Asianet Suvarna News Asianet Suvarna News

ಪ್ರತಿಷ್ಠಿತ ಜವಳಿ ಅಂಗಡಿಗಳು ಸಂಪೂರ್ಣ ಬಂದ್‌

ದೇಶದ ವಿವಿಧ  ಪ್ರದೇಶಗಳಿಂದ ದಾವಣಗೆರೆ ಜವಳಿಗಾಗಿ ಆಗಮಿಸುವವ ಗ್ರಾಹಕರು ಬರಿಗೈಯಲ್ಲಿ ವಾಪಸ್ ತೆರಳುವಂತಾಯ್ತು. ಕಾರಣ ಎಲ್ಲಾ ಜವಳಿ ಅಂಗಡಿಗಳನ್ನು ಕೊರೋನಾ ಹಿನ್ನೆಲೆ ಬಂದ್ ಮಾಡಲಾಗಿದೆ. 

Textile Shops Shut Down In Davanagere Due To Corona Effect
Author
Bengaluru, First Published Mar 17, 2020, 11:40 AM IST

ದಾವಣಗೆರೆ [ಮಾ.17]: ನಿತ್ಯವೂ ಸಾವಿರಾರು ಜನರು ರಾಜ್ಯ, ಪರರಾಜ್ಯಗಳಿಂದ ಮದುವೆ, ಗೃಹ ಪ್ರವೇಶ ಇತರೆ ಶುಭ ಕಾರ್ಯಗಳಿಗೆ ಜವಳಿ ಖರೀದಿಗೆ ಬರುತ್ತಿದ್ದ ಇಲ್ಲಿನ ಪ್ರತಿಷ್ಟಿತ ಬಟ್ಟೆಅಂಗಡಿಗಳು, ದೊಡ್ಡ ಕಂಪನಿಗಳ ಬಟ್ಟೆಅಂಗಡಿಗಳನ್ನು ಜಿಲ್ಲಾಡಳಿತ ಬಂದ್‌ ಮಾಡಿಸಿದೆ.

ಸಾವಿರಾರು ಜನ ಗ್ರಾಹಕರು ಬಂದು ಹೋಗುವಂತಹ ರಾಜ್ಯ, ರಾಷ್ಟ್ರದ ಪ್ರಸಿದ್ಧ ಜವಳಿ ಅಂಗಡಿಗಳ ಊರಾದ ದಾವಣಗೆರೆ ನಗರದಲ್ಲಿ ಹೀಗೆ ಬಂದವರಿಂದಲೂ ಕೊರೋನಾ ಸೋಂಕು ಹರಡುವ ಸಾಧ್ಯತೆ ಇದೆಯಲ್ಲವೇ ಎಂಬುದಾಗಿ ಸೋಷಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟುಪ್ರಶ್ನೆಗಳು ಹರಿದಾಡ ತೊಡಗಿದ್ದವು.

ಅಲ್ಲದೇ, ಆಡಳಿತ ಯಂತ್ರಕ್ಕೆ ಕೆಲವರು ನೇರವಾಗಿ ಕರೆ ಮಾಡಿ, ದಾವಣಗೆರೆಯಷ್ಟೇ ಅಲ್ಲ, ರಾಜ್ಯದ ವಿವಿಧೆಡೆಯಿಂದ ಜವಳಿ ಖರೀದಿಗೆ ಜನರು ಇಲ್ಲಿಗೆ ಬರುತ್ತಾರೆ. ಅದರಲ್ಲೂ ಕೊರೋನಾ ವೈರಸ್‌ಗೆ ಬಲಿಯಾದ ಕಲಬುರಗಿ ಹಾಗೂ ಅದರ ಸುತ್ತಮುತ್ತಲ ಜಿಲ್ಲೆಯ ಜನರೂ ಬರುತ್ತಾರೆ. ಇನ್ನಾದರೂ ಮುಂಜಾಗ್ರತೆ ವಹಿಸಿ ಎಂಬ ಕೂಗು ಕೇಳಿ ಬಂದಿತ್ತು.

