Asianet Suvarna News Asianet Suvarna News

ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ತಂತ್ರಜ್ಞಾನ, ಸಾಮರ್ಥ್ಯಾಧಾರಿತ ತರಬೇತಿ

ಡಯಟ್ ಮಧುಗಿರಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಪ್ರೌಢಶಾಲಾ ಬಡ್ತಿ ಮುಖ್ಯ ಶಿಕ್ಷಕರ ಸಂಘ, ಜಿಲ್ಲಾ ಘಟಕದ ವತಿಯಿಂದ ತಂತ್ರಜ್ಞಾನ, ಸಾಮರ್ಥ್ಯಾಧಾರಿತ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Technology  competency based training for high school head teachers snr
Author
First Published Oct 7, 2023, 8:34 AM IST

ಕೊರಟಗೆರೆ: ಡಯಟ್ ಮಧುಗಿರಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಪ್ರೌಢಶಾಲಾ ಬಡ್ತಿ ಮುಖ್ಯ ಶಿಕ್ಷಕರ ಸಂಘ, ಜಿಲ್ಲಾ ಘಟಕದ ವತಿಯಿಂದ ತಂತ್ರಜ್ಞಾನ, ಸಾಮರ್ಥ್ಯಾಧಾರಿತ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರಧಾನಮಂತ್ರಿ ಪೋಷಣ್ ಅಭಿಯಾನದ ರಾಜ್ಯ ಸಹನಿರ್ದೇಶಕಿ ಅನಿತಾ ನಜಾರೆ ತರಬೇತಿ ಉದ್ಘಾಟಿಸಿದರು. ಡಯಟ್ ಪ್ರಾಂಶುಪಾಲ ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್. ಸಿ.ವಿ, ಜಿಲ್ಲಾ ಅಕ್ಷರದಾಸೋಹ ಅಧಿಕಾರಿಗಳಾದ ಸುಧಾಕರ್, ಸಹಾಯಕ ನಿರ್ದೇಶಕ. ರಘು, ಬಡ್ತಿ ಮುಖ್ಯ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ರಿಜ್ವಾನ್ 0 ಜಿಲ್ಲಾ ಅದ್ಯಕ್ಷ ಮಂಜುನಾಥ್. ಹೆಚ್, ಉಪಾಧ್ಯಕ್ಷ ದಿನೇಶ್, ವೆಂಕಟೇಶುಲು, ಹೇಮಲತ, ಪದ್ಮ.ಯು, ಕೊರಟಗೆರೆ ತಾ.ಪದಾಧಿಕಾರಿಗಳಾದ ಶಿವಸ್ವಾಮಿ, ರಾಮಯ್ಯ, ಗಿರಿರಾಜು, .ನರಸಿಂಹರಾಜು, ಆನಂದ್ ಕುಮಾರ್, ಲಾಲಾ ನಾಯ್ಕ್ ಉಪಸ್ಥಿತರಿದ್ದರು.

ಕೊರಟಗೆರೆ ಮತ್ತು ಪಾವಗಡ ತಾಲೂಕಿನ ಪ್ರೌಢಶಾಲಾ ಮುಖ್ಯ ಶಿಕ್ಷಕರು ತರಬೇತಿಗೆ ಹಾಜರಾಗಿದ್ದರು. ಜಿಲ್ಲಾ ಖಜಾನೆಯ ಸುಧಾಕರ್, ಮಧುಗಿರಿ ಡಯಟ್ ನ ಉಪನ್ಯಾಸಕರಾದ ದಿನೇಶ್, ಅನ್ನಪೂರ್ಣ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದರು.

ಅವಧಿ ಮೀರಿದ ಮಾತ್ರೆ ಹಾಕಿ ಶಿಕ್ಷಕಿ ಅಸ್ವಸ್ಥ

ಮಂಗಳೂರು(ಅ.07):  ಗುರು ದೇವೋ ಭವ ಅಂತಾರೆ. ಆದರೆ ಇಲ್ಲಿ ಮಾತ್ರ ಗುರುಗಳೇ ದೇವರ ಪಾದ ಸೇರೋದು ದೇವರ ದಯೆಯಿಂದ ಸ್ವಲ್ಪದರಲ್ಲೇ ತಪ್ಪಿ ಹೋಗಿದೆ. ವಿದ್ಯೆ ಕಲಿಸಿದ ಶಿಕ್ಷಕಿಯ ನೀರಿನ ಬಾಟಲ್ ಗೆ ವಿದ್ಯಾರ್ಥಿಗಳು ಅವಧಿ ಮೀರಿದ ಮಾತ್ರೆ ಹಾಕಿದ ಪರಿಣಾಮ ಶಿಕ್ಷಕಿ ಅಸ್ವಸ್ಥಗೊಂಡ ಘಟನೆ ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದಿದೆ.

ಗಣಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಾರೆ ಅನ್ನೋದನ್ನೇ ನೆಪವಾಗಿಟ್ಟುಕೊಂಡ ವಿದ್ಯಾರ್ಥಿನಿಯರಿಬ್ಬರು ಶಿಕ್ಷಕಿಯ ನೀರಿನ ಬಾಟಲ್ ಗೆ ಅವಧಿ ಮೀರಿದ ಮಾತ್ರೆಗಳನ್ನು ಹಾಕಿದ್ದಾರೆ. ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಈ ಘಟನೆ ನಡೆದಿದ್ದು, ಇಡೀ ಶಿಕ್ಷಕ ಸಮುದಾಯವನ್ನೇ ಬೆಚ್ಚಿ ಬೀಳಿಸಿದೆ. ಗಣಿತ ವಿಷಯದಲ್ಲಿ ಒಂದು ಅಂಕ ಕಡಿಮೆ ಕೊಟ್ಟಿದ್ದ ಶಿಕ್ಷಕಿ ವಿರುದ್ದ ವಿದ್ಯಾರ್ಥಿನಿಯೊಬ್ಬಳಿಗೆ ಅಸಮಾಧಾನವಿದ್ದು, ಸರಿ ಉತ್ತರಕ್ಕೆ ಮಾರ್ಕ್ಸ್ ನೀಡಿಲ್ಲ ಅಂತಾ ಕೋಪ ಇತ್ತಂತೆ. ಹೀಗಾಗಿ ಮನೆಯಲ್ಲಿದ್ದ ಅವಧಿ ಮೀರಿದ ಮಾತ್ರೆಯೊಂದನ್ನ ತಂದು ಮತ್ತೊಬ್ಬ ವಿದ್ಯಾರ್ಥಿನಿ ಜೊತೆ ಸೇರಿಕೊಂಡು ಶಿಕ್ಷಕಿಯ ನೀರಿನ ಬಾಟಲಿಗೆ ಹಾಕಿದ್ದಾರೆ. ಇದಾದ ಬಳಿಕ ಆ ಗಣಿತ ಶಿಕ್ಷಕಿ ಮತ್ತು ಇನ್ನೊಬ್ಬ ಸಹ ಶಿಕ್ಷಕಿ ನೀರು ಸೇವನೆ ಮಾಡಿದ್ದಾರೆ. ಇದಾದ ಬಳಿಕ ಓರ್ವ ಶಿಕ್ಷಕಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದು, ಮುಖದಲ್ಲಿ ಊತ ಕಾಣಿಸಿಕೊಂಡಿದೆ ಎನ್ನಲಾಗಿದೆ. ಅಲ್ಲದೇ ಮತ್ತೋರ್ವ ಶಿಕ್ಷಕಿ ಕೂಡ ಅಸ್ವಸ್ಥಗೊಂಡಂತೆ ಕಂಡು ಬಂದಿದ್ದಾರೆ. ಹೀಗಾಗಿ ಕೊನೆಯದಾಗಿ ನೀರು ಕುಡಿದ ಬಾಟಲ್ ಪರೀಕ್ಷಿಸಿದಾಗ ಅನುಮಾನ ಬಂದಿದ್ದು, ಹೀಗಾಗಿ ಶಾಲೆಯ ಸಿಸಿ ಟಿವಿ ಕ್ಯಾಮಾರ ಪರಿಶೀಲನೆ ನಡೆಸಿದ್ದಾರೆ. 

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ಪೂರ್ತಿ ಅದಾನಿ ವಶಕ್ಕೆ!

ಈ ವೇಳೆ 6 ನೇ ತರಗತಿ ವಿದ್ಯಾರ್ಥಿನಿಯರಿಬ್ಬರು ಬಾಟಲ್ ಗೆ ಮಾತ್ರೆ ಹಾಕುತ್ತಿರೋ ದೃಶ್ಯ ಕಂಡು ಬಂದಿದೆ.‌ ಈ ಅಟಾಟೋಪ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ಬಳಿಕ ವಿದ್ಯಾರ್ಥಿನಿಯರ ಕರೆದು ವಿಚಾರಿಸಿದಾಗ ತಪ್ಪು ಒಪ್ಪಿಕೊಂಡಿದ್ದಾರೆ. 

ಸದ್ಯ ವಿದ್ಯಾರ್ಥಿನಿಯರ ಭವಿಷ್ಯದ ದೃಷ್ಟಿಯಿಂದ ಪೊಲೀಸ್ ದೂರು ಕೊಡದೇ ಇದ್ದು, ಸದ್ಯ ಅವರ ಪೋಷಕರನ್ನ ಕರೆಸಿ ಎಚ್ಚರಿಕೆ ನೀಡಲಾಗಿದೆ. ಆದರೆ‌ ಕೇವಲ ಅಂಕದ ಕಾರಣಕ್ಕೆ ಈ ಮಟ್ಟಿನ ದ್ವೇಷ ಬೆಳೆಸಿಕೊಂಡ ಮಕ್ಕಳ ಮಾನಸಿಕತೆಯ ಬಗ್ಗೆ ಶಿಕ್ಷಕ ವಲಯದಲ್ಲಿ ದಿಗ್ಭ್ರಮೆ ಮೂಡಿದೆ.

Follow Us:
Download App:
  • android
  • ios