ಮಂಗಳೂರು(ಎ.02): ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಬುಧವಾರ ಮಧ್ಯಾಹ್ನದ ವೇಳೆಗೆ 40 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ಉಷ್ಣಾಂಶ ದಾಖಲಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಬೆಳ್ತಂಗಡಿ, ಪುತ್ತೂರು ತಾಲೂ​ಕು, ಬಂಟ್ವಾಳ ತಾಲೂ​ಕಿನ ವಿಟ್ಲ ಮತ್ತಿ​ತ​ರಸ ಪ್ರದೇ​ಶ​ಗ​ಳ​ಲ್ಲಿ 41-42 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿರುವುದು ಹವಾಮಾನ ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಿದೆ.

ಲಾಕ್‌​ಡೌನ್‌ ನಡು​ವೆಯೂ ಅಕ್ರಮ ಗೋಸಾ​ಗಾ​ಟ!

ಆದರೆ ಮಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್‌ ಆಗಿದ್ದರೆ, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್‌ ಆಗಿತ್ತು. ಭಾರತೀಯ ಹವಾಮಾನ ಇಲಾಖೆಯ ವರದಿಯಂತೆ ಪಣಂಬೂರು ಪ್ರದೇಶದಲ್ಲಿ ಬುಧವಾರ ಗರಿಷ್ಠ 35.5 ಹಾಗೂ ಕನಿಷ್ಠ 26.8 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿತ್ತು.