Asianet Suvarna News Asianet Suvarna News

ಬೆಂಗಳೂರು: ಪ್ರಯಾಣಿಕರೇ ಗಮನಿಸಿ, ಟರ್ಮಿನಲ್‌-2 ರಿಂದ ವಿಮಾನ ಹಾರಾಟ ಮುಂದಕ್ಕೆ

ತಾಂತ್ರಿಕ ಸಮಸ್ಯೆ ಎದುರಾಗಿರುವ ಕಾರಣದಿಂದಾಗಿ ಗುರುವಾರದಿಂದ ಟರ್ಮಿನಲ್‌-2ರಲ್ಲಿ ಅಂತಾರಾಷ್ಟ್ರೀಯ ವಿಮಾನ ಸೇವೆ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಹಿಂದಿನಂತೆಯೇ ಟರ್ಮಿನಲ್‌-1ರಿಂದಲೇ ಎಲ್ಲ ವಿಮಾನ ಕಾರ್ಯಾಚರಣೆ ಮಾಡಲಾಗುವುದು. ಪ್ರಯಾಣಿಕರು ವಿಮಾನ ಸೇವೆಯ ಮಾಹಿತಿಯನ್ನು ವಿಮಾನಯಾನ ಸಂಸ್ಥೆಗಳ ಮೂಲಕ ಪಡೆಯಬಹುದು. 

Technical Problem to Start International Flight Service from Terminal-2 in Bengaluru Airport grg
Author
First Published Aug 31, 2023, 8:59 AM IST

ಬೆಂಗಳೂರು(ಆ.31): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2ರಿಂದ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭಿಸಲು ತಾಂತ್ರಿಕ ಸಮಸ್ಯೆ ಎದುರಾಗಿದೆ. ಹೀಗಾಗಿ ಟರ್ಮಿನಲ್‌-2ರಿಂದ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆ ಮತ್ತಷ್ಟು ವಿಳಂಬವಾಗಲಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-1ರ ಒತ್ತಡ ಕಡಿಮೆ ಮಾಡಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮ (ಬಿಐಎಎಲ್‌) ಅಂತಾರಾಷ್ಟ್ರೀಯ ವಿಮಾನಗಳ ಸೇವೆಯನ್ನು ಸಂಪೂರ್ಣವಾಗಿ ಟರ್ಮಿನಲ್‌-2ಕ್ಕೆ ಸ್ಥಳಾಂತರಿಸಲು ನಿರ್ಧರಿಸಿತ್ತು. ಅಲ್ಲದೆ, ಗುರುವಾರದಿಂದ ಎಲ್ಲ ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಟರ್ಮಿನಲ್‌-2ರಿಂದ ಕಾರ್ಯಾಚರಣೆಗೊಳ್ಳಲಿದ್ದು, ಉಳಿದಂತೆ ದೇಶೀಯ ಸೇವೆಗಳನ್ನು ಎರಡೂ ಟರ್ಮಿನಲ್‌ಗೆ ಹಂಚಿಕೆ ಮಾಡಲಾಗುತ್ತದೆ ಎಂದು ಬಿಐಎಎಲ್‌ ತಿಳಿಸಿತ್ತು.

Bengaluru Airport: ಏಷ್ಯಾದ ಮೊದಲ ಗಾರ್ಡನ್‌ ಟರ್ಮಿನಲ್‌ನ ವಿಶೇಷತೆ ಬಲ್ಲೀರಾ?

ಆದರೆ, ತಾಂತ್ರಿಕ ಸಮಸ್ಯೆ ಎದುರಾಗಿರುವ ಕಾರಣದಿಂದಾಗಿ ಗುರುವಾರದಿಂದ ಟರ್ಮಿನಲ್‌-2ರಲ್ಲಿ ಅಂತಾರಾಷ್ಟ್ರೀಯ ವಿಮಾನ ಸೇವೆ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಹಿಂದಿನಂತೆಯೇ ಟರ್ಮಿನಲ್‌-1ರಿಂದಲೇ ಎಲ್ಲ ವಿಮಾನ ಕಾರ್ಯಾಚರಣೆ ಮಾಡಲಾಗುವುದು. ಪ್ರಯಾಣಿಕರು ವಿಮಾನ ಸೇವೆಯ ಮಾಹಿತಿಯನ್ನು ವಿಮಾನಯಾನ ಸಂಸ್ಥೆಗಳ ಮೂಲಕ ಪಡೆಯಬಹುದು. ಟರ್ಮಿನಲ್‌-2ರಿಂದ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆ ಆರಂಭಿಸುವ ದಿನಾಂಕವನ್ನು ಗುರುವಾರ ಪ್ರಕಟಿಸುವುದಾಗಿ ಹೇಳಲಾಗಿದೆ ಎಂದು ಬಿಐಎಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

Follow Us:
Download App:
  • android
  • ios