ಚಾಮರಾಜನಗರ: ಕುಂತೂರಿನಲ್ಲಿ ಮತ್ತೆ ಚಿರತೆ ಕಾಟ, ಭಯಭೀತರಾದ ಗ್ರಾಮಸ್ಥರು

ಚಾಮರಾಜನಗರದಲ್ಲಿ ಚಿರತೆ ದಾಳಿ ಮುಂದುವರಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಂತೂರು ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಮೂರು ಕುರಿಗಳನ್ನು ಹೊತ್ತೊಯ್ದಿದೆ. ಕುರಿಗಳನ್ನು ಹೊತ್ತೊಯ್ದ  ಬಳಿಕ  ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಹೊಲಗದ್ದೆಗಳಿಗೆ ಹೋಗಲೂ ಕೂಡ ಭಯಪಡುವ ಪರಿಸ್ಥಿತಿ  ಉಂಟಾಗಿದೆ. ಗ್ರಾಮದ ಪ್ರಭುಲಿಂಗೇಶ್ವರಸ್ವಾಮಿ ಬೆಟ್ಟಕ್ಕೆ ತೆರಳಲು ಭಕ್ತರು ಹಿಂದೇಟು ಹಾಕುತ್ತಿದ್ದಾರೆ. 

Terrified Villagers For Again Leopard Visible in Chamarajanagara grg

ವರದಿ- ಪುಟ್ಟರಾಜು. ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ನ.21):  ಈಗ ರಾಜ್ಯದಲ್ಲಿ ಎಲ್ಲೆಲ್ಲೂ ಚಿರತೆಯದ್ದೇ ಸದ್ದು, ಕಾಡು ಬಿಟ್ಟು ನಾಡಿನಲ್ಲಿ ಓಡಾಡ್ತಿವೆ ಚಿರತೆ. ಶೇ. 50 ಕ್ಕಿಂತ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಂತೂ ಚಿರತೆ ಸೇರಿದಂತೆ ಕಾಡು ಪ್ರಾಣಿಗಳ ದಾಳಿ ಕಾಮನ್ ಆಗಿದೆ. ಆದ್ರೆ ಈ ಗ್ರಾಮದಲ್ಲಿ ಚಿರತೆ ದಾಳಿಯಿಂದ ದೇವಾಲಯಕ್ಕೆ ಹಾಗೂ ಹೊಲಗದ್ದೆಗಳಿಗೆ ಹೋಗಿ ಬರಲೂ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇದೆಲ್ಲಿ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ..

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಚಿರತೆ ದಾಳಿ ಮುಂದುವರಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಂತೂರು ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಮೂರು ಕುರಿಗಳನ್ನು ಹೊತ್ತೊಯ್ದಿದೆ. ಕುರಿಗಳನ್ನು ಹೊತ್ತೊಯ್ದ  ಬಳಿಕ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಹೊಲಗದ್ದೆಗಳಿಗೆ ಹೋಗಲೂ ಕೂಡ ಭಯಪಡುವ ಪರಿಸ್ಥಿತಿ  ಉಂಟಾಗಿದೆ. ಗ್ರಾಮದ ಪ್ರಭುಲಿಂಗೇಶ್ವರಸ್ವಾಮಿ ಬೆಟ್ಟಕ್ಕೆ ತೆರಳಲು ಭಕ್ತರು ಹಿಂದೇಟು ಹಾಕುತ್ತಿದ್ದಾರೆ. 

ಕಾವೇರಿ ಒಡಲು ಸೇರುತ್ತಿದೆ ಕಲುಷಿತ ನೀರು, ಕೊಳ್ಳೇಗಾಲ ನಗರಸಭೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಚಿರತೆ ಭಯದಿಂದ ಹೋಗುವ ಭಕ್ತಾಧಿಗಳ ಸಂಖ್ಯೆಯೂ ಕೂಡ ಇಳಿಮುಖವಾಗಿದೆ. ಬೆಟ್ಟದ ಕೆಳಭಾಗದಲ್ಲಿ ದೆವರಿಗೆ ಕೈ ಮುಗಿದು ಹೋಗ್ತಿದ್ದಾರೆ. ಕಳೆದ ಒಂದು ವಾರದಿಂದ ಮೂರು ಕುರಿಗಳನ್ನು ಬಲಿ ಪಡೆದಿದ್ದು,  ಇದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಚಿರತೆ ಕಾಣಿಸಿಕೊಂಡಿರುವ ಆಸುಪಾಸಿನಲ್ಲೆ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಇದ್ದು ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಲು ಬರುವ ಕಾರ್ಮಿಕರಿಗೂ ಕೂಡ ಭಯ ಶುರುವಾಗಿದೆ. 

