ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ವಿ. ವೆಂಕಟೇಶ್‌, ಗ್ರೇಡ್‌-1 ತಹಸೀಲ್ದಾರ್‌(ಆಡಳಿತಾಧಿಕಾರಿ ಕೆಆರ್‌ಐಡಿಎಲ್‌) ಗೆ ತುಮಕೂರಿನ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷ ಸಾದಾ ಶಿಕ್ಷೆ ಮತ್ತು ಒಂದೂವರೆ ಕೋಟಿ ದಂಡ ವಿಧಿಸಿ ತೀರ್ಪು ನೀಡಿದೆ.

ತುಮಕೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ವಿ. ವೆಂಕಟೇಶ್‌, ಗ್ರೇಡ್‌-1 ತಹಸೀಲ್ದಾರ್‌(ಆಡಳಿತಾಧಿಕಾರಿ ಕೆಆರ್‌ಐಡಿಎಲ್‌) ಗೆ ತುಮಕೂರಿನ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷ ಸಾದಾ ಶಿಕ್ಷೆ ಮತ್ತು ಒಂದೂವರೆ ಕೋಟಿ ದಂಡ ವಿಧಿಸಿ ತೀರ್ಪು ನೀಡಿದೆ.

ಆರೋಪಿ ವಿ.ವೆಂಕಟೇಶ್‌, ಆಡಳಿತಾಧಿಕಾರಿ(ತಹಸೀಲ್ದಾರ್‌ ಗ್ರೇಡ್‌-1) ಕರ್ನಾಟಕ ರಿನಿವಲಬಲ್‌ ಎನರ್ಜಿ ಡೆವಲಪ್‌ಮೆಂಟ್‌ ಲಿಮಿಟೆಡ್‌, ಪ್ಯಾಲೇಸ್‌ ರಸ್ತೆ, ಬೆಂಗಳೂರು ಇವರು ತಮ್ಮ ಸೇವಾ ಅವಧಿಯಲ್ಲಿ ಅಂದರೆ ದಿನಾಂಕ 1981 ಡಿಸೆಂಬರ್‌ 17 ರಿಂದ 2015ರ ಡಿ.29ವರೆಗೆ ಪರಿಶೀಲನಾ ಅವಧಿಯಲ್ಲಿ ತನ್ನ ಹಾಗೂ ತನ್ನ ಪತ್ನಿ, ಮಕ್ಕಳ ಹೆಸರಿನಲ್ಲಿ ಒಟ್ಟು ಆಸ್ತಿ 2,34,55,560 ಗಳಿಸಿದ್ದು, ತಮ್ಮ ಹಾಗೂ ತಮ್ಮ ಕುಟುಂಬದವರ ಹೆಸರಿನಲ್ಲಿ ಒಟ್ಟು 1,42,55,129 ರು.ಗಳ ಅಕ್ರಮ ಆಸ್ತಿಗಳಿಸಿ, ತಮ್ಮ ಆದಾಯಕ್ಕಿಂತ 72.16ರಷ್ಟುಹೆಚ್ಚಿನ ಆಸ್ತಿಯನ್ನು ಹೊಂದಿದ್ದ ಹಿನ್ನೆಲೆಯಲ್ಲಿ, ಈ ಕುರಿತು ತುಮಕೂರು ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.

ದುರ್ನಡತೆ ಎಸಗಿರುವುದು ದೃಢಪಟ್ಟಮೇರೆಗೆ ಅಂದಿನ ತನಿಖಾಧಿಕಾರಿಯಾದ ಎಸ್‌.ಎಂ.ಶಿವಕುಮಾರ್‌( ಮೃತಪಟ್ಟಿರುತ್ತಾರೆ) ಪೊಲೀಸ್‌ ಉಪಾಧೀಕ್ಷಕರು ಇವರು ಅಂತಿಮ ತನಿಖಾ ವರದಿಯನ್ನು ಸಲ್ಲಿಸಿದ್ದು, ನಂತರ ಸಿ.ಆರ್‌.ರವೀಶ್‌, ಪೊಲೀಸ್‌ ಉಪಾಧೀಕ್ಷಕರು ಪ್ರಕರಣದ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ತುಮಕೂರಿನ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಟಿ.ಪಿ. ರಾಮಲಿಂಗೇಗೌಡ ಇವರು ಆರೋಪಿಯನ್ನು ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಆರ್‌.ಪಿ.ಪ್ರಕಾಶ್‌, ಸ್ಪೆಷಲ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌, ತುಮಕೂರು ವಾದ ಮಂಡಿಸಿದ್ದರು.

