ಮಂಗಳೂರು(ಎ.02): ಲಾಕ್‌ಡೌನ್‌ ನಡುವೆಯೂ ಕಳ್ಳತನ ಮಾಡಿದ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುವ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್‌ ಉಪನಿರೀಕ್ಷಕ ವಿನೋದ್‌ ಕೆ. ಎಸ್‌. ನೇತೃತ್ವದ ತಂಡ ದಾಳಿ ನಡೆಸಿ, ಮೂರು ಹಸುಗಳ ಸಹಿತ ವಾಹನ ವಶಪಡಿಸಿಕೊಂಡ ಘಟನೆ ಒಕ್ಕೆತ್ತೂರಿನಲ್ಲಿ ಬುಧವಾರ ನಡೆದಿದೆ.

ಒಕ್ಕೆತ್ತೂರು ಕಡೆಯಿಂದ ಕೋಡಪದವು ರಸ್ತೆ ಮೂಲಕ ಸಾಲೆತ್ತೂರು ಕಡೆಗೆ ಬೆಳಗ್ಗಿನ ಜಾವ ಪಿಕಪ್‌ ವಾಹನದಲ್ಲಿ ಒಂದು ಹಸು ಮತ್ತು ಎರಡು ಕರುಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ಕಾರ್ಯಾಚರಣೆ ಮಾಡಲಾಯಿತು.

1ರಿಂದ 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪಾಸ್: ಕೊರೋನಾದಿಂದ ಸಿಕ್ತು ಗ್ರೇಸ್

ವಾಹನದಲ್ಲಿದ್ದ ಮೂರು ಮಂದಿ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಬಂಟ್ವಾಳ ಡಿವೈಎಸ್‌ಪಿ ವೆಲೆಂಟನ್‌ ಡಿಸೋಜ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್‌ ಅವರ ನೇತೃತ್ವದಲ್ಲಿ ವಿಟ್ಲ ಪಿಎಸ್‌ಐ ವಿನೋದ್‌ ರೆಡ್ಡಿ ಅವರನ್ನೊಳಗೊಂಡ ಸಿಬ್ಬಂದಿ ಪ್ರಸನ್ನ, ಹೇಮರಾಜ್‌, ವಿನೋದ್‌, ಮಧು ಅವರ ತಂಡ ಕಾರ್ಯಾಚರಣೆ ನಡೆಸಿದೆ.