ನಿರ್ಜನ ಪ್ರದೇಶವಾಗಿರುವುದರಿಂದ ಕಾರ್ಖಾನೆಗೆ ಒಬ್ಬೊಬ್ಬರು ಓಡಾಡುವುದು ಭಯದ ವಾತಾವರಣ ಸೃಷ್ಥಿಸಿದೆ. ಗ್ರಾಮಸ್ಥರು ತಮ್ಮ ಜಮೀನುಗಳಿಗೆ ಹಗಲು ವೇಳೆ ತೆರಳಲು ಕೂಡ ಹಿಂದೇಟಾಕುತ್ತಿದ್ದಾರೆ ಅದರಲ್ಲೂ ಕುರಿ ಮೇಯಿಸುವವರು ಹಾಗು ದನ ಮೇಯಿಸುವವರು ಈ ಭಾಗದಲ್ಲೆ ತೆರಳದಂತೆ ಜೊತೆಗೆ ದೇವಸ್ಥಾನದ ಆರ್ಚಕರು ಸಹ ಸಾಯಂಕಾಲ ಐದು ಗಂಟೆಯೂಳಗೆ ಪೂಜೆ ಮುಗಿಸಿ ಬಾಗಿಲು ಹಾಕುವಂತೆ ಅರಣ್ಯ ಇಲಾಖೆ ಸೂಚಿಸಿದೆ.

ಚಾಮರಾಜನಗರ: ರಾಜಧನ ವಂಚಿಸಿ ಕೇರಳಕ್ಕೆ ಕರಿ, ಬಿಳಿ ಕಲ್ಲು, ಅಧಿಕಾರಿಗಳು ಶಾಮೀಲು?

ಇನ್ನೂ ಕುಂತೂರು ಬೆಟ್ಟದಲ್ಲಿ ಕೆಲ ದಿನಗಳ ಹಿಂದಷ್ಟೇ ಮಾನವರ ಮೇಲೆ ದಾಳಿ ಮಾಡ್ತಿದ್ದ ಚಿರತೆಯನ್ನು ಸೆರೆಹಿಡಿಯಲಾಗಿತ್ತು. ಅದೇ ವೇಳೆ ಕುಂತೂರು ಸಮೀಪವೇ ಇರುವ  ಮಲ್ಲಿಗೆ ಹಳ್ಳಿಯಲ್ಲೂ ಸಹ ಶಾಲಾ ಬಾಲಕಿಯ ಮೇಲೆ ಚಿರತೆ  ದಾಳಿ ಮಾಡಿತ್ತು ಅದೃಷ್ಡವಶಾತ್ ಬಾಲಕಿ ಪ್ರಾಣಾಪಯದಿಂದ ಪಾರಾಗಿದ್ದಳು ಆ ಸಂಧರ್ಭದಲ್ಲಿ ಕುಂತೂರಿನಲ್ಲೆ ಚಿರತೆ ಸೆರೆ ಸಿಕ್ಕಿದೆ ಎಂದ ಅರಣ್ಯಾಧಿಕಾರಿಗಳು ಯಾರನ್ನೂ ಚಿರತೆ ಬೋನಿನ ಹತ್ತಿರವೂ ಬಿಡದೆ ಚಿರತೆಯನ್ನು ಹೊತ್ತೊಯ್ದಿದ್ರು,ಇದೀಗಾ ಮತ್ತೇ ಬೆಟ್ಟದಲ್ಲಿ ಚಿರತೆ ಪದೇ ಪದೇ ಕಾಣಿಸಿಕೊಂಡಿದೆ. ನಿದರ್ಶನ ಎನ್ನುವಂತೆ ಕುರಿಯನ್ನು ಕೂಡ ಹೊತ್ತಿಕೊಂಡು ಹೋಗಿದೆ. ರೈತರು ಕೂಡ ಜಮೀನುಗಳಿಗೆ ಒಬ್ಬರೇ ಹೋಗಲೂ ಸಾಧ್ಯವಾಗ್ತಿಲ್ಲ. ಮೂರು ಬೋನು ಅಳವಡಿಸಿ ಚಿರತೆ ಬೀಳುತ್ತೆ ಅಂತಾ ಕಾಯ್ತಿದ್ದಾರೆ.  ಆದ್ರೆ ಗ್ರಾಮಸ್ಥರಿಗೆ ಅನಾಹುತ ಸಂಭವಿಸುವ ಮುನ್ನವೇ ಚಿರತೆ ಸೆರೆಗೆ ಆಗ್ರಹಿಸಿದ್ದಾರೆ..

ಒಟ್ನಲ್ಲಿ ಕಳೆದ ಎರಡು ತಿಂಗಳ ಹಿಂದೆ ಚಿರತೆ ಸೆರೆ ಹಿಡಿದ ಬೆಟ್ಟದಲ್ಲೇ ಮೊತ್ತೊಂದು ಚಿರತೆ ಕಾಣಿಸಿಕೊಂಡಿದ್ದು ಕುಂತೂರು ಗ್ರಾಮದ ಜನರ ನಿದ್ದೆಗೆಡಿಸಿದೆ.ದೊಡ್ಡ ಬೋನುಗಳನ್ನು ಅಳವಡಿಸಿ ಚಿರತೆ ಸೆರೆಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಒತ್ತಾಯಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios