ಬೆಂಗಳೂರು(ಸೆ. 10)  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತಾಧಿಕಾರಿಯಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹಿರಿಯ ಐಎಎಸ್ ಅಧಿಕಾರಿ ಗೌರವ ಗುಪ್ತಾ ನೇಮಕವಾಗಿದೆ.  ನೇಮಕದ ಕುರಿತು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಪಾಲಿಕೆ ಸದಸ್ಯರ 5 ವರ್ಷದ ಅಧಿಕಾರ ಅವಧಿ ಗುರುವಾರಕ್ಕೆ ಮುಕ್ತಾಯವಾಗಿದ್ದು, ಆಡಳಿತಾಧಿಕಾರಿಯನ್ನು ನೇಮಿಸಿದೆ. ಮೂಲಕ ರಾಜ್ಯ ಸರ್ಕಾರ ತಕ್ಷಣಕ್ಕೆ ಚುನಾವಣೆ ನಡೆಸುವುದಿಲ್ಲವೆಂಬ ಸಂದೇಶನ್ನು ನೀಡಿದೆ.

ಬೆಂಗಳೂರಿನ ಮಳೆ ಅನಾಹುತ; ಪೋಟೋಗಳೆ ಹೇಳುತ್ತವೆ

ಹೈಕೋರ್ಟ್ ಗೆ 198 ವಾರ್ಡಗಳ ಮರು ವಿಂಗಡಣೆ, ಚುನಾವಣೆ ನಡೆಸುವ ಸಂಬಂಧ ಸರ್ಕಾರ ಅಫಿಡೆವಿಟ್ ಸಲ್ಲಿಸಿದೆ.  ಗೌರವ್ ಗುಪ್ತ ಅವರು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಆಗಿದ್ದು, ಬಿಬಿಎಂಪಿಗೆ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಹೆಚ್ಚುವರಿಯಾಗಿ ಬಿಬಿಎಂಪಿಯ ಆಡಳಿತ ನಿರ್ವಹಿಸಲಿದ್ದಾರೆ.