ಸರ್ಕಾರಿ ಉದ್ಯೋಗಿಗಳ ಕನಿಷ್ಟ ವೇತನದಲ್ಲಿ ಎಷ್ಟು ಹೆಚ್ಚಳ

Business Desk:ಏಳನೇ ವೇತನ ಆಯೋಗದ ಶಿಫಾರಸ್ಸುಗಳ ಅನುಷ್ಠಾನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ ಹೆಚ್ಚಳ ಆರನೇ ವೇತನ ಆಯೋಗಕ್ಕೆ ಹೋಲಿಸಿದರೆ ಶೇ.14.3ರಷ್ಟಾಗಿದೆ. ಈ ಏರಿಕೆ ಆರನೇ ವೇತನ ಆಯೋಗದ (ಸಿಪಿಸಿ)ಹೆಚ್ಚಳಕ್ಕೆ ಹೋಲಿಸಿದರೆ ಕಡಿಮೆ. ಆರನೇ ವೇತನ ಆಯೋಗದಡಿಯಲ್ಲಿ ಸರ್ಕಾರಿ ನೌಕರರ ಕನಿಷ್ಠ ವೇತನ ಹೆಚ್ಚಳ ಐದನೇ ವೇತನ ಆಯೋಗಕ್ಕೆ ಹೋಲಿಸಿದರೆ ಶೇ.54ರಷ್ಟಿತ್ತು. ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಏಳನೇ ವೇತನ ಆಯೋಗದ ಪ್ರಯೋಜನಗಳ ಬಗ್ಗೆ ಲೋಕಸಭೆಯಲ್ಲಿ ಇತ್ತೀಚೆಗೆ ಲಿಖಿತ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ ಈ ಮಾಹಿತಿ ನೀಡಿದ್ದಾರೆ. ಇನ್ನು ಐದನೇ ವೇತನ ಆಯೋಗದಡಿಯಲ್ಲಿ ಕನಿಷ್ಠ ವೇತನ ಹೆಚ್ಚಳ ಅದಕ್ಕಿಂತ ಹಿಂದಿನ ಸಿಪಿಸಿಗೆ ಹೋಲಿಸಿದರೆ ಶೇ.31ರಷ್ಟು ಹೆಚ್ಚಳವಾಗಿತ್ತು ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಹಾಗೆಯೇ 2014ರಿಂದ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಘೋಷಣೆ ಮಾಡಿರುವ ವಿವಿಧ ತೆರಿಗೆ ಪ್ರಯೋಜನ ಕ್ರಮಗಳ ಬಗ್ಗೆಯೂ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಏನೆಲ್ಲ ತೆರಿಗೆ ಪ್ರಯೋಜನಗಳಿವೆ?
1.ಹಣಕಾಸು (ನಂ.2) ಕಾಯ್ದೆ 2014ರ ಅನ್ವಯ ವೈಯಕ್ತಿಕ ಮೂಲ ತೆರಿಗೆ ವಿನಾಯ್ತಿ ಮಿತಿಯನ್ನು 2ಲಕ್ಷ ರೂ.ನಿಂದ 2.5ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಕಡಿತ ಕ್ಲೇಮ್ ಮಿತಿಯನ್ನು ಕೂಡ 1ಲಕ್ಷ ರೂ.ನಿಂದ 1.5 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. 
2. 2.5ಲಕ್ಷ ರೂ.ನಿಂದ 5ಲಕ್ಷ ರೂ. ನಡುವೆ ಆದಾಯ ಹೊಂದಿರುವ ವ್ಯಕ್ತಿಗಳಿಗೆ ವಿಧಿಸುವ ಆದಾಯ ತೆರಿಗೆಯನ್ನು ಹಣಕಾಸು ಕಾಯ್ದೆ-2017ರ ಅನ್ವಯ ಶೇ.10ರಿಂದ ಶೇ.5ಕ್ಕೆ ಇಳಿಕೆ ಮಾಡಲಾಗಿದೆ.
3.ವಿಡ್ ಹಣಕಾಸು ಕಾಯ್ದೆ 2018ರ ಅನ್ವಯ ವೇತನ ಪಡೆಯುವ ತೆರಿಗೆದಾರರು ಹಾಗೂ ಪಿಂಚಣಿದಾರರಿಗೆ 40,000ರೂ. ಸ್ಟ್ಯಾಂಡರ್ಡ್ ತೆರಿಗೆ ಕಡಿತವನ್ನು ಪರಿಚಯಿಸಲಾಗಿದೆ. ವಿಡ್ ಹಣಕಾಸು ಕಾಯ್ದೆ 2019ರಲ್ಲಿ ಇದನ್ನು ಮತ್ತೆ 50,000ರೂ.ಗೆ ಏರಿಕೆ ಮಾಡಲಾಗಿದೆ.

ಉದ್ಯೋಗಿಗಳಿಗೆ ಶುಭ ಸುದ್ದಿ; ಈ ವರ್ಷ ವೇತನದಲ್ಲಿ ಶೇ.10.2ರಷ್ಟು ಏರಿಕೆ ನಿರೀಕ್ಷೆ

4.ಹಣಕಾಸು ಕಾಯ್ದೆ 2019 ಸೆಕ್ಷನ್ 87ಎ ಅಡಿಯಲ್ಲಿ ತೆರಿಗೆಗೊಳಪಡುವ 5ಲಕ್ಷ ರೂ. ತನಕದ ಆದಾಯ ಹೊಂದಿರುವ ವ್ಯಕ್ತಿಗಳಿಗೆ ಪೂರ್ಣ ಪ್ರಮಾಣದಲ್ಲಿ ತೆರಿಗೆ ವಿನಾಯ್ತಿ ನೀಡಲು ಕೂಡ ಅವಕಾಶ ಕಲ್ಪಿಸಿದೆ.
5.ಪಿಂಚಣಿ ಪಡೆಯುತ್ತಿರುವ ಹಿರಿಯ ನಾಗರಿಕರೂ ಸೇರಿದಂತೆ ವೃದ್ಧಾಪ್ಯದಲ್ಲಿರುವ ಹಿರಿಯರಿಗೆ ಹಣಕಾಸು ಕಾಯ್ದೆ 2018 ಅನೇಕ ಉತ್ತೇಜಕ ಸೌಲಭ್ಯಗಳನ್ನು ನೀಡಿದೆ. ಕಾಯ್ದೆಯ ಸೆಕ್ಷನ್ 80ಡಿಡಿಬಿ ಅಡಿಯಲ್ಲಿ ನಿರ್ದಿಷ್ಟ ಗಂಭೀರ ಕಾಯಿಲೆಗಳಿಗೆ ವೈದ್ಯಕೀಯ ವೆಚ್ಚಗಳ ಮೇಲಿನ ತೆರಿಗೆ ಕಡಿತದ ಮಿತಿಯನ್ನು ಹಿರಿಯ ನಾಗರಿಕರಿಗೆ ಹಾಗೂ ಅತೀ ಹಿರಿಯ ನಾಗರಿಕರಿಗೆ ಕ್ರಮವಾಗಿ 60,000 ರೂ.ಹಾಗೂ 80,000ರೂ.ನಿಂದ 1ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು ಹಿರಿಯ ನಾಗರಿಕರಿಗೆ ಕೋ-ಆಪರೇಟಿವ್ ಬ್ಯಾಂಕ್ ಗಳು, ಅಂಚೆ ಕಚೇರಿಗಳು ಹಾಗೂ ಬ್ಯಾಂಕ್ ಗಳಲ್ಲಿನ ಠೇವಣಿಗಳ ಮೇಲಿನ ಬಡ್ಡಿ ಆದಾಯಕ್ಕೆ 50,000ರೂ. ವಿನಾಯ್ತಿ ನೀಡಲಾಗಿದೆ. ಇನ್ನು ಹಿರಿಯ ನಾಗರಿಕರಿಗೆ ಬಡ್ಡಿ ಆದಾಯಕ್ಕೆ ಮೂಲದಲ್ಲಿ ತೆರಿಗೆ ವಿನಾಯ್ತಿ ಮಿತಿಯನ್ನು 10,000ರೂ. ನಿಂದ 50,000 ರೂ.ಗೆ ಏರಿಕೆ ಮಾಡಲಾಗಿದೆ.