಬಗ್ಗೆ ತಮಿಳುನಾಡಿ(Tamilnadu)ನಲ್ಲಿ ಮೂರ್ಖರು ಚರ್ಚೆ ಹುಟ್ಟುಹಾಕಿದ್ದಾರೆ. "ರಾಜ ರಾಜೇಂದ್ರ ಚೋಳ ಹಿಂದೂ ಅಲ್ಲ ಆಗ ಹಿಂದೂಗಳೇ ಇರಲಿಲ್ಲ' ಅಂತಾ ಹೇಳಿಕೆ ನೀಡಿದ್ದಾರೆ. ರಾಜ ರಾಜೇಂದ್ರ ಚೋಳ ಕಾಲದಲ್ಲಿ ತಮಿಳುನಾಡು ಕೂಡಾ ಇರಲಿಲ್ಲ. ಚೋಳ, ಪಾಂಡ್ಯ ಹಾಗೂ ಪಲ್ಲವರ ಸಾಮ್ರಾಜ್ಯ ಇತ್ತು. ರಾಜ ರಾಜೇಂದ್ರ ಚೋಳ ಹೇಗೆ ದ್ರಾವಿಡರು ಆಗುತ್ತಾರೆ? ರಾಜ ರಾಜೇಂದ್ರ ಚೋಳ ದ್ರಾವಿಡ ಚಳವಳಿ ಅಂತಾರೆ. ಬೃಹದೀಶ್ವರ ದೇವಾಲಯ ಕಟ್ಟಿದ ರಾಜ್ಯ ಅದು. ವೇದಗಳ ಸಂಸ್ಕೃತಿ, ಸಂಗಮ ಕೃತಿಗಳ ಬಗ್ಗೆ ಬರೆಸಿದ್ದಾನೆ. ಹೀಗಿದ್ರೂ ಆ ರಾಜ್ಯದಲ್ಲಿ ರಾಜ ರಾಜೇಂದ್ರ ಚೋಳ ಹಿಂದೂ ಅಲ್ಲ ಅಂತಾರೆ. ಮೂರ್ಖತನಕ್ಕೆ ಏನು ಹೇಳಬೇಕು?

ಮತ್ತೊಂದು ಕಡೆ ಸಾವರ್ಕರ್(Savarkar) ಕ್ಷಮಾಪಣೆ ಕೇಳಿದ್ರು ಎಂಬ ವಿಚಾರವನ್ನಿಟ್ಟುಕೊಂಡು ರಾಜ್ಯದಲ್ಲಿ  ಚರ್ಚೆಯಾಗ್ತಿದೆ. ಇವರು ಮುಖ್ಯಮಂತ್ರಿ ಇದ್ದಾಗ ಬಂದು ಕ್ಷಮಾಪಣೆ ಕೇಳಿದ್ರು ಅನ್ನೋ ಹಾಗೇ ಹೇಳ್ತಾರೆ. ಏಕವಚನದ ಬ್ರಹ್ಮ, ಬಂಡತನದ ಸರದಾರ, ದೇಶ ಭಕ್ತರ ಬಗ್ಗೆ ನಯಾಪೈಸೆ ಗೊತ್ತಿಲ್ಲದ ವ್ಯಕ್ತಿ ಇವತ್ತು ರಾಜ್ಯದಲ್ಲಿ ಸಾವರ್ಕರ್ ಬಗ್ಗೆ ಮಾತಾಡುತ್ತಾರೆ ಅಂತಾ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಸಮಾಜವನ್ನು ಹೊಂದಾಣಿಕೆಯಿಂದ ಮುನ್ನಡೆಸಲು ಸಾಧ್ಯವಿಲ್ಲ. ಪ್ರಖರತೆ, ಸ್ಪಷ್ಟತೆ ಇರುವ ಆಡಳಿತ ವ್ಯವಸ್ಥೆ ಬೇಕು ಎಂದು ಸಾವರ್ಕರ್‌ಗೆ ಗೊತ್ತಿತ್ತು. ಸ್ವಾತಂತ್ರ್ಯ ಬಳಿಕ ಅವರಿಗೆ ಕೊಡಬೇಕಾದ ಗೌರವ ಅಂದಿನ ರಾಜಕಾರಣಿಗಳು ಕೊಡಲಿಲ್ಲ. ಈ ದೇಶದಲ್ಲಿ ಸಾಂಸ್ಕೃತಿಕ ಉಗ್ರವಾದ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಮೂಲ ಸಂಸ್ಕೃತಿ ಮರೆಮಾಚಲಾಗುತ್ತಿದೆ. ಆದರೆ ಈ ದೇಶದ ನೆಲ ಮೂಲವನ್ನು ಎಂದು ಬಿಟ್ಟು ಕೊಟ್ಟಿಲ್ಲ. ಅದಕ್ಕೆ ಉದಾಹರಣೆ ಇಂದು ಸಾವರ್ಕರ್ ಅವರಿಗೆ ಸಿಗುತ್ತಿರುವ ಗೌರವ ಎಂದು ಹೇಳಿದರು

ಕಾವ್ಯದ ರೂಪದಲ್ಲಿ ರಾಮಾಯಣ(Ramayana) ಕೊಟ್ಟಿದ್ದಕ್ಕೆ ವಾಲ್ಮೀಕಿ(Valmeeki) ಅವರನ್ನು 'ಆದಿ ಕವಿ' ಎಂದು ಕರೆಯುತ್ತೇವೆ. ನ್ಯಾಯ, ಅನ್ಯಾಯ, ಧರ್ಮ ಹಾಗೂ ಅಧರ್ಮದ‌ ಕುರಿತು ರಾಮಾಯಣದಲ್ಲಿ ಉಲ್ಲೇಖವಾಗಿದೆ. ಸಾವಿರಾರು ವರ್ಷಗಳ ನಂತರವೂ ರಾಮಾಯಣ ಪ್ರಸ್ತುತವಾಗಿವೆ. ಅದರ ಮೌಲ್ಯಗಳು ಎಂದಿಗೂ ಸವಕಲು ಆಗುವುದಿಲ್ಲ. ಹಾಗೆಯೇ ವೀರ ಸಾವರ್ಕರ್ ಬರೆದ ಜಯೋಸ್ತುತೆ ಹಾಡು, ಬರಹಗಳು ಕೇಳುತ್ತಿದ್ದಂತೆ ಮನದಲ್ಲಿ ದೇಶಭಕ್ತಿ ತನ್ನಿಂತಾನೆ ಮೂಡುತ್ತದೆ ಎಂದು ಹೇಳಿದರು.

ಹಿಂದೂ ಧರ್ಮ ಇರಲೇ ಇಲ್ಲ: ವಿವಾದ ಸೃಷ್ಟಿಸಿದ Kamal Haasan ಹೇಳಿಕೆ

ಸಾವು ಖಚಿತ ಎಂದು ಗೊತ್ತಿದ್ದರೂ ಸಾವರ್ಕರ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಒಂದು ಹೆಜ್ಜೆ ಮುಂದಿಟ್ಟು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅಂತಹವರ ಬಗ್ಗೆ ಹಲವರು ಟೀಕೆ ಮಾಡುತ್ತಾರೆ. ಸ್ವಾತಂತ್ರ್ಯ ನಂತರ ಅನೇಕ ರಾಜಕಾರಣಿಗಳ ಕುಟುಂಬಸ್ಥರು ಎಸ್‌ಪಿಜಿ ಭದ್ರತೆಯೊಂದಿಗೆ ಓಡಾಡಿದ್ದಾರೆ. ಆದರೆ, ಸಾವರ್ಕರ್ ಅವರಿಗೆ ವಾಸಸಿಲು ಮನೆ ಕೊಡಲಿಲ್ಲ. ಅವರ ಹಲವು ಪುಸ್ತಕಗಳಿಗೆ ಪ್ರಕಟಣೆ ನಂತರ ನಿಷೇಧ ಹೇರಲಾಯಿತು. ಆದರೆ ಪ್ರಕಟಣೆಗೂ ಮೊದಲೇ ಸಾವರ್ಕರ್ ಪುಸ್ತಕ ನಿಷೇಧ ಮಾಡಲಾಗಿತ್ತು. ಬ್ರಿಟಿಷರಿಗೆ ಇವರ ಬಗ್ಗೆ ಭಯ ಇದ್ದಿದ್ದರಿಂದ ಹೀಗೆ ಮಾಡಿದರು ಎಂದು ಹೇಳಿದರು.

Latest Videos
Follow Us:
Download App:
  • android
  • ios