Asianet Suvarna News Asianet Suvarna News

ಕಾವೇರಿ ಒಡಲು ಸೇರುತ್ತಿದೆ ಕಲುಷಿತ ನೀರು, ಕೊಳ್ಳೇಗಾಲ ನಗರಸಭೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಜಲಚರಗಳಿಗಷ್ಟೇ ಅಲ್ಲದೇ ಜಾನುವಾರು, ಮನುಷ್ಯನ ಆರೋಗ್ಯಕ್ಕೂ ಹಾನಿ, ಮಂಡ್ಯ, ರಾಮನಗರ, ಬೆಂಗಳೂರಿನ ಜನರಿಗೂ ಈ ಕಲುಷಿತ ನೀರು ಕುಡಿಯುವ ಅನಿವಾರ್ಯತೆ. 

Contaminated Water Entering Kaveri River at Kollegal in Chamarajanagara grg
Author
First Published Nov 21, 2023, 1:00 AM IST

ವರದಿ-ಪುಟ್ಟರಾಜು. ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ನ.21):  ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ.ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ.ಇಂತಹ ಜೀವಜಲಕ್ಕೆ ಕಲುಷಿತ ನೀರು ಸೇರಿಸಿ ನದಿಯ ನೀರನ್ನು ಕಲ್ಮಶ ಮಾಡ್ತಿದ್ದಾರೆ.ಈ ನೀರನ್ನೂ ಕುಡಿಯೋದು ಹೇಗೆ? ಅನ್ನೋ ಪ್ರಶ್ನೆ ಸಾರ್ವಜನಿಕರದಾಗಿದೆ.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಕರುನಾಡಿನ ಜೀವನಾಡಿ ಎಂದ್ರೆ ಅದು ಕಾವೇರಿ. ಈ ಕಾವೇರಿ ನದಿಯನ್ನು ಕಲುಷಿತಗೊಳಿಸುವ ಕೆಲಸಕ್ಕೆ ಕೊಳ್ಳೇಗಾಲ ನಗರಸಭೆ ಮುಂದಾಗಿದೆ.  ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಇದ್ದು ನಗರದಲ್ಲಿ ಬರುವ ಎಲ್ಲ ಚರಂಡಿ ನೀರನ್ನು ನಗರಸಭೆಯ  ಹೊರಭಾಗದಲ್ಲಿರುವ ಸ್ಥಾಪಿಸಿರುವ ಒಳಚರಂಡಿ ಮತ್ತು ಕೊಳಚೆ ನೀರು ಶುದ್ದಿಕರಣ ಘಟಕದಲ್ಲಿ ನೀರು ಶುದ್ದೀಕರಣ ಮಾಡಲಾಗಿತ್ತಿದೆ. ಆದರೆ ಅಲ್ಲಿ ನೀರು ಸರಿಯಾಗಿ ಶುದ್ಧೀಕರಣವಾಗ್ತಿಲ್ಲ. ಈ ಅಶುದ್ದ ನೀರನ್ನೂ ಕುಪ್ಪಂ ಕಾಲುವೆ ಮುಖಾಂತರ ಹರಿಯಬಿಡಲಾಗ್ತಿದೆ. ಮೊದಲು ನಿಯಮಗಳ ಪ್ರಕಾರ ಈ ನೀರು ರೈತರ ಜಮೀನುಗಳಿಗಳಿಗಷ್ಟೇ ಬಿಡಲಾಗ್ತಾ ಇತ್ತು ಆದರೆ ರೈತರು ನೀರಿನ ಗುಣಮಟ್ಟ ಪರೀಕ್ಷೀಸಿ ಇದು ಆಶುದ್ದ, ಗಬ್ಬು ವಾಸನೆ ಕೊಳಚೆ  ನೀರು ಇದರಿಂದ ಬೆಳೆ ಬೆಳೆಯಲು ಸಾಧ್ಯವಿಲ್ಲ ಎಂದು ರೈತರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆ ಅಶುದ್ದ ಕೊಳಚೆ  ನೀರನ್ನು  ಪಕ್ಕದಲ್ಲೆ ಇದ್ದ ಕುಪ್ಪಂ ಕಾಲುವೆಯ ಮುಖಾಂತರ ದಾಸನಪುರ, ಹರಳೆ ಗ್ರಾಮದ ಮೂಲಕ ನೇರವಾಗಿ ಕಾವೇರಿ ನದಿಯ ಒಡಲಿಗೆ ಬಿಡಲಾಗಿದೆ. ಕಾವೇರಿ ಜನರ ಜೀವನಾಡಿಯಾಗಿದ್ದು, ಲಕ್ಷಾಂತರ ಜನ ಕುಡಿಯುವ  ಕಾವೇರಿ ನದಿಯ ನೀರಿನ  ಪಾವಿತ್ರ್ಯತೆ ಕಾಪಾಡಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯತನದಿಂದ ಕಾವೇರಿ ಮಲೀನವಾಗ್ತಿದ್ದಾಳೆಂದು ಹಾಗು ಸಾವಿರಾರು ಜಲಚರ ಪ್ರಾಣಿಗಳ  ಜೀವಕ್ಕೆ ಕಂಟಕವಾಗಿದ್ದಾರೆ.  ಹಾಗಾಗಿ ಸಂಭಂದ ಪಟ್ಟ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಚಾಮರಾಜನಗರ: ರಾಜಧನ ವಂಚಿಸಿ ಕೇರಳಕ್ಕೆ ಕರಿ, ಬಿಳಿ ಕಲ್ಲು, ಅಧಿಕಾರಿಗಳು ಶಾಮೀಲು?

ಇನ್ನೂ ಈ ಕಾವೇರಿ ನದಿ ಹಲವು ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಆಸರೆಯಾಗಿದೆ. ಪ್ರಮುಖವಾಗಿ ಮಂಡ್ಯ, ರಾಮನಗರ, ಬೆಂಗಳೂರು ಜಿಲ್ಲೆಗಳಿಗೆ ಈ ನೀರನ್ನೂ ಕುಡಿಯುವ ಉದ್ದೇಶದಿಂದ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಕಾವೇರಿ ಪಕ್ಕದ ಗ್ರಾಮಗಳ ಬಹುತೇಕ ಜನರು ಕುಡಿಯುವ ನೀರಿಗೆ ಹಾಗೂ ಸ್ನಾನಕ್ಕೆ ನದಿಯ ನೀರನ್ನೆ ಅವಲಂಭಿಸಿದಗದಾರೆ. ಇದನ್ನು ಕುಡಿಯುವುದರಿಂದ ರೋಗ ರಜಿನಗಳು ಬರುವ ಸಾಧ್ಯತೆ ಹೆಚ್ಚಿದೆ ಜೊತೆಗೆ  ಈಗಾಗ್ಲೇ ರಾಜ್ಯದಲ್ಲಿ ಮಳೆ ಕೊರತೆ ಎದುರಾಗಿ ಕುಡಿಯುವ ನೀರಿಗಾಗಿ ನೆರೆ ರಾಜ್ಯ ತಮಿಳುನಾಡು ಜೊತೆಗೆ ಫೈಟ್ ಮಾಡ್ತಿದ್ದೇವೆ.ಇದರ ಗಂಭೀರತೆ ಅರಿಯದ ನಗರಸಭೆ ಅಧಿಕಾರಿಗಳು ಕಲುಷಿತ ನೀರನ್ನು ಕಾವೇರಿ ನದಿಗೆ ಹರಿಬಿಟ್ಟು ಜಾಣ ಕಿವುಡುತನ ಪ್ರದರ್ಶಿಸುತ್ತಿದ್ದಾರೆ.ಅಲ್ಲದೇ ಸ್ಥಳೀಯವಾಗಿಯೂ ಕೂಡ ಜನರಲ್ಲಿ ಈ ನೀರಿನಿಂದ ಅನಾರೋಗ್ಯ ಸಂಭವಿಸಿದೆ.ಸದ್ಯ ಕಾವೇರಿ ಪಾತ್ರದಲ್ಲಿ ನೀರು ಹರಿಯುತ್ತಿರುವುದರಿಂದ ಅದು ಕಣ್ಣಿಗೆ ಕಾಣ್ತಿಲ್ಲ.ನೀರು ಹರಿಯೋದು ನಿಂತರೆ ಮಲಮೂತ್ರದ ನೀರು ನಿಂತಿರುತ್ತೆ.ಇದರಿಂದ ಜಲಚರ,ಜಾನುವಾರುಗಳಿಗೂ ತೊಂದರೆಯಾಗಿದೆ ಅಂತಾರೆ.

ಒಟ್ನಲ್ಲಿ ಕಾವೇರಿ ನದಿಯ ಪಾವಿತ್ರ್ಯತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಇದನ್ನು ಮರೆತು ನದಿಯ ಒಡಲಿಗೆ ಒಳಚರಂಡಿ, ಮಲಮೂತ್ರದ ಕೊಳಚೆ  ನೀರನ್ನು ಹರಿಯ ಬಿಡುವ ಮೂಲಕ ಶುದ್ಧ ಜೀವಜಲವನ್ನು ಹಾಳು ಮಾಡ್ತಿದ್ದಾರೆ. ಪವಿತ್ರ ಕಾವೇರಿ ನದಿಯನ್ನು ಅಶುಚಿತ್ವಗೊಳಿಸುವುದನ್ನು ನಿಲ್ಲಿಸಿ ಅಂತಾ ಅಧಿಕಾರಿಗಳ ಬಳಿ ಮನವಿ ಮಾಡ್ತಿದ್ದಾರೆ.

Follow Us:
Download App:
  • android
  • ios