ಕಡೆಗೂ ಎಚ್ಚೆತ್ತ ಅಧಿಕಾರಿಗಳು ಸೋಮವಾರ ಮಧ್ಯಾಹ್ನ ಇಲ್ಲಿನ ಬಿಎಸ್‌ ಚನ್ನಬಸಪ್ಪ ಅಂಡ್‌ ಸನ್ಸ್‌ನ ಸಮೂಹದ ಅಂಗಡಿಗಳು, ಅಂಬರಕರ್‌ ಪಂಪಣ್ಣ, ಗೌಡರ ಜಯದೇವಪ್ಪ ಸಿಲ್‌್ಕ ಅಂಡ್‌ ಸ್ಯಾರೀಸ್‌ ಸೇರಿದಂತೆ ಬಹುತೇಕ ದೊಡ್ಡ ದೊಡ್ಡ ಜವಳಿ ಅಂಗಡಿಗಳನ್ನು ತಾವೇ ನಿಂತು ಬಂದ್‌ ಮಾಡಿಸಿದರು. ಒಳಗಿದ್ದ ಗ್ರಾಹಕರು ಜವಳಿ ಖರೀದಿಸಿಕೊಂಡು ಹೋಗಲಷ್ಟೇ ಅನುವು ಮಾಡಿಕೊಡಲಾಗಿತ್ತು.

ಸೋಂಕು ಶಂಕಿತರ ಎಡಗೈಗೆ ಸೀಲ್‌!...

ಜವಳಿ ಅಂಗಡಿಗಳು ಬಂದ್‌ ಮಾಡಿಸಿರುವ ವಿಚಾರ ತಿಳಿಯದ ಗ್ರಾಹಕರು, ಪರಸ್ಥಳದಿಂದ ಬಂದವರು ಅಂಗಡಿಗಳ ಮುಂದೆ ಸಿಬ್ಬಂದಿ ಬಳಿ ಸ್ವಲ್ಪವೇ ಹೊತ್ತು, ತಡ ಮಾಡುವುದಿಲ್ಲವೆಂದು ಪರಿಪರಿಯಾಗಿ ಕೇಳುತ್ತಿದ್ದ ದೃಶ್ಯವೂ ಸಾಮಾನ್ಯವಾಗಿತ್ತು. ಆದರೆ, ಕೆಲವು ಅಂಗಡಿಗಳಂತೂ ಯಾರೋ ಚಾಪೆ ಕೆಳಗೆ ನುಸುಳಿದರೆ, ಮತ್ತೊಬ್ಬ ರಂಗೋಲಿ ಕೆಳಗೆ ನುಸುಳಿದ್ದ ಎಂಬಂತೆ ಮತ್ತೊಂದು ಮಾರ್ಗದ ಮೂಲಕ ವ್ಯಾಪಾರ ಮುಂದುವರಿಸಿದ್ದವು ಎಂಬ ಆರೋಪಿಗಳೂ ಸೋಷಿಯಲ್‌ ಮೀಡಿಯಾಗಳಲ್ಲಿ ಕೇಳಿ ಬಂದವು.

ದಾವಣಗೆರೆಯ ಪ್ರತಿಷ್ಟಿತ ಜವಳಿ ಅಂಗಡಿಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಪರಸ್ಥಳದಿಂದ ಗ್ರಾಹಕರು ಬರುತ್ತಾರೆ. ಹೀಗೆ ಬಂದವರಿಂದಲೂ ಆರೋಗ್ಯವಂತವಾಗಿರುವ ನಮ್ಮ ಊರು, ಜಿಲ್ಲೆಗೆ ಕೊರೋನಾ ಸೋಂಕು ತಗುಲೀತು ಎಂಬುದಾಗಿ ಸಾಮಾಜಿಕ ಹೋರಾಟಗಾರ ದೇವರಮನಿ ಗಿರೀಶ, ನೇಕಾರ ಸಮಾಜದ ಯುವ ಮುಖಂಡ ಡಿ.ಬಸವರಾಜ ಗುಬ್ಬಿ, ಸಾಮಾಜಿಕ ಕಾರ್ಯಕರ್ತ ಪ್ರಸನ್ನ ಬೆಳಕೇರಿ ಸೇರಿದಂತೆ ಅನೇಕರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು.

Follow Us:
Download App:
  • android
  • ios